AP Exit Polls: ಆಂಧ್ರಪ್ರದೇಶದಲ್ಲಿ ಯಾರು ಹೊಸ ಸರ್ಕಾರ ರಚಿಸುತ್ತಾರೆ? ಟಿಡಿಪಿ-ಬಿಜೆಪಿ ಮೈತ್ರಿ ಗೆಲ್ಲುತ್ತಾ? ಎಕ್ಸಿಟ್ ಪೋಲ್‌ಗಳು ಏನಂತಾವೆ?
Andhra Pradesh Assembly Elections exit polls: ದೇಶಾದ್ಯಂತ ಚುನಾವಣಾ ಕಾವು ಮುಗಿದಿದೆ. ಇತ್ತೀಚಿನ ಎಕ್ಸಿಟ್ ಪೋಲ್ ಫಲಿತಾಂಶಗಳು ಬಂದಿವೆ. ಮೇ 13 ರಂದು ನಡೆದ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ 82.37 ರಷ್ಟು ಮತದಾನವಾಗಿದೆ, ಇದು ಎಪಿಯಲ್ಲಿ ದಾಖಲಾದ ಅತಿ ಹೆಚ್ಚು. ಆಂಧ್ರದಲ್ಲಿ 175 ವಿಧಾನಸಭಾ ಸ್ಥಾನಗಳಿದ್ದು, ಬಹುಮತಕ್ಕೆ 88 ಸ್ಥಾನ ಗೆಲ್ಲುವ ಅವಶ್ಯಕತೆ ಇದೆ. ಎಕ್ಸಿಟ್ ಪೋಲ್‌ಗಳು ಗೊಂದಲ ಹೆಚ್ಚಿಸುತ್ತಿವೆ. ಯಾವ್ಯಾವ ಸಮೀಕ್ಷೆಗಳು.. ಯಾವ ಪಕ್ಷಕ್ಕೆ ಎಷ್ಟು ಸೀಟು ಕೊಟ್ಟಿದ್ದಾರೆ ನೋಡೋಣ...
ವಿಜಯವಾಡ, ಜೂನ್ 2: ಲೋಕಸಭೆ ಚುನಾವಣೆಯ ಕೊನೆಯ ಹಂತ ಮುಗಿದಿದೆ. ದೇಶಾದ್ಯಂತ ಎಕ್ಸಿಟ್ ಪೋಲ್‌ಗಳು ನಡೆದಿದ್ದು ಅದರ ಫಲಿತಾಂಶ ನಿನ್ನೆ ಶನಿವಾರ ಸಂಜೆ 6 ಗಂಟೆ ಬಳಿಕ ಬಂದಿವೆ. ಆಂಧ್ರಪ್ರದೇಶ, ಒಡಿಶಾ, ಅರುಣಾಚಲಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆಗಳಿಗೂ ಲೋಕಸಭೆ ಚುನಾವಣೆ ದಿನಗಳಲ್ಲೇ ಮತದಾನವಾಗಿದೆ. ಅರುಣಾಚಲ ಮತ್ತು ಸಿಕ್ಕಿಂನಲ್ಲಿ ಇಂದೇ ಮತ ಎಣಿಕೆ ನಡೆಯುತ್ತಿದೆ. ಆಂಧ್ರ ಮತ್ತು ಒಡಿಶಾದಲ್ಲಿ ಜೂನ್ 4ರಂದು ಮತ ಎಣಿಕೆ ಆಗುತ್ತದೆ. ಆಂಧ್ರಪ್ರದೇಶದ 175 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 2,387 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ವಿವಿಧ ಮಾಧ್ಯಮ ಸಂಸ್ಥೆಗಳು ಮತ್ತು ಸಮೀಕ್ಷಾ ಸಂಸ್ಥೆಗಳು ಮತಗಟ್ಟೆ ಬಳಿ (Andhra Pradesh Exit Polls) ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವುಗಳನ್ನು ವಿಶ್ಲೇಷಿಸಿ ಆಂಧ್ರಪ್ರದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
ಈ ಎಲ್ಲಾ ಸಮೀಕ್ಷೆಗಳು ವೈರುದ್ಧ್ಯಗಳನ್ನು ಸೂಚಿಸುತ್ತಿವೆ. ಕೆಲ ಸಮೀಕ್ಷೆಗಳು ಆಡಳಿತಾರೂಢ ವೈಸಿಪಿ ಪಕ್ಷದ ಗೆಲುವನ್ನು ಸೂಚಿಸುತ್ತಿವೆ. ಇನ್ನೂ ಕೆಲ ಸಮೀಕ್ಷೆಗಳು ಟಿಡಿಪಿ, ಜನಸೇನಾ, ಬಿಜೆಪಿ ಇರುವ ಎನ್ಡಿಎ ಮೈತ್ರಿಕೂಟ ಗೆಲ್ಲಬಹುದು ಎಂದು ಅಂದಾಜಿಸಿವೆ. ಹೀಗಾಗಿ, ವಾಸ್ತವ ಫಲಿತಾಂಶ ಹೇಗಿರಬಹುದು ಎಂಬ ಸುಳಿವು ಈ ಸಮೀಕ್ಷೆಗಳಿಂದ ಗೊತ್ತಾಗುತ್ತಿಲ್ಲ.
