ದಂಪತಿ ಸರಸದಲ್ಲಿದ್ದಾಗ ಮಾಸ್ಟರ್​​ ಕೀ ಬಳಸಿ ರೂಂಗೆ ಬಂದ ಸಿಬ್ಬಂದಿ; ಲೀಲಾ ಪ್ಯಾಲೇಸ್​​​ ಹೋಟೆಲ್​ಗೆ 10 ಲಕ್ಷ ರೂ. ದಂಡ!

ಏಕಾಂತವಾಗಿ ಸಮಯ ಕಳೆಯಲೆಂದು ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್​ಗೆ ತೆರಳಿದ್ದ ದಂಪತಿ ಬಾತ್​​ರೂಂನಲ್ಲಿ ಸ್ನಾನ ಮಾಡುತ್ತಿದ್ದಾಗ ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಂನೊಳಗೆ ಬಂದಿದ್ದಾರೆ. ಇದರಿಂದ ಆ ದಂಪತಿಗೆ ತೀವ್ರ ಮುಜುಗರವಾಗಿದೆ. ಹೀಗಾಗಿ, ಹೋಟೆಲ್ ಗ್ರಾಹಕರ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ 10 ಲಕ್ಷ ರೂ. ದಂಡ ವಿಧಿಸಲಾಗಿದೆ.

ದಂಪತಿ ಸರಸದಲ್ಲಿದ್ದಾಗ ಮಾಸ್ಟರ್​​ ಕೀ ಬಳಸಿ ರೂಂಗೆ ಬಂದ ಸಿಬ್ಬಂದಿ; ಲೀಲಾ ಪ್ಯಾಲೇಸ್​​​ ಹೋಟೆಲ್​ಗೆ 10 ಲಕ್ಷ ರೂ. ದಂಡ!
Leela Palace

Updated on: Jan 09, 2026 | 3:49 PM

ಚೆನ್ನೈ, ಜನವರಿ 9: ರಾಜಸ್ಥಾನದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿತ್ತು. ಉದಯಪುರದ (Udaipur) ಐಷಾರಾಮಿ ಹೋಟೆಲ್ ಲೀಲಾ ಪ್ಯಾಲೇಸ್​​ನಲ್ಲಿ ರೂಂ ಬುಕ್ ಮಾಡಿದ್ದ ದಂಪತಿ ಬಾತ್​ರೂಂನಲ್ಲಿ ಒಟ್ಟಾಗಿ ಸ್ನಾನ ಮಾಡುತ್ತಾ, ಸರಸದಲ್ಲಿ ತೊಡಗಿದ್ದಾಗ ಆ ಹೋಟೆಲ್ ಸಿಬ್ಬಂದಿ ತಮ್ಮ ಬಳಿ ಇರುವ ಮಾಸ್ಟರ್ ಕೀ ಬಳಸಿ ರೂಂನೊಳಗೆ ಬಂದಿದ್ದರು. ಇದರಿಂದ ಆ ದಂಪತಿ ತೀವ್ರ ಮುಜುಗರಕ್ಕೀಡಾಗಿದ್ದರು. ಈ ಕುರಿತು ಹೋಟೆಲ್ ಸಿಬ್ಬಂದಿ ಕ್ಷಮಾಪಣೆ ಕೇಳಿದ್ದರೂ ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಈ ಕೇಸ್ ತೀರ್ಪು ಹೋಟೆಲ್​ನ ಗ್ರಾಹಕರಾಗಿದ್ದ ಆ ದಂಪತಿಯ ಪರವಾಗಿ ಬಂದಿದೆ.

ಚೆನ್ನೈನ ಗ್ರಾಹಕ ನ್ಯಾಯಾಲಯವು ದಿ ಲೀಲಾ ಪ್ಯಾಲೇಸ್ ಉದಯಪುರದ ಗೌಪ್ಯತೆಯ ಉಲ್ಲಂಘನೆಗಾಗಿ ಅದನ್ನು ತರಾಟೆಗೆ ತೆಗೆದುಕೊಂಡಿದೆ. ಜನಪ್ರಿಯ ಐಷಾರಾಮಿ ಹೋಟೆಲ್‌ನಲ್ಲಿ ಅತಿಥಿಗಳಾಗಿದ್ದ ದಂಪತಿಗಳಿಗೆ ಪರಿಹಾರವಾಗಿ 10 ಲಕ್ಷ ರೂ.ಗಳನ್ನು ಪಾವತಿಸಲು ಆದೇಶಿಸಿದೆ. ಚೆನ್ನೈ ಮೂಲದ ದಂಪತಿ ದಿ ಲೀಲಾ ಪ್ಯಾಲೇಸ್‌ನ ಹೌಸ್‌ಕೀಪಿಂಗ್ ಸಿಬ್ಬಂದಿ ಇಬ್ಬರೂ ಬಾತ್​​ರೂಮ್‌ನಲ್ಲಿರುವಾಗ ಮಾಸ್ಟರ್ ಕೀ ಬಳಸಿ ತಮ್ಮ ಕೋಣೆಗೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Viral: ಗೆಳೆಯನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದ ವಿದೇಶಿ ಮಹಿಳೆ ಹೀಗೆಂದಿದ್ದೇಕೆ?

ಆದರೆ, ಲೀಲಾ ಪ್ಯಾಲೇಸ್ ಹೋಟೆಲ್ ತಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಹೇಳಿತ್ತು. ಆ ದಂಪತಿ ತಮ್ಮ ಕೋಣೆಯ ಬಾಗಿಲಿನ ಮೇಲೆ ‘ಡಿಸ್ಟರ್ಬ್ ಮಾಡಬೇಡಿ’ (Do Not Disturb) ಫಲಕವನ್ನು ಹಾಕಿರಲಿಲ್ಲ ಎಂದು ಹೇಳಿದೆ.

ಜನವರಿ 26ರಂದು ಹೋಟೆಲ್‌ನಲ್ಲಿ ಒಂದು ದಿನದ ವಾಸ್ತವ್ಯವನ್ನು ಕಾಯ್ದಿರಿಸಿದ್ದ ಚೆನ್ನೈ ಮೂಲದ ದಂಪತಿ ಸಲ್ಲಿಸಿದ ದೂರಿನ ನಂತರ ಚೆನ್ನೈ (ಉತ್ತರ) ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ದಿ ಲೀಲಾ ಪ್ಯಾಲೇಸ್‌ಗೆ ದಂಡ ವಿಧಿಸುವ ಆದೇಶವನ್ನು ಅಂಗೀಕರಿಸಿದೆ. “ನೋ ಸರ್ವಿಸ್” ಎಂದು ಕೂಗುತ್ತಿದ್ದರೂ ಆ ಸಿಬ್ಬಂದಿ ರೂಂನಿಂದ ಹೊರಗೆ ಹೋಗಲಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 9 January 26