ನಾರಾಯಣ್​ ರಾಣೆ ಬಂಧನದ ಬೆನ್ನಲ್ಲೇ ವೈರಲ್ ಆಯ್ತು ಉದ್ಧವ್​ ಠಾಕ್ರೆ ಹಳೇ ವಿಡಿಯೋ; ಮಹಾ ಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿರುವ ನೆಟ್ಟಿಗರು

| Updated By: Lakshmi Hegde

Updated on: Aug 25, 2021 | 3:31 PM

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದಾರೆ. ಉದ್ಧವ್ ಠಾಕ್ರೆ ಮತ್ತು ಶಿವಸೇನೆಯದ್ದು ಹಿಪೋಕ್ರಸಿ. ಯೋಗಿ ಆದಿತ್ಯನಾಥ್​ ಅವರು ಕೂಡಲೇ ಉದ್ಧವ್​ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾರಾಯಣ್​ ರಾಣೆ ಬಂಧನದ ಬೆನ್ನಲ್ಲೇ ವೈರಲ್ ಆಯ್ತು ಉದ್ಧವ್​ ಠಾಕ್ರೆ ಹಳೇ ವಿಡಿಯೋ; ಮಹಾ ಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿರುವ ನೆಟ್ಟಿಗರು
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
Follow us on

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ಸ್ವಾತಂತ್ರ್ಯ ಬಂದ ವರ್ಷ ಗೊತ್ತಿಲ್ಲ. ನಾನಾಗಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿದ ಕೇಂದ್ರ ಸಚಿವ, ಬಿಜೆಪಿ ನಾಯಕ ನಾರಾಯಣ್​ ರಾಣೆಯನ್ನು ಬಂಧಿಸಿ, ಇದೀಗ ಜಾಮೀನು ನೀಡಲಾಗಿದೆ. ಆದರೆ ಈ ಬೆಳವಣಿಗೆಯ ಬೆನ್ನಲ್ಲೇ ಉದ್ಧವ್ ಠಾಕ್ರೆಯವರ ಹಳೇ ವಿಡಿಯೋವೊಂದು ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಉದ್ಧವ್ ಠಾಕ್ರೆ 2018ರಲ್ಲಿ ಮಾತನಾಡಿದ್ದ ವಿಡಿಯೋ ಇದು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎನ್ನಿಸಿತು ಎಂದು ಉದ್ಧವ್​ ಠಾಕ್ರೆ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.

ಈ ಹೇಳಿಕೆ ನೀಡುವಾಗ ಉದ್ಧವ್​ ಠಾಕ್ರೆ ಇನ್ನೂ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರಲಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಹೇಗೆ ಮುಖ್ಯಮಂತ್ರಿಯಾದರು? ಅವರೊಬ್ಬ ಯೋಗಿ..ಅಂದ ಮೇಲೆ ಈ ಅಧಿಕಾರ, ಹಣ ಎಲ್ಲವನ್ನೂ ಬಿಟ್ಟು ಗುಹೆಯಲ್ಲಿ ಕುಳಿತುಕೊಳ್ಳಬೇಕು. ಆದರೆ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತು, ತಮ್ಮನ್ನು ತಾವು ಯೋಗಿ ಎಂದು ಕರೆದುಕೊಳ್ಳುತ್ತಿದ್ದಾರೆ. ಯೋಗಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಉತ್ತರಪ್ರದೇಶದ ಅರ್ಚಕ ಗಗಭಟ್ಟ ಅವರನ್ನು ಕರೆಸಲಾಗಿತ್ತು. ಅವರೊಂದಿಗೆ ಗಾಳಿ ತುಂಬಿದ ಬಲೂನ್​​ನಂತೆ ಯೋಗಿ ಆದಿತ್ಯನಾಥ್​ ಕೂಡ ಬಂದರು. ಶಿವಾಜಿ ಮಹಾರಾಜರ ಪ್ರತಿಮೆಗೆ ಹಾರಹಾಕುವಾಗಲೂ ಚಪ್ಪಲಿ ಧರಿಸಿಯೇ ಇದ್ದರು. ಅದೇ ಚಪ್ಪಲಿಯಿಂದ ಯೋಗಿಯವರಿಗೆ ಹೊಡೆಯಬೇಕು ಎಂದು ನನಗೆ ಅನ್ನಿಸಿತ್ತು. ಆ ಶಿವಾಜಿ ಮಹಾರಾಜರ ಎದುರು ನಿಲ್ಲಲು ಅವರ್ಯಾರು? ಎಂದು ಹೇಳಿದ್ದು ವಿಡಿಯೋದಲ್ಲಿ ಕೇಳುತ್ತದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದಾರೆ. ಉದ್ಧವ್ ಠಾಕ್ರೆ ಮತ್ತು ಶಿವಸೇನೆಯದ್ದು ಹಿಪೋಕ್ರಸಿ. ಯೋಗಿ ಆದಿತ್ಯನಾಥ್​ ಅವರು ಕೂಡಲೇ ಉದ್ಧವ್​ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಕೂಡ ಪ್ರಶ್ನೆ ಎತ್ತಿದೆ. ಒಬ್ಬರಿಗೊಂದು ನ್ಯಾಯ..ಮತ್ತೊಬ್ಬರಿಗೆ ಇನ್ನೊಂದು ನ್ಯಾಯವೇ ಎಂದು ಕೇಳಿದೆ.

ಇದನ್ನೂ ಓದಿ: ಸಂಜನಾಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ; ಆದ್ದರಿಂದಲೇ ಅವರು ಊಟ ಕೊಡಲು ಬಂದಿಲ್ಲ: ರೇಷ್ಮಾ ಗಲ್ರಾನಿ

ವೆಸ್ಟ್ ಇಂಡೀಸ್​ಗೆ ಸೋಲು: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ರ್‍ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತ