Uddhav Thackeray: ಸಾವರ್ಕರ್ ನಮ್ಮ ದೇವರು ಅವರಿಗೆ ಅವಮಾನ ಮಾಡಿದರೆ ನಾವು ಸಹಿಸುವುದಿಲ್ಲ: ರಾಹುಲ್​ ಗಾಂಧಿಗೆ ಠಾಕ್ರೆ ಎಚ್ಚರಿಕೆ

|

Updated on: Mar 27, 2023 | 7:48 AM

ಸಾವರ್ಕರ್ ನಮ್ಮ ದೇವರು ಅವರನ್ನು ಅವಮಾನಿಸಿದರೆ ನಾವು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

Uddhav Thackeray: ಸಾವರ್ಕರ್ ನಮ್ಮ ದೇವರು ಅವರಿಗೆ ಅವಮಾನ ಮಾಡಿದರೆ ನಾವು ಸಹಿಸುವುದಿಲ್ಲ: ರಾಹುಲ್​ ಗಾಂಧಿಗೆ ಠಾಕ್ರೆ ಎಚ್ಚರಿಕೆ
ಉದ್ಧವ್ ಠಾಕ್ರೆ-ರಾಹುಲ್ ಗಾಂಧಿ
Follow us on

ಸಾವರ್ಕರ್ ನಮ್ಮ ದೇವರು ಅವರನ್ನು ಅವಮಾನಿಸಿದರೆ ನಾವು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಟ್ಟಾಗಿ ಹೋರಾಡಬೇಕಿದೆ, ಸಾವರ್ಕರ್ ಅವರು 14 ವರ್ಷಗಳ ಕಾಲ ಅಂಡಮಾನ್​ ಜೈಲಿನಲ್ಲಿ ಊಹಿಸಲಾಗದ ಚಿತ್ರಹಿಂಸೆಗಳನ್ನು ಅನುಭವಿಸಿದ್ದಾರೆ. ಅವರ ತ್ಯಾಗವನ್ನು ನೆನೆಯಬೇಕೇ ವಿನಃ ಅವರನ್ನು ತೆಗಳಬಾರದು ಎಂದರು.

2019ರಲ್ಲಿ ಮೋದಿ ಉಪನಾಮ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯವು ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಧಾನಮಂತ್ರಿಯವರು ನನ್ನ ಮುಂದಿನ ಭಾಷಣದ ಬಗ್ಗೆ ಭಯಭೀತರಾಗಿದ್ದಾರೆ. ಲಂಡನ್‌ನಲ್ಲಿ ತಾವು ಮಾಡಿದ್ದ ಭಾಷಣಕ್ಕೆ ಮತ್ತು ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ರಾಹುಲ್‌ ಅವರು ತಮ್ಮ ಹೇಳಿಕೆಗಳಿಗೆ ಏಕೆ ಕ್ಷಮೆಯಾಚಿಸಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಾರಿ ಕೇಳಲು ನನ್ನ ಹೆಸರು ಸಾವರ್ಕರ್ ಅಲ್ಲ ಎಂದು ಹೇಳಿದ್ದರು.

ಪ್ರಧಾನಿ ನನ್ನ ಮುಂದಿನ ಭಾಷಣಕ್ಕೆ ಹೆದರಿದ್ದರಿಂದ ನನ್ನನ್ನು ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ನಾನು ಅವರ ಕಣ್ಣುಗಳಲ್ಲಿ ಭಯವನ್ನು ಕಂಡಿದ್ದೇನೆ. ಅದಕ್ಕಾಗಿಯೇ ನಾನು ಸಂಸತ್ತಿನಲ್ಲಿ ಮಾತನಾಡಲು ಅವರು ಬಯಸುವುದಿಲ್ಲ ಎಂದರು. ತಾವು ಬಿಜೆಪಿ ಕ್ಷಮೆಯಾಚನೆ ಮಾಡಬೇಕು ಎಂಬ ಕರೆಗೆ ಪ್ರತಿಕ್ರಿಯಿಸಿದ ಅವರು ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ನಾನು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು.

ರಾಹುಲ್ ಗಾಂಧಿಯವರು ಸಾವರ್ಕರ್ ಅವರನ್ನು ಕೀಳಾಗಿ ಕಾಣುವುದನ್ನು ಮುಂದುವರಿಸಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕುಗಳು ಉಂಟಾಗುತ್ತವೆ ಎಂದು ಅವರು ಹೇಳಿದರು. ಉದ್ಧವ್ ಠಾಕ್ರೆ, ಅವರ ಸೇನಾ ಬಣವು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮಿತ್ರ ಪಕ್ಷವಾಗಿದೆ, ಆದಾಗ್ಯೂ, ರಾಹುಲ್ ಗಾಂಧಿಯವರು ಪ್ರಚೋದನೆಗೆ ಒಳಗಾಗಬೇಡಿ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಒಟ್ಟಾಗಿ ಬನ್ನಿ ಎಂದು ಒತ್ತಾಯಿಸಿದರು.

ಮತ್ತಷ್ಟು ಓದಿ: ನನ್ನ ಹೆಸರು ಸಾವರ್ಕರ್ ಅಲ್ಲ; ನಾನು ಗಾಂಧಿ, ಕ್ಷಮೆ ಕೇಳಲ್ಲ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಾಹುಲ್ ಗಾಂಧಿಯವರ ಟೀಕೆಗೆ ಸಂಬಂಧಿಸಿದಂತೆ ಬಿಜೆಪಿ ವಾದವನ್ನು ತೀವ್ರವಾಗಿ ಟೀಕಿಸಿದ ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ಭಾರತವಲ್ಲ ಎಂದು ಹೇಳಿದ್ದಾರೆ. ಮೋದಿ ಭಾರತವಲ್ಲ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಇದಕ್ಕಾಗಿ ಪ್ರಾಣ ತೆತ್ತಿದ್ದಾರೆ, ಮೋದಿಯನ್ನು ಪ್ರಶ್ನಿಸುವುದು ಭಾರತವನ್ನು ಅವಮಾನಿಸಿದಂತಲ್ಲ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