ಶಿಂಧೆ ಬಣವೇ ನಿಜವಾದ ಶಿವಸೇನಾ ಎಂದ ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೊರೆಹೋದ ಉದ್ಧವ್ ಬಣ

|

Updated on: Jan 15, 2024 | 4:39 PM

ಜನವರಿ 10ರಂದು ಮಹಾರಾಷ್ಟ್ರ ಸ್ಪೀಕರ್ "ಚುನಾವಣಾ ಆಯೋಗವು ಒದಗಿಸಿದ ಶಿವಸೇನಾ ಸಂವಿಧಾನವು ನಿಜವಾದ ಸಂವಿಧಾನವಾಗಿದೆ, ಇದನ್ನು ಎಸ್ಎಸ್ ಸಂವಿಧಾನ ಎಂದು ಕರೆಯಲಾಗುತ್ತದೆ". ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನಾ ಎಂದು ನಿರ್ಧಾರ ಪ್ರಕಟಿಸಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ

ಶಿಂಧೆ ಬಣವೇ ನಿಜವಾದ ಶಿವಸೇನಾ ಎಂದ ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೊರೆಹೋದ ಉದ್ಧವ್ ಬಣ
ಉದ್ಧವ್ ಠಾಕ್ರೆ
Follow us on

ಮುಂಬೈ ಜನವರಿ 15: ಏಕನಾಥ್ ಶಿಂಧೆ (Eknath Shinde) ನೇತೃತ್ವದ ಬಣವನ್ನು ‘ನಿಜವಾದ ಶಿವಸೇನಾ’ (real Shiv Sena) ಎಂದು ಗುರುತಿಸುವ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ (Rahul Narwekar) ಅವರ ನಿರ್ಧಾರದ ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನಾ ಬಣ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಶಿಂಧೆ ಬಣಕ್ಕೆ ಸೇರಿದ 16 ಶಾಸಕರನ್ನು ಅನರ್ಹಗೊಳಿಸುವಂತೆ ಉದ್ಧವ್ ಬಣದ ಮನವಿಯನ್ನೂ ಮಹಾರಾಷ್ಟ್ರ ಸ್ಪೀಕರ್ ತಿರಸ್ಕರಿಸಿದ್ದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ 16 ಶಿವಸೇನೆ ಶಾಸಕರ ಅನರ್ಹತೆಯ ವಿರುದ್ಧದ ಅರ್ಜಿಗಳನ್ನು ಜನವರಿ 10 ಬುಧವಾರ ವಜಾಗೊಳಿಸಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, “ಪಕ್ಷದ 2018 ರ ಸಂವಿಧಾನವನ್ನು ಚುನಾವಣಾ ಆಯೋಗ ದಾಖಲೆಯಲ್ಲಿಲ್ಲದ ಕಾರಣ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. “ಚುನಾವಣಾ ಆಯೋಗವು ಒದಗಿಸಿದ ಶಿವಸೇನಾ ಸಂವಿಧಾನವು ನಿಜವಾದ ಸಂವಿಧಾನವಾಗಿದೆ, ಇದನ್ನು ಎಸ್ಎಸ್ ಸಂವಿಧಾನ ಎಂದು ಕರೆಯಲಾಗುತ್ತದೆ” ಎಂದು ಸ್ಪೀಕರ್ ಹೇಳಿದ್ದು ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನಾ ಎಂದಿದ್ದಾರೆ.

ಸ್ಪೀಕರ್ ಹೇಳಿದ್ದೇನು?

ಶಿವಸೇನಾದ ಎರಡು ಬಣಗಳು ಚುನಾವಣಾ ಆಯೋಗಕ್ಕೆಗೆ ಸಲ್ಲಿಸಿದ ಸಂವಿಧಾನದ ಬಗ್ಗೆ ಯಾವುದೇ ಒಮ್ಮತವಿಲ್ಲ. ನಾಯಕತ್ವ ರಚನೆಯ ಬಗ್ಗೆ ಎರಡು ಪಕ್ಷಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಏಕೈಕ ಅಂಶವೆಂದರೆ ಶಾಸಕಾಂಗ ಪಕ್ಷದಲ್ಲಿ ಬಹುಮತ. ವಿವಾದದ ಮೊದಲು ಅಸ್ತಿತ್ವದಲ್ಲಿದ್ದ ನಾಯಕತ್ವ ರಚನೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಸಂಬಂಧಿತ ಸಂವಿಧಾನವನ್ನು ನಾನು ನಿರ್ಧರಿಸಬೇಕಾಗಿದೆ ಎಂದು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದಾರೆ.

