‘ತಪ್ಪಾಗಿಯೂ ಅಲರ್ಟ್ ಬಂದಿರಬಹುದು…’- ಆ್ಯಪಲ್ ಸ್ಪಷ್ಟನೆ; ನೋಟಿಫಿಕೇಶನ್ ಬುಡ ಶೋಧಿಸಲು ಸರ್ಕಾರದಿಂದ ತನಿಖೆ

Apple Threat Notification Issue: ಎಚ್ಚರಿಕೆ ಸಂದೇಶಗಳು ಯಾವ ಸರ್ಕಾರಿ ಪ್ರಾಯೋಜಿತ ದಾಳಿಕೋರರೆಂದು ನಿರ್ದಿಷ್ಟಪಡಿಸಲಾಗುವುದಿಲ್ಲ ಎಂದು ಆ್ಯಪಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಗೆಯೇ, ಅದಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿದೆ. ಯಾವ ಕಾರ್ಯದಿಂದ ಥ್ರೆಟ್ ನೋಟಿಫಿಕೇಶನ್ ಕೊಡಲಾಗಿದೆ ಎಂಬ ಮಾಹಿತಿಯನ್ನು ಕೊಡಲಾಗುವುದಿಲ್ಲ. ಯಾಕೆಂದರೆ, ಆ ಮಾಹಿತಿ ಬಹಿರಂಗಪಡಿಸಿಬಿಟ್ಟರೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಎಚ್ಚೆತ್ತುಕೊಂಡು, ಕಣ್ತಪ್ಪಿಸಿಕೊಳ್ಳಲು ನೆರವಾಗಬಹುದು ಎಂದು ಆ್ಯಪಲ್ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

‘ತಪ್ಪಾಗಿಯೂ ಅಲರ್ಟ್ ಬಂದಿರಬಹುದು...’- ಆ್ಯಪಲ್ ಸ್ಪಷ್ಟನೆ; ನೋಟಿಫಿಕೇಶನ್ ಬುಡ ಶೋಧಿಸಲು ಸರ್ಕಾರದಿಂದ ತನಿಖೆ
ಆ್ಯಪಲ್ ಐಫೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 31, 2023 | 3:47 PM

ನವದೆಹಲಿ, ಅಕ್ಟೋಬರ್ 31: ತಮ್ಮ ಮೊಬೈಲ್ ಅನ್ನು ಸರ್ಕಾರ ಹ್ಯಾಕ್ ಮಾಡಿಸಲು ಯತ್ನಿಸುತ್ತಿದೆ ಎಂದು ವಿಪಕ್ಷ ಸದಸ್ಯರು (opposition leaders) ಮಾಡಿರುವ ಆರೋಪ ಸಾಕಷ್ಟು ಸದ್ದು ಮಾಡುತ್ತಿದೆ. ಸರ್ಕಾರಿ ಪ್ರಾಯೋಜಿತ ಹ್ಯಾಕರ್​ಗಳು ನಿಮ್ಮ ಐಫೋನ್ ಅನ್ನು ಗುರಿ ಮಾಡಿ ದಾಳಿ ಮಾಡುತ್ತಿರಬಹುದು ಎಂದು ಆ್ಯಪಲ್​ನಿಂದ ಬಂದ ಅಲರ್ಟ್ ನೋಟಿಫಿಕೇಶನ್ (threat alert notification) ಅನ್ನು ತೋರಿಸಿ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಈ ಬಗ್ಗೆ ಆ್ಯಪಲ್ ಸಂಸ್ಥೆ ಇಂದು ಮಂಗಳವಾರ (ಅ. 31) ಹೇಳಿಕೆ ನೀಡಿದ್ದು, ತಮ್ಮ ಥ್ರೆಟ್ ನೋಟಿಫಿಕೇಶನ್​ಗಳು ಯಾವ ದಾಳಿಕೋರನೆಂದು ನಿರ್ದಿಷ್ಟಪಡಿಸುವುದಿಲ್ಲ (“Can’t attribute threat notifications to any specific state-sponsored attacker”) ಎಂದು ಸ್ಪಷ್ಟಪಡಿಸಿದೆ.

