
ಉದಯಪುರ ಆಗಸ್ಟ್ 16: ರಾಜಸ್ಥಾನದ (Rajasthan)ಉದಯಪುರದ (Udaipur) ಸರ್ಕಾರಿ ಶಾಲೆಯೊಂದರಲ್ಲಿ ಇಂದು (ಶುಕ್ರವಾರ) 15 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಜನರ ಗುಂಪೊಂದು ಸುಮಾರು ಅರ್ಧ ಡಜನ್ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ನಗರದ ಕೆಲವು ಭಾಗಗಳಲ್ಲಿ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಊಟದ ವಿರಾಮದ ವೇಳೆ ನಡೆದ ಜಗಳದ ವೇಳೆ ಅಪ್ರಾಪ್ತ ವಯಸ್ಕನಿಗೆ ಮತ್ತೊಬ್ಬ ವಿದ್ಯಾರ್ಥಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆತನ ತೊಡೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಗಾಯಾಳು ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ನಗರದಲ್ಲಿ ಉದ್ವಿಗ್ನ ವಾತಾವರಣವಿದೆ. ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳ ನಂತರ, ನಗರದ ಕೆಲವು ಭಾಗಗಳಲ್ಲಿ ಕ್ಷೋಭೆಗೊಳಗಾದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಾರತೀಯ ನಾಗರಿಕ್ ಸುರಕ್ಷಾ (ಬಿಎನ್‌ಎಸ್‌ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಸಹ ವಿಧಿಸಲಾಗಿದೆ.
#WATCH | Udaipur, Rajasthan: Force deployed in the city after a clash broke out between two children, earlier today
Section 144 has been imposed in the city by Arvind Poswal, District Collector of Udaipur to maintain law and order here. pic.twitter.com/z0k2FgFGxt
— ANI MP/CG/Rajasthan (@ANI_MP_CG_RJ) August 16, 2024
ಉದಯಪುರದ ಜಿಲ್ಲಾಧಿಕಾರಿಗಳು ಜನರು ಶಾಂತವಾಗಿರಲು ಮನವಿ ಮಾಡಿದ್ದು ವದಂತಿಗಳಿಗೆ ಗಮನ ಕೊಡಬೇಡಿ ಎಂದು ನಿವಾಸಿಗಳನ್ನು ಒತ್ತಾಯಿಸಿದ್ದಾರೆ.
ಚಾಕು ಇರಿತದಿಂದ ಅಪ್ರಾಪ್ತ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾನು ನಿವಾಸಿಗಳಲ್ಲಿ ಮನವಿ ಮಾಡುತ್ತೇನೆ. ನೀವು ಏನಾದರೂ ಕೇಳಿದರೆ, ಅದನ್ನು ಪೊಲೀಸರೊಂದಿಗೆ ಪರಿಶೀಲಿಸಿ, ”ಎಂದು ಜಿಲ್ಲಾಧಿಕಾರಿ ಅರವಿಂದ್ ಪೋಸ್ವಾಲ್ ಹೇಳಿದರು.
ಆರೋಪಿ ಹದಿಹರೆಯದ ಬಾಲಕನನ್ನು ಮತ್ತು ಆತನ ತಂದೆಯನ್ನು ಬಂಧಿಸಲಾಗಿದೆ ಎಂದು ಪೋಸ್ವಾಲ್ ಹೇಳಿದ್ದಾರೆ.
ಘಟನೆಯಿಂದ ರೊಚ್ಚಿಗೆದ್ದ ಎಂ.ಬಿ.ಆಸ್ಪತ್ರೆಯಲ್ಲಿ ಜಮಾಯಿಸಿದ ಕೆಲ ಯುವಕರು ಆಸ್ಪತ್ರೆ ಆವರಣದಿಂದ ಹೊರ ಬಂದು ಚೇತಕ್ ರಸ್ತೆಗೆ ಆಗಮಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಘೋಷಣೆ ಕೂಗಿದ್ದಾರೆ. ಇತ್ತ ಮಾರುಕಟ್ಟೆ ಮುಚ್ಚುತ್ತಿದ್ದ ಯುವಕರ ಮನವೊಲಿಸುವ ಮೂಲಕ ಉದ್ವಿಗ್ನ ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದರು. ಪೊಲೀಸರು ಮತ್ತು ಉನ್ನತ ಅಧಿಕಾರಿಗಳು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:36 pm, Fri, 16 August 24