ವಿಭಜನೆಯ ಹೊರಹೊಮ್ಮುವಿಕೆಯು 22 ಜೂನ್ 2022 ರಂದು ಮುನ್ನೆಲೆಗೆ ಬಂದಿತು. ನಾಯಕತ್ವದ ರಚನೆಯನ್ನು ನಿರ್ಧರಿಸಲು ಪಕ್ಷದ 2018 ರ ಸಂವಿಧಾನವನ್ನು ಉಲ್ಲೇಖಿಸಲಾಗಿದೆ. 2018 ರ ನಾಯಕತ್ವ ರಚನೆಯು ಪಕ್ಷ ಪ್ರಮುಖ್ ಅನ್ನು ಅತ್ಯುನ್ನತ ಕಚೇರಿ ಎಂದು ಉಲ್ಲೇಖಿಸುತ್ತದೆ. ರಾಜಕೀಯ ಪಕ್ಷದ ಅತ್ಯುನ್ನತ ಕಚೇರಿಯು ಪಕ್ಷ ಪ್ರಮುಖ್ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಅತ್ಯುನ್ನತ ಕಾರ್ಯಕಾರಿ ಸಂಸ್ಥೆಯಾಗಿದೆ. 2018 ರ ರಚನೆಯು ದೃಢೀಕರಣಕ್ಕೆ ಅನುಗುಣವಾಗಿಲ್ಲ. ನಿಜವಾದ ಪಕ್ಷ ಯಾವುದು ಎಂದು ನಿರ್ಧರಿಸಲು ಇದು ಅಳತೆಗೋಲು ಆಗುವುದಿಲ್ಲ.

ನನ್ನ ಮುಂದಿರುವ ಸಾಕ್ಷ್ಯಗಳು ಮತ್ತು ದಾಖಲೆಗಳ ದೃಷ್ಟಿಯಿಂದ, ಪ್ರಾಥಮಿಕವಾಗಿ 2013 ರಲ್ಲಿ ಮತ್ತು 2018 ರಲ್ಲಿ ಯಾವುದೇ ಚುನಾವಣೆ ನಡೆದಿಲ್ಲ ಎಂದು ಸೂಚಿಸುತ್ತದೆ. ನಾನು 10ನೇ ಶೆಡ್ಯೂಲ್ ಅಡಿಯಲ್ಲಿ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವ ಸ್ಪೀಕರ್ ಆಗಿ ಸೀಮಿತ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದೇನೆ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ECI ಯ ದಾಖಲೆಯನ್ನು ಮೀರಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಸಂಬಂಧಿತ ನಾಯಕತ್ವ ರಚನೆಯನ್ನು ನಿರ್ಧರಿಸುವಾಗ ನಾನು ಈ ಅಂಶವನ್ನು ಪರಿಗಣಿಸಿಲ್ಲ. ಹೀಗಾಗಿ, ಮೇಲಿನ ತೀರ್ಮಾನಗಳನ್ನು ಗಮನಿಸಿದರೆ, ಇಸಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಫೆಬ್ರವರಿ 27, 2018 ರ ಪತ್ರದಲ್ಲಿ ಶಿವಸೇನೆಯ ನಾಯಕತ್ವದ ರಚನೆಯು ಪ್ರತಿಬಿಂಬಿತವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ.

ಇದನ್ನೂ ಓದಿ: Sena Vs Sena Verdict: ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್

1999 ರ ಸಂವಿಧಾನವು ಪ್ರತಿಸ್ಪರ್ಧಿ ಗುಂಪುಗಳು ಹುಟ್ಟುವ ಮೊದಲು ಶಿವಸೇನೆಯಿಂದ ಚುನಾವಣಾ ಆಯೋಗಕ್ಕೆ ಸಲ್ಲಿಸಲ್ಪಟ್ಟ ಸಂವಿಧಾನವಾಗಿದೆ. ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ ಶಿಂಧೆ ಬಣವೇ ನಿಜವಾದ ಶಿವಸೇನಾ ಎಂದು ಸ್ಪೀಕರ್ ಹೇಳಿದ್ದಾರೆ .

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Mon, 15 January 24