ಎಚ್ಚರಿಕೆ ಸಂದೇಶಗಳು ಯಾವ ಸರ್ಕಾರಿ ಪ್ರಾಯೋಜಿತ ದಾಳಿಕೋರರೆಂದು ನಿರ್ದಿಷ್ಟಪಡಿಸಲಾಗುವುದಿಲ್ಲ ಎಂದು ಆ್ಯಪಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಗೆಯೇ, ಅದಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿದೆ. ಯಾವ ಕಾರ್ಯದಿಂದ ಥ್ರೆಟ್ ನೋಟಿಫಿಕೇಶನ್ ಕೊಡಲಾಗಿದೆ ಎಂಬ ಮಾಹಿತಿಯನ್ನು ಕೊಡಲಾಗುವುದಿಲ್ಲ. ಯಾಕೆಂದರೆ, ಆ ಮಾಹಿತಿ ಬಹಿರಂಗಪಡಿಸಿಬಿಟ್ಟರೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಎಚ್ಚೆತ್ತುಕೊಂಡು, ಕಣ್ತಪ್ಪಿಸಿಕೊಳ್ಳಲು ನೆರವಾಗಬಹುದು ಎಂದು ಆ್ಯಪಲ್ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಆ್ಯಪಲ್​ನ ಥ್ರೆಟ್ ನೋಟಿಫಿಕೇಶನ್​​ಗಳು ಅಪೂರ್ಣವಾದ ಅಥವಾ ಅಸ್ಪಷ್ಟ ಮಾಹಿತಿ ಅಧರಿಸಿ ಬಂದಿರಬಹುದು. ಈ ಅಲರ್ಟ್​ಗಳು ಕೆಲವೊಮ್ಮೆ ತಪ್ಪಾಗಿ ಬಂದಿರಬಹುದು. ಕೆಲ ದಾಳಿಗಳು ಗಮನಕ್ಕೆ ಬರದೇ ಹೋಗಿರಬಹುದು ಎಂದೂ ಆ್ಯಪಲ್ ಹೇಳಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರ ನನ್ನ ಫೋನ್, ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ: ಮಹುವಾ ಮೊಯಿತ್ರಾ

ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ, ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಶಶಿ ತರೂರ್, ಪವನ್ ಖೇರಾ, ಕೆಸಿ ವೇಣುಗೋಪಾಲ್, ಸುಪ್ರಿಯಾ ಶಿಣಾತ್ರೆ, ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಮೊದಲಾದವರು ಆ್ಯಪಲ್​ನ ಥ್ರೆಟ್ ನೋಟಿಫಿಕೇಶನ್ ಪಡೆದಿರುವುದಾಗಿ ಹೇಳಿದವರು.

ಏನಿದೆ ಆ್ಯಪಲ್ ಮೆಸೇಜ್​ನಲ್ಲಿ?

ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗುರಿ ಮಾಡುತ್ತಿರಬಹುದು ಎಂದು ಹೆಡ್​ಲೈನ್ ಹಾಕಿ ಆ್ಯಪಲ್ ಈ ಕೆಳಗಿನ ಸಂದೇಶ ಕಳುಹಿಸಿದೆ.

‘ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮನ್ನು ಗುರಿ ಮಾಡುತ್ತಿರುವಂತೆ ಅನಿಸುತ್ತಿದೆ. ನಿಮ್ಮ ಆ್ಯಪಲ್ ಐಡಿಯೊಂದಿಗೆ ಜೋಡಿತವಾಗಿರುವ ಐಫೋನ್ ಅನ್ನು ದೂರದಿಂದಲೇ ನಿಯಂತ್ರಿಸಲು ಇವರು ಪ್ರಯತ್ನಿಸುತ್ತಿದ್ದಾರೆ. ನಿಮ್ಮ ವ್ಯಕ್ತಿತ್ವದ ಕಾರಣಕ್ಕೆ ಈ ದಾಳಿಕೋರರು ವೈಯಕ್ತಿಕವಾಗಿ ನಿಮ್ಮನ್ನು ಟಾರ್ಗೆಟ್ ಮಾಡುತ್ತಿರಬಹುದು. ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ನಿಮ್ಮ ಸಾಧನವು ಅಪಾಯಕ್ಕೊಳಗಾಗಿದ್ದರೆ ನಿಮ್ಮ ಸೂಕ್ಷ್ಮ ಮಾಹಿತಿ, ಸಂವಹನ, ಕ್ಯಾಮರಾ, ಮೈಕ್ರೋಫೋನ್ ಅನ್ನು ಅವರು ದೂರದಿಂದಲೇ ನಿಯಂತ್ರಿಸಬಲ್ಲವರಾಗಿರುತ್ತಾರೆ. ಇದು ತಪ್ಪಾಗಿ ಬಂದಿರುವ ಎಚ್ಚರಿಕೆಯೂ ಆಗಿದ್ದಿರಬಹುದು. ಆದರೂ ಕೂಡ ಈ ಎಚ್ಚರಿಕೆಯನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಿ’ ಎಂದು ಥ್ರೆಟ್ ನೋಟಿಫಿಕೇಶನ್​ನಲ್ಲಿ ಆ್ಯಪಲ್ ತಿಳಿಸಿದೆ.

