ರಾಜಸ್ಥಾನ: ಬೈಕ್​​ಗೆ ಪತ್ನಿಯನ್ನು ಕಟ್ಟಿ ಎಳೆದೊಯ್ದ ಪತಿ, ವಿಡಿಯೊ ವೈರಲ್

ರಾಜಸ್ಥಾನದ ವಿಡಿಯೊಗೆ ಸಂಬಂಧಿಸಿದಂತೆ, ಆ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿಲ್ಲ.  ಜೈಸಲ್ಮೇರ್‌ನಲ್ಲಿರುವ ತನ್ನ ಸಹೋದರಿಯನ್ನು ಭೇಟಿಯಾಗಲು ಬಯಸಿದ್ದಕ್ಕಾಗಿ ಆ ವ್ಯಕ್ತಿ ಅವನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಗಳಿವೆ. ಆದಾಗ್ಯೂ, ಇದು ವಧುವನ್ನು 'ಖರೀದಿಸಿದ' ಪ್ರಕರಣವೂ ಆಗಿರಬಹುದು ಎಂಬ ಶಂಕೆ ಇದೆ.

ರಾಜಸ್ಥಾನ: ಬೈಕ್​​ಗೆ ಪತ್ನಿಯನ್ನು ಕಟ್ಟಿ ಎಳೆದೊಯ್ದ ಪತಿ, ವಿಡಿಯೊ ವೈರಲ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 13, 2024 | 6:47 PM

ಜೈಪುರ ಆಗಸ್ಟ್ 13: ಮಹಿಳೆಯೊಬ್ಬರ ಕಾಲುಗಳನ್ನು ಮೋಟಾರು ಸೈಕಲ್‌ಗೆ ಕಟ್ಟಿ ಎಳೆದೊಯ್ದು ಘಟನೆ ರಾಜಸ್ಥಾನದ (Rajasthan) ನಾಗೌರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯು ಸಹಾಯಕ್ಕಾಗಿ ಅಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಿಳೆಯನ್ನು ಕಲ್ಲು ಮಣ್ಣಿನ ಮೇಲೆ ದರದರನೆ ಎಳೆದಾದ ನಂತರ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಬೈಕಿನಿಂದ ಇಳಿದು ಗಾಯಗೊಂಡು, ನೋವಿನಿಂದ ಅರಚುತ್ತಿರುವ ಮಹಿಳೆಯತ್ತ ದರ್ಪದಿಂದ ನೋಡಿದ್ದಾನೆ. ಅಸಹಾಯಕಳಾಗಿ ಅಳುತ್ತಿರುವ ಮಹಿಳೆಯ ಮುಂದೆ ಆತನ ಸೊಕ್ಕು ಈ 40 ಸೆಕೆಂಡ್ ಅವಧಿಯ ವಿಡಿಯೊದಲ್ಲಿ ಎದ್ದು ಕಾಣುತ್ತದೆ.

ಕಳೆದ ತಿಂಗಳು ನಡೆದ ಘಟನೆ ಇದು ಎಂದು ಎನ್​​ಡಿಟಿವಿ ವರದಿ ಮಾಡಿದೆ.  ಮಹಿಳೆಯನ್ನು ಬೈಕ್ ಗೆ ಕಟ್ಟಿ ಎಳೆದು ಚಿತ್ರಹಿಂಸೆ ನೀಡುತ್ತಿರುವ ಈ ವಿಡಿಯೊವನ್ನು ಒಬ್ಬ ಮಹಿಳೆ ಮತ್ತು ಪುರುಷ ಚಿತ್ರೀಕರಿಸಿದ್ದಾರೆ . ಪತ್ನಿಗೆ ಶಿಕ್ಷೆ ನೀಡುವುದಕ್ಕಾಗಿ ಆ ವ್ಯಕ್ತಿ (ಪತಿ) ಆಕೆಯನ್ನು ಬೈಕ್ ಗೆ ಕಟ್ಟಿ ಎಳೆದಿದ್ದಾನೆ ಎನ್ನಲಾಗಿದೆ.

ಈ ಭಯಾನಕ ವಿಡಿಯೊವು ಭಾರತೀಯ ಮಹಿಳೆಯರು ಪ್ರತಿದಿನ ಎದುರಿಸುತ್ತಿರುವ ಹಿಂಸೆಯನ್ನು ಒತ್ತಿಹೇಳುತ್ತದೆ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಡುವೆಯೇ ಇಂಥಾ ಪ್ರಕರಣಗಳು ವರದಿ ಆಗಿವೆ.

