Ghaziabad Assault Case: ತನಿಖೆಗೆ ಸಹಕರಿಸುವುದಾಗಿ ಹೇಳಿದ ಟ್ವಿಟರ್ ಇಂಡಿಯಾ, ಉತ್ತರ ‘ತೃಪ್ತಿಕರ’ ಅಲ್ಲ ಎಂದ ಪೊಲೀಸರು
Ghaziabad: ನಡೆದ ವಿವಾದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಈ ವಿಷಯವನ್ನು ನಾವು ನಿಭಾಯಿಸುವುದಿಲ್ಲ" ಎಂದು ಗಾಜಿಯಾಬಾದ್ ಪೊಲೀಸರ ಆರಂಭಿಕ ನೋಟಿಸ್‌ಗೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಉತ್ತರಿಸಿದ್ದಾರೆ
ಗಾಜಿಯಾಬಾದ್: ಗಾಜಿಯಾಬಾದ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ನೋಟಿಸ್‌ಗೆ ಟ್ವಿಟರ್ ಇಂಡಿಯಾ ಉತ್ತರಿಸಿದೆ ಎಂದು ಗಾಜಿಯಾಬಾದ್ ಪೊಲೀಸರು ಸೋಮವಾರ ಹೇಳಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ತನಿಖೆಗೆ ಸಹಕರಿಸಲು ಸಿದ್ಧವಾಗಿದೆ ಎಂದು ಹೇಳಿದೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಅವರು ಸಿದ್ಧರಾಗಿದ್ದಾರೆ ಎಂದು ಟ್ವಿಟರ್ ಅಧಿಕಾರಿಗಳು ಪೊಲೀಸರಿಗೆ ಹೇಳಿದ್ದಾರೆ.
ಆದರೆ, ಗಾಜಿಯಾಬಾದ್ ಪೊಲೀಸರು ಈ ಉತ್ತರದಿಂದ ತೃಪ್ತರಾಗಿಲ್ಲ. ಅದೇ ವೇಳೆ ಲೋನಿ ಪ್ರಕರಣದಲ್ಲಿ ಟ್ವಿಟರ್ ಇಂಡಿಯಾಕ್ಕೆ ಎರಡನೇ ನೋಟಿಸ್ ನೀಡುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಹೇಳಿದರು. “ನಡೆದ ವಿವಾದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಈ ವಿಷಯವನ್ನು ನಾವು ನಿಭಾಯಿಸುವುದಿಲ್ಲ” ಎಂದು ಗಾಜಿಯಾಬಾದ್ ಪೊಲೀಸರ ಆರಂಭಿಕ ನೋಟಿಸ್‌ಗೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಉತ್ತರಿಸಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರ ಉತ್ತರಗಳಿಂದ ತೃಪ್ತಿ ಇಲ್ಲದ ಕಾರಣ ಗಾಜಿಯಾಬಾದ್ ಪೊಲೀಸರು ಮತ್ತೆ ಟ್ವಿಟರ್ ಇಂಡಿಯಾಕ್ಕೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಹಿಂದೆ ಲೋನಿ ಪ್ರಕರಣದಲ್ಲಿ ಗಾಜಿಯಾಬಾದ್ ಪೊಲೀಸರು ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಕಳುಹಿಸಿದ್ದರು. ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ತನಿಖೆಗೆ ಸಹಕರಿಸುವಂತೆ ಪೊಲೀಸರು ಕೇಳಿಕೊಂಡಿದ್ದಾರೆ.
2020 ರ ಜೂನ್ 15 ಮತ್ತು 2021 ರ ಜೂನ್ 15 ರ ನಡುವೆ 26 ಇಮೇಲ್‌ಗಳನ್ನು ಟ್ವಿಟರ್‌ಗೆ ಕಳುಹಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಗಾಜಿಯಾಬಾದ್ ಪೊಲೀಸರು ಜೂನ್ 20 ರಂದು ಹೇಳಿದ್ದಾರೆ.
ಮನೀಶ್ ಮಹೇಶ್ವರಿಯನ್ನು ಏಳು ದಿನಗಳ ಒಳಗೆ ಇಲ್ಲಿನ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಕೋರಲಾಗಿದೆ. ಜೂನ್ 5 ರಂದು ನಡೆದ ಹಲ್ಲೆಯ ವಿಡಿಯೊವನ್ನು ಹಂಚಿಕೊಂಡಿರುವ ಟ್ವೀಟ್‌ಗಳ ಕುರಿತು ಟ್ವಿಟರ್, ಹಲವಾರು ಪತ್ರಕರ್ತರು ಮತ್ತು ಕಾಂಗ್ರೆಸ್ ಮುಖಂಡರನ್ನು ಗಾಜಿಯಾಬಾದ್‌ನಲ್ಲಿ ಎಫ್‌ಐಆರ್‌ನಲ್ಲಿ ಹೆಸರಿಸಿದ ಕೆಲವೇ ದಿನಗಳಲ್ಲಿ ಕಾನೂನು ಸೂಚನೆ ಬಂದಿದೆ.
ವೃದ್ಧರೊಬ್ಬರ ಮೇಲೆ ಆರು ಮಂದಿ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಹಲ್ಲೆಕೋರರು ಸಂತ್ರಸ್ತ ವೃದ್ಧನ ಗಡ್ಡವನ್ನು ಕತ್ತರಿಸಿದ್ದಾರೆ “ಜೈ ಶ್ರೀ ರಾಮ್” ಮತ್ತು “ವಂದೇ ಮಾತರಂ” ನಂತಹ ಘೋಷಣೆಗಳನ್ನು ಕೂಗಲು ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತ ವೃದ್ಧನ ಕುಟುಂಬ ಆರೋಪಿಸಿತ್ತು. ಆದರೆ ಕೋಮುಸಂಘರ್ಷಕ್ಕೆ ಪ್ರಚೋದನೆ ನೀಡುವಂತೆ ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಏಳು ದಿನಗಳಲ್ಲಿ ಪೊಲೀಸ್ ಠಾಣೆಗೆ ಹಾಜರಾಗಲು ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಿಗೆ ಗಾಜಿಯಾಬಾದ್ ಪೊಲೀಸ್ ಸಮನ್ಸ್
ಇದನ್ನೂ ಓದಿ: ಗಾಜಿಯಾಬಾದ್ ಘಟನೆ ಬಗ್ಗೆ ಟ್ವೀಟ್: ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು
(Twitter India replies to a notice issued in connection with the Ghaziabad assault case )