ಆಂಧ್ರಪ್ರದೇಶ ವಿಧಾನಸಭೆ
- ಒಟ್ಟು ಸ್ಥಾನ: 175
- ಬಹುಮತಕ್ಕೆ: 88 ಸ್ಥಾನ
ಔರಾ ಮಸ್ತಾನ್: ವೈಸಿಪಿ ಗೆಲುವು
- ವೈಸಿಪಿ: 94-104
- ಎನ್ಡಿಎ: 71 – 81
ಇದನ್ನೂ ಓದಿ: Karnataka Exit Poll Results: ಬಹುತೇಕ ಎಕ್ಸಿಟ್ ಪೋಲ್‌ಗಳು ಹೇಳೋದು ಒಂದೇ; ಕರ್ನಾಟಕದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ
ಪೀಪಲ್ಸ್ ಪಲ್ಸ್ ಸಮೀಕ್ಷೆ: ಎನ್ಡಿಎ ಗೆಲುವು
- ಟಿಡಿಪಿ: 95-110
- ಜನಸೇನೆ: 14-20
- ಬಿಜೆಪಿ: 2-5 ಸ್ಥಾನ
- ವೈಸಿಪಿ: 45-60 ಸ್ಥಾನ
ಸ್ಮಾರ್ಟ್ ಪೋಲ್: ಎನ್ಡಿಎ ಗೆಲುವು
- ಎನ್ಡಿಎ: 93 (+/- 8 )
- ವೈಸಿಪಿ: 82 (+/- 8 )
ರೇಸ್ ಸಮೀಕ್ಷೆ: ವೈಸಿಪಿಗೆ ಗೆಲುವು
- ವೈಸಿಪಿ: 122 (+/- 5 )
- ಎನ್ಡಿಎ: 53 (+/- 5 )
ಸ್ವಯಂ ಸಾಕ್ಷಿ: ವೈಸಿಪಿಗೆ ಗೆಲುವು
- ವೈಸಿಪಿ : 98-116
- ಟಿಡಿಪಿ ಮೈತ್ರಿ: 59 – 77
ಪಾರ್ಥ ಸಮೀಕ್ಷೆ: ವೈಸಿಪಿಗೆ ಗೆಲುವು
- ವೈಸಿಪಿ : 110 – 120
- ಎನ್ಡಿಎ: 55-65
ಚಾಣಕ್ಯ ಸಮೀಕ್ಷೆ: ಎನ್ಡಿಎ ಗೆಲುವು
- ಎನ್ಡಿಎ: 114-125
- ವೈಸಿಪಿ : 39-49
- ಇತರೆ: 0-1
ಪಿಟಿಎಸ್ ಗ್ರೂಪ್: ಎನ್ಡಿಎ ಗೆಲುವು
- ವೈಸಿಪಿ: 44 – 47
- ಎನ್ಡಿಎ: 128-131
ಇದನ್ನೂ ಓದಿ: TV9 Bharatvarsh Exit Poll: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗಿಂತ ಬಿಜೆಪಿಯೇ ಮೇಲುಗೈ, ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ?
ಜನಮತ ಸಮೀಕ್ಷೆ: ವೈಸಿಪಿಗೆ ಗೆಲುವು
- ವೈಸಿಪಿ 95-103
- ಟಿಡಿಪಿ 67-75
ರಾಜಕೀಯ ಪ್ರಯೋಗಾಲಯ ಎಕ್ಸಿಟ್ ಪೋಲ್: ವೈಸಿಪಿಗೆ ಗೆಲುವು
- ವೈಸಿಪಿ: 108(+/-5)
- ಎನ್ಡಿಎ: 67(+/-5)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