ಉಬರ್ನಲ್ಲಿ ಪ್ರಯಾಣಿಸುವುದು ಅಸುರಕ್ಷಿತ, ಡೈವರ್ ಅಜಾಗರೂಕತೆಯಿಂದ ಕೈ-ಕಾಲು ಮುರಿದುಕೊಂಡ ವೈದ್ಯೆ
ದೆಹಲಿಯ ದಂತವೈದ್ಯಯೊಬ್ಬರು ಉಬರ್ನಲ್ಲಿ ಪ್ರಯಾಣಿಸಿ ಅಪಘಾತಕ್ಕೆ ಒಳಗಾಗಿದ್ದಾರೆ. ಇದೀಗ ಈ ಬಗ್ಗೆ ಎಕ್ಸ್ನಲ್ಲಿ ವೈದ್ಯೆ ಹಂಚಿಕೊಂಡಿದ್ದಾರೆ. ನಾನು ಉಬರ್ನ್ನು ಬಹಿಷ್ಕರಿಸುತ್ತಿದ್ದೇನೆ. ಡ್ರೈವಿಂಗ್ ಲೈಸೆನ್ಸ್ ಅಥವಾ ಅನುಭವವಿಲ್ಲದ ಚಾಲಕರನ್ನು ಉಬರ್ ಕಂಪನಿ ನಿಯೋಜನೆ ಮಾಡಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಮತ್ತು ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸದೆ ಇರುವ ಇಂತಹ ಚಾಲಕರಿಂದ ಅಪಾಯ ಖಂಡಿತ" ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಇಲ್ಲಿದೆ ಮಾಹಿತಿ.
ದೆಹಲಿ, ಏ.29: Ola ಮತ್ತು Uber ಬಗ್ಗೆ ಒಂದಲ್ಲ ಒಂದು ದೂರು ಸಾಮಾಜಿಕ ಜಾಲತಾಣದಲ್ಲಿ ಬರುತ್ತಲೇ ಇರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಇದು ಹೆಚ್ಚಾಗಿದೆ. ನವದೆಹಲಿಯ ವೈದ್ಯರೊಬ್ಬರು ಕೂಡ ಉಬರ್ನಿಂದ ಅನುಭವಿಸಿದ ತೊಂದರೆಯನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ದಂತವೈದ್ಯೆ, ಡಾ ರುಚಿಕಾ ಅವರು ಶನಿವಾರ ಉಬರ್ ಬುಕ್ ಮಾಡಿ ಅಪಘಾತಕ್ಕೀಡಾದರು. ಇದರಿಂದ ಕಂಪನಿಯ ಸೇವೆಗಳನ್ನು ಬಹಿಷ್ಕರಿಸುವುದಾಗಿ ಎಕ್ಸ್ನಲ್ಲಿ ಹೇಳಿದ್ದಾರೆ. ತಮ್ಮ ಮನೆಯಿಂದ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಹೋಗಲು ಉಬರ್ ಬುಕ್ ಮಾಡಿದ್ದಾರೆ. ಉಬರ್ ಚಾಲಕನ ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಉಬರ್ನ ಸೇವೆಯ ಬಗ್ಗೆ ಪ್ರಶ್ನಿಸಿದ್ದಾರೆ.
ಎಕ್ಸ್ನಲ್ಲಿ ಈ ಬಗ್ಗೆ ವೈದ್ಯೆ ಡಾ ರುಚಿಕಾ ಹೀಗೆ ಬರೆದುಕೊಂಡಿದ್ದಾರೆ. “ನಾನು ಉಬರ್ನ್ನು ಬಹಿಷ್ಕರಿಸುತ್ತಿದ್ದೇನೆ. ಡ್ರೈವಿಂಗ್ ಲೈಸೆನ್ಸ್ ಅಥವಾ ಅನುಭವವಿಲ್ಲದ ಚಾಲಕರನ್ನು ಉಬರ್ ಕಂಪನಿ ನಿಯೋಜನೆ ಮಾಡಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಮತ್ತು ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸದೆ ಇರುವ ಇಂತಹ ಚಾಲಕರಿಂದ ಅಪಾಯ ಖಂಡಿತ” ಎಂದು ಅವರು ಹೇಳಿದ್ದಾರೆ.