ಇದನ್ನೂ ಓದಿ: Mukesh Ambani: ಉದ್ಯಮಿ ಮುಕೇಶ್ ಅಂಬಾನಿಗೆ ಮತ್ತೆ ಜೀವ ಬೆದರಿಕೆ, 400 ಕೋಟಿ ರೂ.ಗೆ ಬೇಡಿಕೆ

ಆ್ಯಪಲ್ ಕಂಪನಿ ತನ್ನ ವೆಬ್​ಸೈಟ್​ನಲ್ಲಿ ಈ ರೀತಿಯ ಥ್ರೆಟ್ ಅಲರ್ಟ್ ಸಂದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆ. ಮಾಮೂಲಿಯ ಸೈಬರ್ ಅಪರಾಧಿಗಳಿಗಿಂತ ಸರ್ಕಾರಿ ಪ್ರಾಯೋಜಿತ ದಾಳಿಕೋರರು ವಿಶೇಷ ಸಂಪನ್ಮೂಲಗಳನ್ನು ಬಳಕೆ ಮಾಡುತ್ತಾರೆ. ಬಹಳ ನಿರ್ದಿಷ್ಟ ವ್ಯಕ್ತಿ ಮತ್ತು ಸಾಧನಗಳನ್ನು ಗುರಿ ಮಾಡುತ್ತಾರೆ. ಹೀಗಾಗಿ, ಇವುಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ ಎಂದು ತನ್ನ ಸಪೋರ್ಟ್ ಪೇಜ್​ನಲ್ಲಿ ಆ್ಯಪಲ್ ತಿಳಿಸಿದೆ.

ಸರ್ಕಾರದಿಂದ ತನಿಖೆ

ವಿಪಕ್ಷ ನಾಯಕರ ಐಫೋನ್​ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಯಾಗಿವೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿರುವುದು ವರದಿಯಾಗಿದೆ. ಕೇಂದ್ರ ಸಚಿವ ಎ ವೈಷ್ಣವ್ ಕೂಡ ಈ ವಿಚಾರವನ್ನು ಪುನರುಚ್ಚರಿಸಿದ್ದಾರೆ.

‘ಆ್ಯಪಲ್​ನಿಂದ ನೋಟಿಫಿಕೇಶನ್ ಬಂದಿರುವ ಬಗ್ಗೆ ಕೆಲ ಸಂಸದರು ನೀಡಿರುವ ಹೇಳಿಕೆಗಳು ಆತಂಕ ಮೂಡಿಸುತ್ತವೆ. ಈ ಅಲರ್ಟ್​ಗಳು ತಪ್ಪಾಗಿ ಬಂದಿರಬಹುದು ಎಂದು ಆ್ಯಪಲ್ ಹೇಳುತ್ತಿದೆ. ಆ್ಯಪಲ್ ಐಡಿಗಳನ್ನು ಬಹಳ ಸುರಕ್ಷಿತವಾಗಿ ಎನ್​ಕ್ರಿಪ್ಟ್ ಮಾಡಲಾಗಿದ್ದು ಅದನ್ನು ಬಳಕೆದಾರರ ಅನುಮತಿ ಇಲ್ಲದೇ ಗುರುತಿಸಲು ಆಗುವುದಿಲ್ಲ. ಎಲ್ಲಾ ಪ್ರಜೆಗಳ ಸುರಕ್ಷತೆ ಮತ್ತು ಖಾಸಗಿತನ ಕಾಪಾಡುವ ಕೆಲಸವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಈ ನೋಟಿಫಿಕೇಶನ್​ಗಳ ಬುಡ ಹುಡುಕಲು ತನಿಖೆ ನಡೆಸುತ್ತದೆ. ಆ್ಯಪಲ್ ಕೂಡ ಈ ತನಿಖೆಯಲ್ಲಿ ಕೈಜೋಡಿಸಬೇಕೆಂದು ಕೇಳಿಕೊಂಡಿದ್ದೇವೆ’ ಎಂದು ಅಶ್ವಿನಿ ವೈಷ್ಣವ್ ತಮ್ಮ ಸರಣಿ ಟ್ವೀಟ್​ಗಳಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