AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೋಟ್ಯಧಿಪತಿ! ಭಾರತದಲ್ಲಿ ಕೊವಿಡ್​ನ ಕೋಟಿ ಹೆಜ್ಜೆಗಳು​.. ಆತಂಕಕ್ಕಿಂತ ಅಚ್ಚರಿಯೇ ಜಾಸ್ತಿ!

ಕೊರೊನಾ ಸೋಂಕಿತರ ಸಂಖ್ಯೆ ಕೋಟಿ ದಾಟಿರುವುದು ಆತಂಕ ಮೂಡಿಸುವಂತೆ ಕಂಡರೂ, ಭಾರತದ ಪಾಲಿಗೆ ಸಮಾಧಾನ ಮೂಡಿಸುವ ಹಲವು ಸಂಗತಿಗಳು ಇದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಕಡಿಮೆ. ಅತಿ ಹೆಚ್ಚು ಕೊರೊನಾ ಹೊಡೆತಕ್ಕೆ ಸಿಕ್ಕ ವಿಶ್ವದ 20 ದೇಶಗಳ ಪೈಕಿ ಸೋಂಕಿತರ ಸಾವಿನ ಪ್ರಮಾಣದಲ್ಲಿ ಭಾರತ 19 ನೇ ಸ್ಥಾನದಲ್ಲಿದೆ.

ಕೊರೊನಾ ಕೋಟ್ಯಧಿಪತಿ! ಭಾರತದಲ್ಲಿ ಕೊವಿಡ್​ನ ಕೋಟಿ ಹೆಜ್ಜೆಗಳು​.. ಆತಂಕಕ್ಕಿಂತ ಅಚ್ಚರಿಯೇ ಜಾಸ್ತಿ!
ಪ್ರಾತಿನಿಧಿಕ ಚಿತ್ರ
Follow us
Skanda
|

Updated on:Dec 19, 2020 | 12:15 PM

ದೆಹಲಿ: ಕೊರೊನಾ ಶುರುವಾದ ಮೇಲೆ ಜಗತ್ತು ಅನುಭವಿಸಿದ ನೋವು, ನಷ್ಟಕ್ಕೆ ಲೆಕ್ಕವಿಲ್ಲ.. ಭಾರತವಂತೂ ಕೊವಿಡ್ ಹೊಡೆತಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಬದುಕಿನ ಶೈಲಿ ಬದಲಾಗಿ ಹೋಗಿದೆ. ದೇಶ ತೀವ್ರವಾದ ಆರ್ಥಿಕ ನಷ್ಟ ಅನುಭವಿಸುತ್ತಿದೆ. ಆದರೆ, ಕೊರೊನಾ ಮಾತ್ರ ಭಾರತದಲ್ಲೀಗ ಕೋಟ್ಯಧಿಪತಿ!

ವಿಶ್ವದಲ್ಲಿ ಭಾರತಕ್ಕೆ ಎರಡನೆಯ ಸ್ಥಾನ ನಿನ್ನೆ 27,022 ಹೊಸ ಕೊವಿಡ್ ಪ್ರಕರಣ ದಾಖಲಾಗಿವೆ. ಈ ಮೂಲಕ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1 ಕೋಟಿಯ ಗಡಿ ದಾಟಿದೆ. ವಿಶ್ವ ಮಟ್ಟದಲ್ಲಿ ಅಮೆರಿಕಾದ ನಂತರ ಕೋಟಿ ಪ್ರಕರಣಗಳು ದಾಖಲಾದ 2ನೇ ದೇಶ ಭಾರತ. ಪ್ರಸ್ತುತ ಅಮೆರಿಕಾದಲ್ಲಿ ದಾಖಲಾದ ಒಟ್ಟು ಕೊವಿಡ್​ ಪ್ರಕರಣಗಳ ಸಂಖ್ಯೆ 1.7ಕೋಟಿ ಇದ್ದರೆ ಭಾರತದಲ್ಲಿ 1,00,04,893 ಪ್ರಕರಣಗಳು ಕಂಡುಬಂದಿವೆ. ಭಾರತದ ನಂತರ ಬ್ರೆಜಿಲ್ 71 ಲಕ್ಷ ಕೊವಿಡ್​ ಕೇಸ್​ಗಳಿಗೆ ಸಾಕ್ಷಿಯಾಗಿ 3ನೇ ಸ್ಥಾನದಲ್ಲಿದೆ.

