15,000 ಕೋಟಿ ರೂ ಮೌಲ್ಯದ B.R. ಶೆಟ್ಟಿಯ ಫಿನಾಬ್ಲರ್ ಕಂಪನಿ ಕೇವಲ 75 ರೂಪಾಯಿಗೆ ಸೇಲ್!

| Updated By: ಸಾಧು ಶ್ರೀನಾಥ್​

Updated on: Dec 19, 2020 | 12:00 PM

UAEಯಲ್ಲಿ ತನ್ನ ವ್ಯವಹಾರ ಸಾಮ್ರಾಜ್ಯ ಸ್ಥಾಪಿಸಿರುವ ಅನಿವಾಸಿ ಭಾರತೀಯ ಉದ್ಯಮಿ B.R.ಶೆಟ್ಟಿಗೆ ಸೇರಿದ ಫಿನಾಬ್ಲರ್ ಪಬ್ಲಿಕ್ ಲಿಮಿಟೆಡ್ ಕಂಪನಿ ಮಾರಾಟ ಮಾಡಲಾಗಿದೆ.

15,000 ಕೋಟಿ ರೂ ಮೌಲ್ಯದ B.R. ಶೆಟ್ಟಿಯ ಫಿನಾಬ್ಲರ್ ಕಂಪನಿ ಕೇವಲ 75 ರೂಪಾಯಿಗೆ ಸೇಲ್!
B.R.ಶೆಟ್ಟಿ
Follow us on

ದೆಹಲಿ: UAEಯಲ್ಲಿ ತನ್ನ ವ್ಯವಹಾರ ಸಾಮ್ರಾಜ್ಯ ಸ್ಥಾಪಿಸಿರುವ ಅನಿವಾಸಿ ಭಾರತೀಯ ಉದ್ಯಮಿ B.R.ಶೆಟ್ಟಿಗೆ ಸೇರಿದ ಫಿನಾಬ್ಲರ್ ಪಬ್ಲಿಕ್ ಲಿಮಿಟೆಡ್ ಕಂಪನಿ ಮಾರಾಟ ಮಾಡಲಾಗಿದೆ. 15 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತಿದ್ದ ಕಂಪನಿ ಈಗ 75 ರೂಪಾಯಿಗೆ ಮಾರಾಟವಾಗಿದೆ.

ಕಂಪನಿಯನ್ನು ಇಸ್ರೇಲ್, UAE ಒಕ್ಕೂಟಕ್ಕೆ ಕೇವಲ 1 ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಈ ಕಂಪನಿ ಮಾರುಕಟ್ಟೆ ಮೌಲ್ಯ 2 ಬಿಲಿಯನ್ ಡಾಲರ್‌ನಷ್ಟಿತ್ತು. ಈಗ ಇದರ ಮಾರುಕಟ್ಟೆ ಮೌಲ್ಯ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯದಿರಲಿ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಂಪನಿಯನ್ನ ಲಂಡನ್ ಷೇರುಪೇಟೆ ಅಮಾನತಿನಲ್ಲಿಟ್ಟಿದೆ.

B.R.ಶೆಟ್ಟಿ 8 ಮಿಲಿಯನ್ ಡಾಲರ್​ಗಿಂತ ಅಧಿಕ ಸಾಲವನ್ನು ಹೊಂದಿದ್ದು ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲಿಗೆ ಆದೇಶಿಸುವಂತೆ ಬ್ಯಾಂಕ್ ಕೋರ್ಟ್​ನ ಮೊರೆ ಹೋಗಿತ್ತು. ಕಳೆದ ಜುಲೈನಲ್ಲಿ NMC ಹೆಲ್ತ್ ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರಿಗೆ ಸೇರಿದ್ದ ಜಗತ್ತಿನ ನಾನಾ ಕಡೆಗಳಲ್ಲಿ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ದುಬೈ ನ್ಯಾಯಾಲಯ ಆದೇಶಿಸಿತ್ತು.

ಕುಸಿಯುತ್ತಿದೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಷೇರು ಮೌಲ್ಯ: ಗ್ರಾಹಕರ ಮುಂದಿರುವ ಆಯ್ಕೆಗಳೇನು?

Published On - 9:26 am, Sat, 19 December 20