ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಎನ್‌ಎಚ್‌ಆರ್‌ಸಿ ತನಿಖೆ: ಬಂಗಾಳ ಸರ್ಕಾರದ ಮನವಿ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್

Post-Poll Violence: ಅರ್ಜಿಯನ್ನು ತಿರಸ್ಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂಡಾಲ್ ನೇತೃತ್ವದ 5 ನ್ಯಾಯಾಧೀಶರ ಪೀಠವು ನ್ಯಾಯಾಲಯದ ವಿಶ್ವಾಸವನ್ನು ಪ್ರೇರೇಪಿಸುವಲ್ಲಿ ರಾಜ್ಯವು ವಿಫಲವಾದ ನಂತರ ಜೂನ್ 18 ರ ಆದೇಶವನ್ನು ಅಂಗೀಕರಿಸಲಾಗಿದೆ ಎಂದು ಅಭಿಪ್ರಾಯಪಟ್ಟರು

ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಎನ್‌ಎಚ್‌ಆರ್‌ಸಿ ತನಿಖೆ: ಬಂಗಾಳ ಸರ್ಕಾರದ ಮನವಿ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್
ಕಲ್ಕತ್ತಾ ಹೈಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 21, 2021 | 3:37 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ನಿರ್ದೇಶನ ನೀಡಿದ ಆದೇಶವನ್ನು ಮರುಪಡೆಯಲು ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ ಮನವಿಯನ್ನು ಕಲ್ಕತ್ತಾ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅರ್ಜಿಯನ್ನು ತಿರಸ್ಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂಡಾಲ್ ನೇತೃತ್ವದ 5 ನ್ಯಾಯಾಧೀಶರ ಪೀಠವು ನ್ಯಾಯಾಲಯದ ವಿಶ್ವಾಸವನ್ನು ಪ್ರೇರೇಪಿಸುವಲ್ಲಿ ರಾಜ್ಯವು ವಿಫಲವಾದ ನಂತರ ಜೂನ್ 18 ರ ಆದೇಶವನ್ನು ಅಂಗೀಕರಿಸಲಾಗಿದೆ ಎಂದು ಅಭಿಪ್ರಾಯಪಟ್ಟರು. ನ್ಯಾಯಮೂರ್ತಿಗಳಾದ ಸೌಮೆನ್ ಸೇನ್, ಸುಬ್ರತಾ ತಾಲೂಕ್ದಾರ್, ಐಪಿ ಮುಖರ್ಜಿ ಮತ್ತು ಹರೀಶ್ ಟಂಡನ್ ಅವರನ್ನೂ ಒಳಗೊಂಡ ನ್ಯಾಯಪೀಠ, ನ್ಯಾಯಾಲಯವು ತನ್ನ ಹಿಂದಿನ ತೀರ್ಪನ್ನು ಮಾರ್ಪಡಿಸಲು ಅಥವಾ ತಡೆ ಹಿಡಿಯಲು ಯಾವುದೇ ಕಾರಣ ಕಾಣುವುದಿಲ್ಲ ಎಂದು ಹೇಳಿದೆ.

ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಸಂಗತಿಗಳನ್ನು ದಾಖಲೆಯಲ್ಲಿ ಇರಿಸಲು ಸೂಕ್ತ ಅವಕಾಶ ನೀಡಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿಕೊಂಡಿತ್ತು.

ಈ ಹಿಂದೆ ನ್ಯಾಯಾಲಯವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಮಿತಿಯನ್ನು ರಚಿಸಿ ಮತದಾನದ ನಂತರದ ಹಿಂಸಾಚಾರದ ದೂರುಗಳು ದಾಖಲಾದ ಸ್ಥಳಗಳಿಗೆ ಭೇಟಿ ನೀಡುವಂತೆ ಆದೇಶಿಸಿತ್ತು. ಸಮಿತಿಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನು ಸೇರಿಸಬೇಕು ಮತ್ತು ಆಡಳಿತವು ಅಗತ್ಯವಾದ ಜಾರಿ ಮತ್ತು ಇತರ ಬೆಂಬಲಗಳನ್ನು ಒದಗಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತ್ತು.

ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಇದ್ದುದರಿಂದ ನ್ಯಾಯಾಲಯವು ಎನ್‌ಎಚ್‌ಆರ್‌ಸಿಯನ್ನು ಒಳಗೊಳ್ಳುವಂತೆ ಮಾಡಿದೆ.ಯ ನ್ಯಾಯಪೀಠವು ನ್ಯಾಯ ಮಂಡಳಿಗೆ ಕೇವಲ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ ಮತ್ತು ಸರ್ಕಾರವು ಇದಕ್ಕೆ ಯಾವುದೇ ಆಕ್ಷೇಪಣೆಗಳನ್ನು ಹೊಂದಿರಬಾರದು ಎಂದು ಹೇಳಿದರು. “ನಿಮ್ಮ ನಡವಳಿಕೆ ಈ ಸಂದರ್ಭದಲ್ಲಿ, ಈ ನ್ಯಾಯಾಲಯದ ವಿಶ್ವಾಸವನ್ನು ಪ್ರೇರೇಪಿಸುವುದಿಲ್ಲ” ಎಂದು ಮುಖ್ಯ ನ್ಯಾಯಾಧೀಶರು ವಿಚಾರಣೆಯ ಸಮಯದಲ್ಲಿ ಹೇಳಿದರು.

ಇದನ್ನೂ ಓದಿ: ಚುನಾವಣೋತ್ತರ ಹಿಂಸಾಚಾರ ದೂರುಗಳ ಬಗ್ಗೆ ಮಾನವ ಹಕ್ಕುಗಳ ಆಯೋಗ ಪರಿಶೀಲಿಸಬೇಕು ಎಂಬ ಆದೇಶ ಹಿಂಪಡೆಯುವಂತೆ ಕಲ್ಕತ್ತಾ ಹೈಕೋರ್ಟ್ ಮೊರೆ ಹೋದ ಬಂಗಾಳ ಸರ್ಕಾರ

ಇದನ್ನೂ ಓದಿ: ಚುನಾವಣೋತ್ತರ ಹಿಂಸಾಚಾರ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

(Calcutta High Court on dismissed the West Bengal government’s plea for recalling its order NHRC to probe post-poll violence)