ಬಹುಮತ ಸಾಬೀತು ಪಡಿಸಿದ ಠಾಕ್ರೆ ಮಹಾ ಮೈತ್ರಿ ಸರ್ಕಾರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ. ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ನ ಮೈತ್ರಿ ಸರ್ಕಾರದ ಪರ ಒಟ್ಟು 169 ಶಾಸಕರು ಮತ ಹಾಕಿದ್ದಾರೆ. ಇದೇ ವೇಳೆ ಬಿಜೆಪಿಯ ಎಲ್ಲ 105 ಶಾಸಕರು ಸಭಾತ್ಯಾಗ ಮಾಡಿದ್ದಾರೆ. ಸದನದಲ್ಲಿ ಹಾಜರಿದ್ದರೂ MNSನ ಓರ್ವ ಸೇರಿ ನಾಲ್ವರು ಶಾಸಕರು ತಟಸ್ಥರಾಗಿದ್ದರು. ಬಹುಮತವಿಲ್ಲದ ಕಾರಣ ಬಿಜೆಪಿಯ ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕೇ ದಿನಕ್ಕೆ ರಾಜೀನಾಮೆ ನೀಡಿದ್ದರು.  

ಬಹುಮತ ಸಾಬೀತು ಪಡಿಸಿದ ಠಾಕ್ರೆ ಮಹಾ ಮೈತ್ರಿ ಸರ್ಕಾರ

Updated on: Nov 30, 2019 | 3:24 PM

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿದ್ದಾರೆ.

ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ನ ಮೈತ್ರಿ ಸರ್ಕಾರದ ಪರ ಒಟ್ಟು 169 ಶಾಸಕರು ಮತ ಹಾಕಿದ್ದಾರೆ. ಇದೇ ವೇಳೆ ಬಿಜೆಪಿಯ ಎಲ್ಲ 105 ಶಾಸಕರು ಸಭಾತ್ಯಾಗ ಮಾಡಿದ್ದಾರೆ. ಸದನದಲ್ಲಿ ಹಾಜರಿದ್ದರೂ MNSನ ಓರ್ವ ಸೇರಿ ನಾಲ್ವರು ಶಾಸಕರು ತಟಸ್ಥರಾಗಿದ್ದರು.

ಬಹುಮತವಿಲ್ಲದ ಕಾರಣ ಬಿಜೆಪಿಯ ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕೇ ದಿನಕ್ಕೆ ರಾಜೀನಾಮೆ ನೀಡಿದ್ದರು.  

Published On - 3:20 pm, Sat, 30 November 19