ಕೊರೊನಾ ಸೋಂಕಿತರ ಸಂಖ್ಯೆ ಕೋಟಿ ದಾಟಿರುವುದು ಆತಂಕ ಮೂಡಿಸುವ ವಿಷಯದಂತೆ ಕಂಡರೂ, ಭಾರತದ ಪಾಲಿಗೆ ಸಮಾಧಾನ ಮೂಡಿಸುವ ಹಲವು ಸಂಗತಿಗಳು ಇದರೊಂದಿಗೆ ಇದೆ ಎನ್ನುವುದು ಗಮನಾರ್ಹ. ಭಾರತದಲ್ಲಿ ತಿಂಗಳ ಹಿಂದೆಯೇ 90 ಲಕ್ಷ ಕೊರೊನಾ ಪ್ರಕರಣಗಳಿದ್ದವು.

ಇನ್ನೇನು ಕೋಟಿಯ ಹೊಸ್ತಿಲಿಗೆ ಬಂದಾಯಿತು ಎಂದು ಅಂದುಕೊಳ್ಳುವಾಗಲೇ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಯಿತು. ಈ ಕಾರಣದಿಂದಲೇ 10 ಲಕ್ಷ ಹೊಸ ಪ್ರಕರಣ ದಾಖಲಾಗುವುದಕ್ಕೆ ಬರೋಬ್ಬರಿ 29 ದಿನ ಬೇಕಾಯಿತು.

ಸದ್ಯ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಬಹಳ ಕಡಿಮೆ. ಅತಿ ಹೆಚ್ಚು ಕೊರೊನಾ ಹೊಡೆತಕ್ಕೆ ಸಿಕ್ಕ ವಿಶ್ವದ 20 ದೇಶಗಳ ಪೈಕಿ ಸೋಂಕಿತರ ಸಾವಿನ ಪ್ರಮಾಣದಲ್ಲಿ ಭಾರತ 19 ನೇ ಸ್ಥಾನದಲ್ಲಿದೆ.

ಸಾವಿಗೀಡಾದವರ ಸಂಖ್ಯೆ 1.5 ಲಕ್ಷದತ್ತ.. ಭಾರತದಲ್ಲಿ 10 ಲಕ್ಷಕ್ಕೆ ಸರಾಸರಿ 104 ಜನ ಮೃತಪಟ್ಟಿದ್ದರೆ 20ನೇ ಸ್ಥಾನದಲ್ಲಿರುವ ಇಂಡೋನೇಶಿಯಾದಲ್ಲಿ 10 ಲಕ್ಷಕ್ಕೆ ಸುಮಾರು 71 ಜನ ಮೃತಪಟ್ಟಿದ್ದಾರೆ. ಭಾರತದಲ್ಲಿ ನಿನ್ನೆ 347 ಜನ ಸೋಂಕಿತರು ಮೃತಪಟ್ಟಿದ್ದು ಸದ್ಯ ಕೊರೊನಾದಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 1,45,136ರಷ್ಟಿದೆ.

ಭಾರತದಲ್ಲಿ ಒಂದೇ ದಿನ ಅತ್ಯಧಿಕ ಪ್ರಕರಣಗಳು ದಾಖಲಾಗಿದ್ದು ಬರೋಬ್ಬರಿ 3 ತಿಂಗಳ ಹಿಂದೆ. ಸೆಪ್ಟೆಂಬರ್​ 17ರಂದು ಒಂದೇ ದಿನ 98,795 ಹೊಸ ಪ್ರಕರಣಗಳು ದಾಖಲಾಗಿದ್ದು ಹೊರತುಪಡಿಸಿದರೆ ನಂತರದಲ್ಲಿ ಈ ಸಂಖ್ಯೆಯಲ್ಲಿ ಭಾರೀ ಇಳಿಮುಖ ಕಂಡಿದೆ.

