‘ಉದಯಪುರ ಫೈಲ್ಸ್’ ವಿವಾದ: ಕೈತೊಳೆದುಕೊಂಡ ಸುಪ್ರೀಂ, ಹೈಕೋರ್ಟ್ ಅಂಗಳದಲ್ಲಿ ಚೆಂಡು
Udaipur files controversy: 2022 ರಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಕತೆ ಹೊಂದಿರುವ ‘ಉದಯಪುರ ಫೈಲ್ಸ್’ ಸಿನಿಮಾದ ಕುರಿತ ಪ್ರಕರಣ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಬಿಡುಗಡೆಗೆ ತಡೆ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಕೋರ್ಟ್, ತಡೆ ನೀಡಲು ನಿರಾಕರಿಸಿದೆ.

‘ಉದಯಪುರ ಫೈಲ್ಸ್’ (Udaipur Files) ಸಿನಿಮಾ ವಿವಾದ ಸುಪ್ರೀಂಕೋರ್ಟ್ನಿಂದ ಮತ್ತೆ ಹೈಕೋರ್ಟ್ ಅಂಗಳಕ್ಕೆ ಬಂದಿದೆ. 2022 ರಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಘಟನೆ ಆಧರಿಸಿದ ಸಿನಿಮಾ ಇದಾಗಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಕೋಮುದ್ವೇಷ ಅಂಶವಿದೆ ಎಂದು ಆರೋಪಿಸಿ ಮೌಲಾನಾ ಅರ್ಷದ್ ಮದಾನಿ ಮತ್ತು ಇನ್ನೊಬ್ಬರು ಆರೋಪ ಮಾಡಿ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಅರ್ಜಿ ದಾಖಲಿಸಿದ್ದರು. ಸುಪ್ರೀಂಕೋರ್ಟ್ನಲ್ಲಿ ಕಳೆದ 12 ದಿನಗಳಿಂದಲೂ ವಿಚಾರಣೆ ನಡೆದು ಇದೀಗ ಮತ್ತೆ ಪ್ರಕರಣ ಹೈಕೋರ್ಟ್ ಅಂಗಳಕ್ಕೆ ಬಂದಿದೆ.
ಅರ್ಜಿದಾರರ ಪರ ವಾದ ಮಂಡಿಸಿದ್ದ ಕಪಿಲ್ ಸಿಬಲ್, ಸಿನಿಮಾನಲ್ಲಿ ಕೋಮುದ್ವೇಷಿ ಅಂಶವಿದೆ. ಇಸ್ಲಾಂ ಧರ್ಮವನ್ನು ಹಾಗೂ ಧರ್ಮವನ್ನು ಅನುಸರಿಸುವವರನ್ನು ಅಪರಾಧಿಗಳಂತೆ ಬಿಂಬಿಸಲಾಗಿದೆ ಎಂದು ವಾದಿಸಿದ್ದರು. ವಾದಕ್ಕೆ ಟ್ರೈಲರ್ನಲ್ಲಿದ್ದ ಕೆಲವು ದೃಶ್ಯಗಳು, ಸಂಭಾಷಣೆಗಳನ್ನು ಸಾಕ್ಷಿಯಾಗಿ ನೀಡಿದ್ದರು. ಆದರೆ ಸಿನಿಮಾ ಪರ ವಾದ ಮಂಡಿಸಿದ್ದ ವಕೀಲರು, ಈ ಸಿನಿಮಾ ಕೇವಲ ಕನ್ಹಯ್ಯ ಲಾಲ್ ಹತ್ಯೆಯ ಕುರಿತಾಗಿ ಮಾತ್ರವೇ ಇದೆ ಎಂದು ವಾದಿಸಿದ್ದರು. ಅಲ್ಲದೆ, ‘ಕಾಶ್ಮೀರ್ ಫೈಲ್ಸ್’, ‘ಕೇರಳ ಸ್ಟೋರಿಗಳಿಂದ ಸಮಾಜದಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ, ಈ ಸಿನಿಮಾ ಗಲಭೆಗೆ ಕಾರಣ ಆಗುತ್ತದೆ ಎಂಬ ವಾದ ಒಪ್ಪಲಾಗದು ಎಂದು ವಾದಿಸಿದ್ದರು.
ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರವು ಸಿನಿಮಾದ ಬಿಡುಗಡೆ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು. ಅದರಂತೆ ಕೇಂದ್ರದ ಮಾಹಿಸಿ ಮತ್ತು ಪ್ರಸಾರ ಖಾತೆಯು, ‘ಆರು ಕಟ್ಗಳನ್ನು ಸೂಚಿಸಿ ಸಿನಿಮಾ ಬಿಡುಗಡೆಗೆ ಮಾಡಬಹುದು’ ಎಂದಿತ್ತು. ಅದರಂತೆ ಇಂದು ಆದೇಶ ಪ್ರಕಟಿಸಿದ ಸುಪ್ರೀಂಕೋರ್ಟ್, ಸಿನಿಮಾ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಆದರೆ ಈ ಪ್ರಕರಣದ ಮುಂದಿನ ವಿಚಾರಣೆ ದೆಹಲಿ ಹೈಕೋರ್ಟ್ನಲ್ಲಿಯೇ ತೀರ್ಮಾನಗೊಳ್ಳಲಿ ಎಂದಿದೆ. ಸೋಮವಾರವೇ ವಿಷಯದ ವಿಚಾರಣೆ ಇದ್ದು, ಅಂದು ಪ್ರಕರಣ ಇತ್ಯರ್ಥವಾಗಲಿ ಎಂದಿದೆ.
ಇದನ್ನೂ ಓದಿ:‘ಉದಯಪುರ ಫೈಲ್ಸ್‘ ಸಿನಿಮಾ ಬಿಡುಗಡೆಗೆ ಡೆಲ್ಲಿ ಹೈಕೋರ್ಟ್ ತಡೆ: ಕಾರಣವೇನು?
ಆಗಸ್ಟ್ 8 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಈ ಹಿಂದೆಯೇ ನಿರ್ಮಾಪಕರು ಘೋಷಿಸಿದ್ದರು. ಈಗ ಸಿನಿಮಾದ ಬಿಡುಗಡೆಗೆ ಸುಪ್ರೀಂಕೋರ್ಟ್ ನಕಾರಿಸಿರುವ ಕಾರಣ, ಸಿನಿಮಾ ಪೂರ್ವ ನಿಗದಿಯಂತೆ ಆಗಸ್ಟ್ 8 ರಂದೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿಬಿಎಫ್ಸಿ, ಕೇಂದ್ರ ಸರ್ಕಾರವೂ ಸಹ ಈಗಾಗಲೇ ಈ ಪ್ರಕರಣದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಕಾರಣ ಸಿನಿಮಾದ ಬಿಡುಗಡೆಗೆ ತಡೆ ಆಗುವುದು ಬಹುತೇಕ ಅಸಾಧ್ಯ ಎನ್ನಲಾಗುತ್ತಿದೆ. ಸಿನಿಮಾದ ನಿರ್ದೇಶಕರು ಮಾಧ್ಯಮಗಳೊಟ್ಟಿಗೆ ಮಾತನಾಡಿ, ತಮ್ಮ ಸಿನಿಮಾ ಆಗಸ್ಟ್ 8 ರಂದೇ ಬಿಡುಗಡೆ ಆಗಲಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




