ಸಾಯಿಬಾಬಾ ಜನ್ಮಸ್ಥಳ ಶಿರಡಿಯೋ? ಪಾತ್ರಿಯೋ? ವಿವಾದಕ್ಕೆ ಎಡೆ ಮಾಡಿದ ಉದ್ಧವ್ ಹೇಳಿಕೆ

ಮುಂಬೈ: ಒಂದಿಲ್ಲೊಂದು ಕಾಂಟ್ರವರ್ಸಿಗೆ ಹೆಸರಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈಗ ಮತ್ತೊಂದು ಎಡವಟ್ಟು ಮಾಡ್ಕೊಂಡಿದ್ದಾರೆ. ಉದ್ಧವ್ ನೀಡಿದ್ದ ಹೇಳಿಕೆಯೊಂದು ಬಾಬಾ ಭಕ್ತರನ್ನ ಕೆರಳುವಂತೆ ಮಾಡಿದೆ. ಸಾಯಿಬಾಬಾ ಕೋಟ್ಯಂತರ ಭಕ್ತರ ಆರಾಧ್ಯ ದೈವ. ಕೇಳಿದ ವರ ಕೊಡೋ ದೈವಸ್ವರೂಪಿ. ಇಂಥ ದೈವಮೂರ್ತಿಯ ಜನ್ಮಸ್ಥಳವೇ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಉದ್ಧವ್ ಠಾಕ್ರೆ ನುಡಿದ ಆ ಒಂದು ಮಾತು ಕಿಚ್ಚನ್ನೇ ಹಚ್ಚಿದೆ. ಭಕ್ತರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಹೀಗಾಗಿ ಮಹಾ ಸರ್ಕಾರದ ವಿರುದ್ಧ ಶಿರಡಿ ಜನ, ಭಕ್ತರು ಬೀದಿಗಿಳಿಯಲು […]

ಸಾಯಿಬಾಬಾ ಜನ್ಮಸ್ಥಳ ಶಿರಡಿಯೋ? ಪಾತ್ರಿಯೋ? ವಿವಾದಕ್ಕೆ ಎಡೆ ಮಾಡಿದ ಉದ್ಧವ್ ಹೇಳಿಕೆ
Follow us
ಸಾಧು ಶ್ರೀನಾಥ್​
|

Updated on:Jan 19, 2020 | 1:53 PM

ಮುಂಬೈ: ಒಂದಿಲ್ಲೊಂದು ಕಾಂಟ್ರವರ್ಸಿಗೆ ಹೆಸರಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈಗ ಮತ್ತೊಂದು ಎಡವಟ್ಟು ಮಾಡ್ಕೊಂಡಿದ್ದಾರೆ. ಉದ್ಧವ್ ನೀಡಿದ್ದ ಹೇಳಿಕೆಯೊಂದು ಬಾಬಾ ಭಕ್ತರನ್ನ ಕೆರಳುವಂತೆ ಮಾಡಿದೆ.

ಸಾಯಿಬಾಬಾ ಕೋಟ್ಯಂತರ ಭಕ್ತರ ಆರಾಧ್ಯ ದೈವ. ಕೇಳಿದ ವರ ಕೊಡೋ ದೈವಸ್ವರೂಪಿ. ಇಂಥ ದೈವಮೂರ್ತಿಯ ಜನ್ಮಸ್ಥಳವೇ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಉದ್ಧವ್ ಠಾಕ್ರೆ ನುಡಿದ ಆ ಒಂದು ಮಾತು ಕಿಚ್ಚನ್ನೇ ಹಚ್ಚಿದೆ. ಭಕ್ತರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಹೀಗಾಗಿ ಮಹಾ ಸರ್ಕಾರದ ವಿರುದ್ಧ ಶಿರಡಿ ಜನ, ಭಕ್ತರು ಬೀದಿಗಿಳಿಯಲು ಸಜ್ಜಾಗಿದ್ದಾರೆ.

ಸಾಯಿಬಾಬಾ ಜನ್ಮಸ್ಥಳ ಶಿರಡಿಯೋ? ಪಾತ್ರಿಯೋ? ಶಿರಡಿಯಲ್ಲೇ ಸಾಯಿಬಾಬಾ ಹುಟ್ಟಿರೋದು ಅಂತಾ ಕೋಟ್ಯಂತರ ಭಕ್ತರು ನಂಬಿದ್ದಾರೆ. ಅಹ್ಮದ್ ನಗರದ ಶಿರಡಿ ಸಾಯಿಬಾಬಾ ದರ್ಶನಕ್ಕೆ ಪ್ರತಿವರ್ಷ 1 ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡ್ತಾರೆ. ಆದ್ರೆ ಮಹಾರಾಷ್ಟ್ರ ಸಿಎಂ ಉದ್ಧವ್ ಮಾತ್ರ ಸಾಯಿಬಾಬಾ ಹುಟ್ಟಿದ್ದು ಶಿರಡಿಯಲ್ಲಲ್ಲ, ಪರ್ಬಾನಿ ಜಿಲ್ಲೆಯಲ್ಲಿ ಬರುವ ಪಾತ್ರಿಯಲ್ಲಿ ಎಂದಿದ್ದಾರೆ. ಜನವರಿ 9ರಂದು ಔರಂಗಬಾದ್​ಗೆ ಭೇಟಿ ನೀಡಿದ್ದ ಉದ್ಧವ್, ಪಾತ್ರಿಯನ್ನ ತೀರ್ಥಕ್ಷೇತ್ರವಾಗಿ ಡೆವಲಪ್ ಮಾಡೋದಾಗಿ ಹೇಳಿದ್ದರು.

