ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದ ಪತ್ರಕರ್ತ ಸೇರಿ ಮೂವರ ವಿರುದ್ಧ ಎಫ್ಐಆರ್
ಮೂರು ದಿನಗಳ ಹಿಂದೆ ಪತ್ರಕರ್ತ ವಿನೀತ್ ನರೈನ್ ತಮ್ಮ ಫೇಸ್ಬುಕ್ನಲ್ಲಿ ಚಂಪತ್ ರಾಯ್ ವಿರುದ್ಧ ಪೋಸ್ಟ್ ಹಾಕಿದ್ದರು. ಚಂಪತ್ ರಾಯ್ ಬಿಜ್ನೋರ್ನಲ್ಲಿ ಭೂಮಿ ಕಬಳಿಸಲು ತಮ್ಮ ಸಹೋದರರಿಂದ ಸಹಾಯ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ದೆಹಲಿ: ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದ ಹಿರಿಯ ಪತ್ರಕರ್ತ ಮತ್ತು ಇಬ್ಬರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಚಂಪತ್ ರಾಯ್ ಅವರು ಬಿಜ್ನೋರ್ನಲ್ಲಿರುವ ಗೋಶಾಲೆಯ ಭೂಮಿಯನ್ನು ತಮ್ಮ ಕುಟುಂಬದ ಮೂಲಕ ಕಬಳಿಸಿದ್ದಾರೆ. ಈ ಗೋಶಾಲೆಯ ಭೂಮಿ ಪಡೆಯುವಾಗ ಅದಕ್ಕೆ ಪ್ರತಿಯಾಗಿ ನೆರವು ನೀಡುವ ಭರವಸೆ ನೀಡಿದ್ದರು. ಆದರೆ ನಂತರ ಏನೂ ಮಾಡಲಿಲ್ಲ ಎಂದು ಪತ್ರಕರ್ತ ವಿನೀತ್ ನರೈನ್ ಆರೋಪಿಸಿದ್ದರು.
ಇದೀಗ ರಾಯ್ ಸಹೋದರ ಸಂಜಯ್ ಬನ್ಸಾಲ್ ನೀಡಿದ ದೂರಿನ ಅನ್ವಯ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಭೂಮಿ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲವೆಂದು ಬಿಜ್ನೋರ್ ಪೊಲೀಸರು ಚಂಪತ್ ರಾಯ್ ಮತ್ತು ಅವರ ಸಹೋದರನಿಗೆ ಅದಾಗಲೇ ಕ್ಲೀನ್ಚಿಟ್ ಕೊಟ್ಟಿದ್ದಾರೆ. ಆದರೂ ಇವರೆಲ್ಲ ಸೇರಿ ಪದೇಪದೆ ಅದೇ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾಗಳ ಮೂಲಕ ಎತ್ತಾಡಿ, ಆರೋಪ ಮಾಡುತ್ತಿದ್ದಾರೆ ಎಂದು ಸಂಜಯ್ ಬನ್ಸಾಲ್ ದೂರು ನೀಡಿದ್ದರು. ಆ ದೂರಿನ ಅನ್ವಯ ಪೊಲೀಸರು ಮೂವರ ವಿರುದ್ಧ ಫೋರ್ಜರಿ, ದ್ವೇಷ ಉತ್ತೇಜಿಸುವುದು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ವಿಭಾಗಳಡಿ ಒಟ್ಟು 18 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮೂರು ದಿನಗಳ ಹಿಂದೆ ಪತ್ರಕರ್ತ ವಿನೀತ್ ನರೈನ್ ತಮ್ಮ ಫೇಸ್ಬುಕ್ನಲ್ಲಿ ಚಂಪತ್ ರಾಯ್ ವಿರುದ್ಧ ಪೋಸ್ಟ್ ಹಾಕಿದ್ದರು. ಚಂಪತ್ ರಾಯ್ ಬಿಜ್ನೋರ್ನಲ್ಲಿ ಭೂಮಿ ಕಬಳಿಸಲು ತಮ್ಮ ಸಹೋದರರಿಂದ ಸಹಾಯ ಪಡೆದಿದ್ದಾರೆ. ಎಲ್ಲ ಸೇರಿ, ಅಲ್ಕಾ ಲಾಹೋಟಿ ಒಡೆತನದ ಗೋಶಾಲೆಯ ಸುಮಾರು 20,000ಎಕರೆ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಇದರ ವಿರುದ್ಧ ಸಂಜಯ್ ಬನ್ಸಲ್ ದೂರು ದಾಖಲಿಸಿದ್ದಾರೆ. ಅಲ್ಲದೆ, ನರೈನ್ ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ ಬಗ್ಗೆ ಅವರ ಬಳಿ ಸ್ಪಷ್ಟನೆ ಕೇಳಲು ಕರೆ ಮಾಡಿದಾಗ, ರಜನೀಶ್ ಎಂಬ ಹೆಸರಿನ ವ್ಯಕ್ತಿ ಅದನ್ನು ಸ್ವೀಕರಿಸಿದ್ದ. ನನ್ನನ್ನೇ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ. ತುಂಬ ಅನುಚಿತವಾಗಿ ವರ್ತಿಸಿದ ಎಂದು ಆತನ ವಿರುದ್ಧವೂ ದೂರು ಬನ್ಸಾಲ್ ದೂರು ನೀಡಿದ್ದರು.
ಇದನ್ನೂ ಓದಿ: ಪಂಜಾಬ್‌ನ ಸಿಎಂ ಅಭ್ಯರ್ಥಿಯಾಗಿ ಎಎಪಿಯಿಂದ ಸಿಖ್ ಸಮುದಾಯದವರೇ ಸ್ಪರ್ಧೆ: ಅರವಿಂದ್ ಕೇಜ್ರಿವಾಲ್
FIR Against Journalist who Accused the Ram Temple Trustee Champat Rai grabbed the land in Bijnor
Published On - 4:16 pm, Mon, 21 June 21