ಸುಧಾರಿಸಿಕೊಂಡ ದಕ್ಷಿಣ ಭಾರತ ಭಾರತದಲ್ಲಿ 90 ಲಕ್ಷ ಕೊರೊನಾ ಪ್ರಕರಣಗಳಿದ್ದಾಗ ಅದರಲ್ಲಿ ದಕ್ಷಿಣ ಭಾರತದ ಪಾಲು ಶೇ.37ರಷ್ಟಿತ್ತು. ಆದರೆ, ಈಗ ಕೋಟಿ ದಾಟಿದ ಸಂದರ್ಭದಲ್ಲಿ ದಕ್ಷಿಣ ಭಾರತ ದೇಶದ ಶೇ.27ರಷ್ಟು ಪ್ರಕರಣಗಳನ್ನು ಹೊಂದಿದೆ. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ಇದ್ದರೂ ದಕ್ಷಿಣ ಭಾರತದಲ್ಲಿ ಸೋಂಕಿತರ ಸಂಖ್ಯೆ ಶೇಕಡಾವಾರು ಕಡಿಮೆ ಆಗಿರುವುದು ಗಮನಾರ್ಹ.

ಒಂದು ಅಧ್ಯಯನದ ಪ್ರಕಾರ ಕೊರೊನಾದಿಂದ ಅತ್ಯಂತ ತೀವ್ರ ಮಟ್ಟದ ಹೊಡೆತ ಪಡೆದ 10 ದೇಶಗಳ ಪೈಕಿ ಭಾರತ ಮತ್ತು ಅರ್ಜೆಂಟೈನಾದಲ್ಲಿ ಮಾತ್ರ ಕೊವಿಡ್​ 2ನೇ ಅಲೆ ಇನ್ನೂ ಆರಂಭವಾಗಿಲ್ಲ. ಭಾರತದಲ್ಲಿ ಕಳೆದ 3 ತಿಂಗಳಿನಿಂದ ಹೊಸ ಪ್ರಕರಣಗಳಲ್ಲಿ ಅಚ್ಚರಿಯ ಇಳಿಮುಖ ಕಂಡಿರುವುದು ಮತ್ತು 2ನೇ ಅಲೆ ಆರಂಭವಾಗದೇ ಇರುವುದಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬರಬೇಕಿದೆ.

ಕೊರೊನಾ ಕೋಟ್ಯಧಿಪತಿಯಾದರೂ ಭಾರತ ಸುರಕ್ಷಿತ ಹಂತದಲ್ಲಿ ಇರುವುದು ಹಲವು ರಾಷ್ಟ್ರಗಳಿಗೆ ಅಚ್ಚರಿ ಮೂಡಿಸಿದೆ. ಭಾರತದಲ್ಲಿ ಇಲ್ಲಿಯವರೆಗೂ ಯಾವುದೇ ಕೊರೊನಾ ಲಸಿಕೆಯ ಬಳಕೆಗೆ ಅನುಮತಿ ಸಿಕ್ಕಿಲ್ಲ. ಇಷ್ಟಾದರೂ ಕೊರೊನಾ ಹೊಡೆತವನ್ನು ತಡೆದುಕೊಳ್ಳುವ ಶಕ್ತಿ ಭಾರತೀಯರಲ್ಲಿ ಹೇಗೆ ಬಂತು ಎಂಬುದು ನಿಜಕ್ಕೂ ಕುತೂಹಲಕಾರಿ ಸಂಗತಿ.

ತಜ್ಞರು ಹೇಳುವ ಪ್ರಕಾರ.. ಒಂದುವೇಳೆ, ಭಾರತದಲ್ಲಿ 2ನೇ ಅಲೆ ಈ ಕೂಡಲೇ ಶುರುವಾದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಬಹುದೆಂದು ಊಹಿಸುವುದು ಕಷ್ಟ. 2ನೇ ಅಲೆಯ ಹೊಡೆತ ಮೊದಲಿಗಿಂತಲೂ ಭೀಕರವಾಗಿರುವ ಸಾಧ್ಯತೆ ಇದೆ ಎಂದು ಅನೇಕರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಪರಿಸ್ಥಿತಿ ಸಮಾಧಾನಕರವಾಗಿದೆಯೆಂದು ಮೈಮರೆಯುವುದು ಯಾವ ಕಾರಣಕ್ಕೂ ಉಚಿತವಲ್ಲ.

ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕು ನಿರೋಧಕ ಶಕ್ತಿ ಪತ್ತೆ; ಅಚ್ಚರಿಗೆ ಕಾರಣವಾಯ್ತು ಹೊಸ ಸಂಶೋಧನೆ

Published On - 12:12 pm, Sat, 19 December 20

Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