ರಾಜಸ್ಥಾನದ ವಿಡಿಯೊಗೆ ಸಂಬಂಧಿಸಿದಂತೆ, ಆ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿಲ್ಲ.  ಜೈಸಲ್ಮೇರ್‌ನಲ್ಲಿರುವ ತನ್ನ ಸಹೋದರಿಯನ್ನು ಭೇಟಿಯಾಗಲು ಬಯಸಿದ್ದಕ್ಕಾಗಿ ಆ ವ್ಯಕ್ತಿ ಅವನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಗಳಿವೆ. ಆದಾಗ್ಯೂ, ಇದು ವಧುವನ್ನು ‘ಖರೀದಿಸಿದ’ ಪ್ರಕರಣವೂ ಆಗಿರಬಹುದು ಎಂಬ ಶಂಕೆ ಇದೆ. ಜುಂಜುನು, ನಾಗೌರ್ ಮತ್ತು ಪಾಲಿಯಂತಹ ಜಿಲ್ಲೆಗಳಿಂದ ವರದಿಯಾಗಿರುವ ಇನ್ನೊಂದು ರಾಜ್ಯದಿಂದ ಹೆಂಡತಿಯನ್ನು ‘ಖರೀದಿಸುವ’ ಭಯಾನಕ ಪದ್ಧತಿಯ ಉಲ್ಲೇಖವನ್ನೂ ಇಲ್ಲಿ ಮಾಡಲಾಗಿದೆ.

ಈ ರೀತಿಯಲ್ಲಿ ‘ಖರೀದಿಸಿದ’ ಮಹಿಳೆಯರು ತಮ್ಮ ‘ಪತಿ’ಯಿಂದ ಮತ್ತು ಅನೇಕ ಸಂದರ್ಭಗಳಲ್ಲಿ ಹಳ್ಳಿಯ ಇತರ ಪುರುಷರಿಂದ ದೈಹಿಕ, ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯವನ್ನು ಅನುಭವಿಸುತ್ತಾರೆ. ಅವರನ್ನು ಹೊಲಗಳಲ್ಲಿ ಬಲವಂತದ ದುಡಿಮೆಯ ಸ್ಥಿತಿಗೆ ತಳ್ಳಲಾಗುತ್ತದೆ ಮತ್ತು ಮನೆಗೆಲಸ ಮಾಡಲು ಒತ್ತಾಯಿಸಲಾಗುತ್ತದೆ. ಹಾಸಿಗೆಯಲ್ಲಿ ‘ಪತಿ’ಯನ್ನು ತೃಪ್ತಿಪಡಿಸಲು ನೂಕಲಾಗುತ್ತದೆ.

ಇದನ್ನೂ ಓದಿ:  Viral News: ವರದಕ್ಷಿಣೆಗಾಗಿ ಹೆಂಡತಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಹಿಂಸಿಸಿ ಕೊಂದ ಗಂಡ

ಎರಡೂ ಕೋನಗಳಲ್ಲಿ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರು ಹೇಳುತ್ತಾರೆ. ಅದರಲ್ಲಿ ಎರಡನೆಯದು ಮಾನವ ಕಳ್ಳಸಾಗಣೆ ಆಗಿದೆ. ಮಹಿಳೆಯನ್ನು 10 ತಿಂಗಳ ಹಿಂದೆ ₹ 2 ಲಕ್ಷಕ್ಕೆ 40 ರ ಹರೆಯದ ಪ್ರೇಮ್ ರಾಮ್ ಮೇಘವಾಲ್ ಎಂದು ಗುರುತಿಸಲಾಗಿರುವ ನಿರುದ್ಯೋಗಿ ಮತ್ತು ಮಾದಕ ವ್ಯಸನಿಯಾಗಿದ್ದ ವ್ಯಕ್ತಿಯಿಂದ ‘ಖರೀದಿಸಿರಬಹುದು’ ಎಂದು ಮೂಲಗಳು ತಿಳಿಸಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದು, ಇದೀಗ ಜೈಸಲ್ಮೇರ್‌ನಲ್ಲಿರುವ ಮಹಿಳೆಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