ಏಕನಾಥ್ ಶಿಂಧೆ ಗದ್ದುಗೆಯೇರಿ ಒಂದೂವರೆ ವರ್ಷವಾದರೂ ಯಾಕೆ ಇನ್ನು ಈ ವಚನ ಈಡೇರಿಸಿಲ್ಲ?: ಉದ್ಧವ್ ಠಾಕ್ರೆ

ಸರ್ಕಾರಕ್ಕೆ ರಾಜ್ಯ ಜನರಿಕ್ಕಿಂತ ಅವರ ಸ್ವಾರ್ಥವೇ ಮುಖ್ಯವಾಗಿದೆ. ಈ ಬಗ್ಗೆ ಮರಾಠಾ ಮೀಸಲಾತಿ ಮನೋಜ್ ಜಾರಂಗೆ ಪಾಟೀಲ್ ಒಂದು ತೀರ್ಮಾನಕ್ಕೆ ಬರಬೇಕು ಹಾಗೂ ಸಮಾಜ, ರಾಜ್ಯಕ್ಕೆ ನಿಮ್ಮಂತಹ ಹೋರಾಟಗಾರರು ಬೇಕು ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮರಾಠಾ ಸಮುದಾಯದ ಯುವಕರು ಆತ್ಮಹತ್ಯೆಯಂತ ಅನಾಹುತಗಳನ್ನು ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.

ಏಕನಾಥ್ ಶಿಂಧೆ ಗದ್ದುಗೆಯೇರಿ ಒಂದೂವರೆ ವರ್ಷವಾದರೂ ಯಾಕೆ ಇನ್ನು ಈ ವಚನ ಈಡೇರಿಸಿಲ್ಲ?: ಉದ್ಧವ್ ಠಾಕ್ರೆ
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 31, 2023 | 4:45 PM

ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಒಂದು ಕಡೆ ಸರ್ಕಾರ ಈ ಬಗ್ಗೆ ಸದನದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದೆ. ಜತೆಗೆ ನೆನ್ನೆ ಉನ್ನತ ಮಟ್ಟದ ಸಭೆಯನ್ನು ನಡೆಸಿದೆ. ಇದೀಗ ಈ ಜಗಳಕ್ಕೆ ಪ್ರತಿಪಕ್ಷಗಳು ಕೂಡ ಎಂಟ್ರಿಯಾಗಿದೆ. ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಏಕನಾಥ್ ಶಿಂಧೆ ಸರ್ಕಾರವನ್ನು ಉದ್ಧವ್ ಠಾಕ್ರೆ ಟೀಕಿಸಿದ್ದಾರೆ. ನೆನ್ನೆ ಮುಖ್ಯಮಂತ್ರಿಗಳು ಸಭೆ ನಡೆಸಿದರು. ಈ ಸಭೆ ಇಬ್ಬರು ಉಪಮುಖ್ಯಮಂತ್ರಿಗಳು ಬಂದಿಲ್ಲ. ಒಬ್ಬರಿಗೆ ಡೆಂಗ್ಯೂ, ಮತ್ತೊಬ್ಬರಿಗೆ ರಾಜ್ಯಕ್ಕಿಂತ ರಾಯ್‌ಪುರದ ಚುನಾವಣಾ ಪ್ರಚಾರ ಹೆಚ್ಚಾಗಿದೆ ಎಂದು ಶಿಂಧೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರಕ್ಕೆ ರಾಜ್ಯ ಜನರಿಕ್ಕಿಂತ ಅವರ ಸ್ವಾರ್ಥವೇ ಮುಖ್ಯವಾಗಿದೆ. ಈ ಬಗ್ಗೆ ಮರಾಠಾ ಮೀಸಲಾತಿ ಮನೋಜ್ ಜಾರಂಗೆ ಪಾಟೀಲ್ ಒಂದು ತೀರ್ಮಾನಕ್ಕೆ ಬರಬೇಕು ಹಾಗೂ ಸಮಾಜ, ರಾಜ್ಯಕ್ಕೆ ನಿಮ್ಮಂತಹ ಹೋರಾಟಗಾರರು ಬೇಕು ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮರಾಠಾ ಸಮುದಾಯದ ಯುವಕರು ಆತ್ಮಹತ್ಯೆಯಂತ ಅನಾಹುತಗಳನ್ನು ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಏಕನಾಥ್ ಶಿಂಧೆ ಬಣದ 40, ಉದ್ಧವ್ ಠಾಕ್ರೆ ಬಣದ 14 ಶಾಸಕರಿಗೆ ಅನರ್ಹತೆ ಅರ್ಜಿ ಸಂಬಂಧ ನೋಟಿಸ್

ರಾಜ್ಯದಲ್ಲಿ ಇಂತಹ ಅನೇಕ ಪಿತ್ತೂರಿಗಳು ನಡೆಯುತ್ತಿದೆ. ಮಹಾರಾಷ್ಟ್ರಕ್ಕೆ ಕೆಟ್ಟ ಹೆಸರು ತರಬೇಕು ಎಂಬು ಉದ್ದೇಶದಿಂದ ಇಂತಹ ಅನೇಕ ಕೃತ್ಯಗಳು ನಡೆಯುತ್ತಿದೆ. ಮಹಾರಾಷ್ಟ್ರಕ್ಕೆ ಬರಬೇಕಾ ಕೈಗಾರಿಕೆಗಳು ಗುಜರಾತಿಗೆ ಹೋಗಿದೆ. ಮಹಾರಾಷ್ಟ್ರಕ್ಕೆ ಹೊಸ ಕೈಗಾರಿಕೆಗಳು ಬರದಂತೆ ಮಾಡಲಾಗುತ್ತಿದೆ. ಇನ್ನು ಇಲ್ಲಿನ ಯುವಕರಿಗೆ ಉದ್ಯೋಗವನ್ನು ಹೇಗೆ ಒದಗಿಸುವುದು ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಸಮಾಜದಲ್ಲಿ ಒಂದು ರೀತಿಯ ಭಯದ ವಾತಾವರಣ ಉಂಟಾಗಿದೆ. ಮರಾಠರು ಖಂಡಿತವಾಗಿಯು ತಮ್ಮ ಹಕ್ಕು ಪಡೆಯುತ್ತಾರೆ. ಮರಾಠಾ ಸ್ವಾಭಿಮಾನಿಗಳು ಅವರು ಯಾರ ಹಂಗಿನಲ್ಲು ಇಲ್ಲ ಎಂದು ಹೇಳಿದ್ದಾರೆ. ಮರಾಠಾ ಸಮುದಾಯ, ಧಂಗರ್, ಒಬಿಸಿಗಳಿಗೆ ಈ ಸರ್ಕಾರ ಭಯವನ್ನು ಉಂಟು ಮಾಡಿದೆ ಎಂದರು.

ಮರಾಠ ಸಮುದಾಯಕ್ಕೆ ಶಾಶ್ವತ ಮೀಸಲಾತಿ ಕಲ್ಪಿಸುವಂತೆ ಆಜಾದ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಎದುರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಗದ್ದುಗೆಯೇರಿ ಒಂದೂವರೆ ವರ್ಷವಾದರೂ ಯಾಕೆ ಇನ್ನು ಈ ವಚನವನ್ನು ಈಡೇರಿಸಿಲ್ಲ? ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