
ಉದಯಪುರ, ಆಗಸ್ಟ್ 28: ಮಹಿಳೆಯೊಬ್ಬರು ತಮ್ಮ ಐವತ್ತೈದನೇ ವಯಸ್ಸಿನಲ್ಲಿ ತಮ್ಮ 17ನೇ ಮಗು(Baby)ವಿಗೆ ಜನ್ಮ ನೀಡಿರುವ ಘಟನೆ ಉದಯಪುರದಲ್ಲಿ ನಡೆದಿದೆ. ರೇಖಾ ಗಲ್ಬೆಲಿಯಾ ಎಂಬ ಮಹಿಳೆ ಈ ಹಿಂದೆ 16 ಮಕ್ಕಳಿಗೆ ಜನ್ಮ ನೀಡಿದ್ದರು. ಅವರ ನಾಲ್ವರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು ಹುಟ್ಟಿದ ಕೂಡಲೇ ಸಾವನ್ನಪ್ಪಿದ್ದವು.
ಅವರ ಬದುಕುಳಿದ ಮಕ್ಕಳ ಪೈಕಿ ಐದು ಮಂದಿಗೆ ಮದುವೆಯಾಗಿದ್ದು, ಅವರು ತಮ್ಮದೇ ಆದ ಮಕ್ಕಳನ್ನು ಹೊಂದಿದ್ದಾರೆ.ರೇಖಾ ಅವರ ಪತಿ ಕಾವ್ರಾ ಕಲ್ಬೆಲಿಯಾ ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ಎತ್ತಿ ತೋರಿಸಿದರು.ಅವರಿಗೆ ಸ್ವಂತ ಮನೆ ಇಲ್ಲ ಮತ್ತು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ ಎಂದು ಅವರು ಹೇಳಿದರು. ನಮ್ಮ ಮಕ್ಕಳನ್ನು ಪೋಷಿಸಲು, ನಾನು ಬಡ್ಡಿಗೆ ಹಣವನ್ನು ಸಾಲ ಪಡೆಯಬೇಕಾಯಿತು. ನಾನು ಲಕ್ಷಾಂತರ ರೂಪಾಯಿಗಳನ್ನು ಮರುಪಾವತಿಸಿದ್ದೇನೆ, ಆದರೆ ಸಾಲದ ಬಡ್ಡಿಯನ್ನು ಇನ್ನೂ ಸಂಪೂರ್ಣವಾಗಿ ಪಾವತಿಸಲಾಗಿಲ್ಲ ಎಂದು ಅವರು ಹೇಳಿದರು.
ಬಾಟಲಿ, ಚಿಂದಿ ಸಂಗ್ರಹಿಸುವ ಮೂಲಕ ಬದುಕು ಸಾಗಿಸುತ್ತಿರುವ ಈ ಕುಟುಂಬವು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಸಹ ಸಾಧ್ಯವಾಗುತ್ತಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಮಂಜೂರಾಗಿದ್ದರೂ, ಭೂಮಿ ನಮ್ಮ ಹೆಸರಿನಲ್ಲಿಲ್ಲದ ಕಾರಣ ನಾವು ನಿರಾಶ್ರಿತರಾಗಿಯೇ ಉಳಿದಿದ್ದೇವೆ. ಆಹಾರ, ಮದುವೆ ಅಥವಾ ಶಿಕ್ಷಣಕ್ಕೆ ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿಲ್ಲ. ಈ ಸಮಸ್ಯೆಗಳು ನಮ್ಮನ್ನು ಪ್ರತಿದಿನ ಕಾಡುತ್ತಿವೆ ಎಂದು ಕಾವ್ರಾ ಹೇಳಿದ್ದಾರೆ.
ಮತ್ತಷ್ಟು ಓದಿ:
ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವೇಳೆ ಮಗುವಿಗೆ ಜನ್ಮ ನೀಡಿದ ಅಂತಿಮ ವರ್ಷದ ವಿದ್ಯಾರ್ಥಿನಿ
ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ, ಇದು ಅವರ ನಾಲ್ಕನೇ ಮಗು ಎಂದು ಕುಟುಂಬ ಸದಸ್ಯರು ನಮಗೆ ತಿಳಿಸಿದರು. ನಂತರ, ಇದು ಅವರ 17 ನೇ ಮಗು ಎಂದು ತಿಳಿದುಬಂದಿದೆ ಎಂದು ಜಾಡೋಲ್ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞ ರೋಷನ್ ದರಂಗಿ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Thu, 28 August 25