ರಾಮಮಂದಿರ ಜಾಗ ಖರೀದಿಯಲ್ಲಿ ಅವ್ಯವಹಾರ ಆರೋಪ; ಸಂಪೂರ್ಣ ವಿವರವನ್ನು ಟ್ರಸ್ಟ್ ಜನರ ಮುಂದಿಡಲಿದೆ: ಪೇಜಾವರ ಶ್ರೀ

ಈ ವೇಳೆ ಟ್ರಸ್ಟ್‌ನ ವಿಶ್ವಸ್ಥ ಡಾ. ಅನಿಲ್ ಮಿಶ್ರಾ, ಮಂದಿರ ನಿರ್ಮಾಣ ಉಸ್ತುವಾರಿ ತಂಡದ ಗೋಪಾಲ ನಾಗರಕಟ್ಟೆ, ಮಂದಿರ ನಿರ್ಮಾಣ ಸಂಸ್ಥೆ ಎಲ್ ಆ್ಯಂಡ್ ಟಿ ಮತ್ತು ಮೇಲುಸ್ತುವಾರಿ ಸಂಸ್ಥೆ ಟಾಟಾ ಕನ್ಸಲ್ಟನ್ಸಿಯ ಇಂಜಿನಿಯರ್ಸ್, ಪೇಜಾವರ ಶ್ರೀಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ರಾಮಮಂದಿರ ಜಾಗ ಖರೀದಿಯಲ್ಲಿ ಅವ್ಯವಹಾರ ಆರೋಪ; ಸಂಪೂರ್ಣ ವಿವರವನ್ನು ಟ್ರಸ್ಟ್ ಜನರ ಮುಂದಿಡಲಿದೆ: ಪೇಜಾವರ ಶ್ರೀ
ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀ
Edited By:

Updated on: Jun 30, 2021 | 11:01 PM

ಉಡುಪಿ: ರಾಮಮಂದಿರ ನಿರ್ಮಾಣ ಕಾರ್ಯ ಮುಂದುವರಿಯುತ್ತಿದೆ. ಇದೇ ವೇಳೆ ಜಾಗ ಖರೀದಿಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ. ಆದರೆ, ರಾಮಮಂದಿರ ಟ್ರಸ್ಟ್​ನಿಂದ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಉಡುಪಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥಶ್ರೀ ಹೇಳಿಕೆ ನೀಡಿದ್ದಾರೆ. ಟ್ರಸ್ಟ್​ನ ಕಾರ್ಯದರ್ಶಿಗಳು, ಖಜಾಂಜಿ, ಸದಸ್ಯರಿಂದ ಚರ್ಚೆ ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ಟ್ರಸ್ಟ್ ಜನರ ಮುಂದಿಡಲಿದೆ. 2 ದಿನದಲ್ಲಿ ಎಲ್ಲವನ್ನೂ ಸಮಾಜದ ಮುಂದೆ ಇಡಲಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಬುಧವಾರ ಧರ್ಮನಗರಿಗೆ ಭೇಟಿ ನೀಡಿ, ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಿದ್ದಾರೆ. ಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ತಳಹದಿ ತುಂಬಿಸುವ ಕಾಮಗಾರಿ ಆರಂಭವಾದ ನಂತರ ಇದು ಅವರ ಮೊದಲ ಭೇಟಿಯಾಗಿದೆ.

ಆರಂಭದಲ್ಲಿ ಶ್ರೀರಾಮ ಲಲ್ಲಾನ ತಾತ್ಕಾಲಿಕ ಗುಡಿಗೆ ತೆರಳಿದ ಪೇಜಾವರ ಶ್ರೀಗಳು ದರ್ಶನ ಪಡೆದಿದ್ದಾರೆ. ದೇವರಿಗೆ ಪುಷ್ಪಾರ್ಚನೆ ಮತ್ತು ಚಾಮರ ಸೇವೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಮಂದಿರ ನಿರ್ಮಾಣ ಮಾಡುವ ಬುನಾದಿ ತುಂಬಿಸುವ ಸ್ಥಳಕ್ಕೆ ತೆರಳಿ, ಅಲ್ಲಿ ನಡೆಯುತ್ತಿರುವ ಕಾಮಗಾರಿ ಪರಿವೀಕ್ಷಿಸಿದರು. ಈವರೆಗೆ ನಡೆದ ಕಾಮಗಾರಿಯ ಪ್ರಗತಿಯನ್ನು ಇಂಜಿನಿಯರ್ಸ್ ವಿವರಿಸಿದ್ದಾರೆ.

ಈ ವೇಳೆ ಟ್ರಸ್ಟ್‌ನ ವಿಶ್ವಸ್ಥ ಡಾ. ಅನಿಲ್ ಮಿಶ್ರಾ, ಮಂದಿರ ನಿರ್ಮಾಣ ಉಸ್ತುವಾರಿ ತಂಡದ ಗೋಪಾಲ ನಾಗರಕಟ್ಟೆ, ಮಂದಿರ ನಿರ್ಮಾಣ ಸಂಸ್ಥೆ ಎಲ್ ಆ್ಯಂಡ್ ಟಿ ಮತ್ತು ಮೇಲುಸ್ತುವಾರಿ ಸಂಸ್ಥೆ ಟಾಟಾ ಕನ್ಸಲ್ಟನ್ಸಿಯ ಇಂಜಿನಿಯರ್ಸ್, ಪೇಜಾವರ ಶ್ರೀಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ; ವಿಹೆಚ್​ಪಿ ಪುಂಡುಪೋಕರಿಗಳ ಸಂಸ್ಥೆಯಲ್ಲ: ಪೇಜಾವರ ಶ್ರೀ

ರಾಮ ಮಂದಿರ ಟ್ರಸ್ಟ್​​ ಪ್ರಧಾನ ಕಾರ್ಯದರ್ಶಿ ಚಂಪತ್​ ರಾಯ್​ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದ ಪತ್ರಕರ್ತ ಸೇರಿ ಮೂವರ ವಿರುದ್ಧ ಎಫ್​ಐಆರ್​