ಇನ್ನು ಉದ್ಧವ್ ಉದ್ಧಟತನದ ಹೇಳಿಕೆಗೆ ಶಿರಡಿ ಜನ ಕಿಡಿಕಾರಿದ್ದಾರೆ. ಸಾಯಿಬಾಬಾ ತಮ್ಮ ಜನ್ಮಸ್ಥಳ, ಧರ್ಮ, ಪಂಥ ಯಾವುದನ್ನೂ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಸರ್ವಧರ್ಮ ಸಮಭಾವದಿಂದ ಎಲ್ರನ್ನ ಕಾಣ್ತಿದ್ರು. ಅದ್ಹೇಗೆ ಪಾತ್ರಿ ಸಾಯಿಬಾಬಾರ ಜನ್ಮಸ್ಥಳ ಅಂತೀರಿ ಎಂದು ಪ್ರಶ್ನಿಸ್ತಿದ್ದಾರೆ. ಜತೆಗೆ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಇಂದು ಶಿರಡಿ ಬಂದ್​ಗೆ ಕರೆ ಕೊಟ್ಟಿದ್ದಾರೆ. ಆದ್ರೆ ದೂರದಿಂದ ಬರೋ ಭಕ್ತರಿಗೆ ತೊಂದರೆಯಾಗ್ಬಾರದು ಅಂತಾ ಸಾಯಿಬಾಬಾ ದೇವಸ್ಥಾನ, ಶಿರಡಿಯ ಸಾಯಿ ಪ್ರಸಾದ ನಿಲಯ, ಸಾಯಿ ಭಕ್ತಿ ನಿವಾಸ ತೆರೆದಿರಲಿದೆ ಎಂದು ಟ್ರಸ್ಟ್ ಹೇಳಿದೆ.

ಪಾತ್ರಿ, ಶಿರಡಿಯಿಂದ 250 ಕಿಲೋಮೀಟರ್ ದೂರದಲ್ಲಿದೆ. ಒಂದ್ವೇಳೆ ಶಿರಡಿ ಮಾದರಿ ಪಾತ್ರಿ ಅಭಿವೃದ್ಧಿ ಮಾಡಿದ್ರೆ, ಸಾಯಿಬಾಬಾ ಭಕ್ತರು ಪಾತ್ರಿಗೂ ಭೇಟಿ ನೀಡೋಕೆ ಶುರು ಮಾಡ್ತಾರೆ. ಇದ್ರಿಂದ ಶಿರಡಿ ಪ್ರಾಮುಖ್ಯತೆ ಕಮ್ಮಿಯಾಗಿ, ಭಕ್ತರ ಸಂಖ್ಯೆ ಇಳಿಮುಖವಾಗುತ್ತೆ. ಇಷ್ಟೇ ಅಲ್ಲದೇ 2019ರಲ್ಲಿ ಶಿರಡಿ ಸಾಯಿಬಾಬಾ ಟ್ರಸ್ಟ್​ಗೆ 287 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಮುಂದಿನ ದಿನಗಳಲ್ಲಿ ದೇಣಿಗೆ ಕೂಡ ಕಮ್ಮಿಯಾಗುತ್ತೆ. ಹೀಗಾಗಿಯೇ ಪ್ರತಿಭಟನೆ ಕರೆ ನೀಡಲಾಗಿದೆ.

ಸಾಯಿಬಾಬಾ ಜನ್ಮಸ್ಥಳ ಪಾತ್ರಿ ಅಂದಿದ್ದು ಉದ್ಧವ್ ಒಬ್ಬರೇ ಅಲ್ಲ. 2018ರಲ್ಲಿ ರಾಷ್ಟ್ರಪತಿ ರಾಮ​ನಾಥ್ ಕೋವಿಂದ್ ಕೂಡ ಪಾತ್ರಿಯಲ್ಲೇ ಸಾಯಿಬಾಬಾ ಹುಟ್ಟಿರೋದು ಅಂದಿದ್ರು. ಆಗ ಶಿರಡಿ ಜನ್ರು ದೆಹಲಿಗೆ ತೆರಳಿ ರಾಷ್ಟ್ರಪತಿಗೆ ಮನವರಿಕೆ ಮಾಡೋ ಪ್ರಯತ್ನ ಮಾಡಿದ್ರು. ಈಗ ಉದ್ಧವ್ ಠಾಕ್ರೆ ವಿರುದ್ಧ ಸಿಡಿದೆದ್ದಿದ್ದು, ಏನಾಗುತ್ತೆ ಅನ್ನೋದನ್ನ ಕಾದು ನೋಡ್ಬೇಕು.

Published On - 1:48 pm, Sun, 19 January 20