I am boycotting @Uber_India
It has become unsafe to travel with them now as drivers without Driving License or experience are on the roads, without taking any safety measures & care for the passengers.
I met with an ACCIDENT yesterday.
— Dr. Ruchika (@theindiangirl__) April 28, 2024
ಈ ಕ್ಯಾಬ್ ಡ್ರೈವರ್ಗಳು ಟ್ರಾಫಿಕ್ ರೂಲ್ಸ್ಗಳನ್ನು ಪಾಲಿಸದೆ, ಅವರಿಗೆ ಹೇಗೆ ಬೇಕು ಹಾಗೆ ವಾಹನ ಚಲಿಸಿದ್ದಾರೆ. ಲೆಫ್ಟ್, ರೈಟ್ ತೆಗೆದುಕೊಳ್ಳುವಾಗ ಇಂಡಿಕೇಟರ್ ಹಾಕದೆ ಚಲಿಸುತ್ತಿದ್ದರು ಎಂದು ಉಬರ್ ಸೇವೆಯನ್ನು ದೂರಿದ್ದಾರೆ. ಜತೆಗೆ ಹಿಂದೆ ಯಾವ ವಾಹನ ಬರುತ್ತಿದೆ ಎಂದು ನೋಡಬೇಕು ಎಂಬ ಪ್ರಜ್ಞೆ ಕೂಡ ಅವರಿಗೆ ಇರಲಿಲ್ಲ. ಈತನಿಗೆ ಡ್ರೈವಿಂಗ್ ಮಾಡಲು ಲೈಸನ್ಸ್ ಕೊಟ್ಟವರು ಯಾರು?’ ಎಂದು ಪ್ರಶ್ನಿಸಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಐದು ದಿನ ಫುಲ್ ಬೆಡ್ ರೆಸ್ಟ್ ನಲ್ಲಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಆರ್ಥಿಕ, ದೈಹಿಕ ಮತ್ತು ಭಾವನಾತ್ಮಕ ನಷ್ಟವಾಗಿದೆ. ಈಗ ನನ್ನ ಆಸ್ಪತ್ರೆ ಖರ್ಚು, ಕಛೇರಿಗೆ ಹೋಗಲಾಗದೆ, ಉನ್ನತ ವ್ಯಾಸಂಗಕ್ಕಾಗಿ ತರಗತಿಗೂ ಹೋಗಲಾಗದೆ ಕಷ್ಟ ಪಡುತ್ತಿದ್ದೇನೆ, ತುಂಬಾ ನಷ್ಟವಾಗಿದೆ. ಇದನ್ನೆಲ್ಲ ಯಾರು ನೀಡುತ್ತಾರೆ, ಇದನ್ನು ಹೇಗೆ ಸರಿಪಡಿಸುವುದು ಎಂದು ಕೇಳಿದ್ದಾರೆ. ಈ ಫೋಸ್ಟ್ಗೆ ಪ್ರತಿಕ್ರಿಯಿಸಿದ ಉಬರ್ ”ಇದು ಭಯ ಹುಟ್ಟಿಸುವಂತಿದೆ ಮತ್ತು ರುಚಿಕಾ, ನೀವು ಮತ್ತು ಚಾಲಕ ಸುರಕ್ಷಿತವಾಗಿರುತ್ತೀರಿ ಎಂದು ನಾವು ಭಾವಿಸುತ್ತೇವೆ. ಈ ಪ್ರವಾಸವನ್ನು DM ಮೂಲಕ ಬುಕ್ ಮಾಡಲಾದ ನೋಂದಾಯಿತ ಸಂಪರ್ಕ ವಿವರಗಳನ್ನು ದಯವಿಟ್ಟು ಹಂಚಿಕೊಳ್ಳಿ. ನಮ್ಮ ಸುರಕ್ಷತಾ ತಂಡವು ಶೀಘ್ರದಲ್ಲೇ ನಿಮ್ಮೊಂದಿಗೆ ಸಂಪರ್ಕದಲ್ಲಿರಲಿದೆ ಎಂದು ಹೇಳಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