ಗಾಜಿಯಾಬಾದ್ ಘಟನೆ ಬಗ್ಗೆ ಟ್ವೀಟ್: ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು

Ghaziabad Posts: ಹಿರಿಯ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ "ಕೋಮು ಭಾವನೆಗಳನ್ನು ಪ್ರಚೋದಿಸುವ" ಕುರಿತು ಪೋಸ್ಟ್ ಹಾಕಿರುವ ಹಲವಾರು ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರು, ಟ್ವಿಟರ್ ವಿರುದ್ಧ ಗಾಜಿಯಾಬಾದ್‌ನಲ್ಲಿ ಎಫ್‌ಐಆರ್‌ನಲ್ಲಿ ದಾಖಲಿಸಿದ ಬೆನ್ನಲ್ಲೇ ವಕೀಲರೊಬ್ಬರು ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಗಾಜಿಯಾಬಾದ್ ಘಟನೆ ಬಗ್ಗೆ ಟ್ವೀಟ್: ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು
ಸ್ವರ ಭಾಸ್ಕರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 17, 2021 | 2:58 PM

ದೆಹಲಿ: ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದ  ಹಲ್ಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಇನ್ನಿಬ್ಬರ ವಿರುದ್ಧ “ಪ್ರಚೋದನಾಕಾರಿ ಟ್ವೀಟ್” ಕುರಿತು ದೆಹಲಿಯಲ್ಲಿ ದೂರು ದಾಖಲಾಗಿದೆ. ಆದಾಗ್ಯೂ, ವಕೀಲರ ದೂರಿನ ಆಧಾರದ ಮೇಲೆ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಲ್ಲ.

ಹಿರಿಯ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ “ಕೋಮು ಭಾವನೆಗಳನ್ನು ಪ್ರಚೋದಿಸುವ” ಕುರಿತು ಪೋಸ್ಟ್ ಹಾಕಿರುವ ಹಲವಾರು ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರು, ಟ್ವಿಟರ್ ವಿರುದ್ಧ ಗಾಜಿಯಾಬಾದ್‌ನಲ್ಲಿ ಎಫ್‌ಐಆರ್‌ನಲ್ಲಿ ದಾಖಲಿಸಿದ ಬೆನ್ನಲ್ಲೇ ವಕೀಲರೊಬ್ಬರು ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಸ್ವರಾ ಭಾಸ್ಕರ್, ಪತ್ರಕರ್ತೆ ಅರ್ಫಾ ಖಾನೂಮ್ ಮತ್ತು ಆಸಿಫ್ ಖಾನ್ ಎಂಬ ವ್ಯಕ್ತಿ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ಗಳ ಮೂಲಕ “ಈ ಘಟನೆಯಿಂದ  ಪ್ರೇರಣೆ ಪಡೆದು ನಾಗರಿಕರಲ್ಲಿ ದ್ವೇಷವನ್ನು ಹರಡಲು ಪ್ರಚಾರವನ್ನು ಪ್ರಾರಂಭಿಸಿದರು” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ರೀತಿಯ ಕೋಮು ಕೋನಗಳಿಲ್ಲ ಎಂಬ ಅಂಶವನ್ನು ತಿಳಿದು ಭಾರತದ ಟ್ವಿಟ್ಟರ್ ಮುಖ್ಯಸ್ಥ ಮನೀಶ್ ಮಹೇಶ್ವರಿ ಈ ಸುಳ್ಳು ಟ್ವೀಟ್‌ಗಳನ್ನು ತೆಗೆದುಹಾಕಲು ಯಾವುದೇ ಕ್ರಮ ಕೈಗೊಂಡಿಲ್ಲ ”ಎಂದು ದೂರಿನಲ್ಲಿ ಹೇಳಲಾಗಿದೆ.

ಉತ್ತರ ಪ್ರದೇಶ ಪೊಲೀಸರು ಸಲ್ಲಿಸಿರುವ ಪ್ರಕರಣದಲ್ಲಿ, ಘಟನೆಗೆ ಸಂಬಂಧಿಸಿದ “ದಾರಿತಪ್ಪಿಸುವ” ವಿಷಯವನ್ನು ಟ್ವಿಟರ್ ತೆಗೆದುಹಾಕಿಲ್ಲ ಎಂದು ಆರೋಪಿಸಲಾಗಿದೆ. “ಗಲಭೆಯ ಉದ್ದೇಶ, ದ್ವೇಷ ಮತ್ತು ಕ್ರಿಮಿನಲ್ ಪಿತೂರಿಯನ್ನು ಉತ್ತೇಜಿಸಿದೆ ಎಂದು ಟ್ವಿಟರ್ ಸಂಸ್ಥೆ ಮೇಲೆ ಆರೋಪ ಮಾಡಲಾಗಿದೆ.

ಸೂಫಿ ಅಬ್ದುಲ್ ಸಮದ್ ಎಂಬ ವ್ಯಕ್ತಿ ಜನರ ಗುಂಪೊಂದು ನನ್ನ ಗಡ್ಡವನ್ನು ಕತ್ತರಿಸಿದ್ದಾರೆ. ಹಲ್ಲೆ ನಡೆಸಿದ ಗುಂಪು “ವಂದೇ ಮಾತರಂ” ಮತ್ತು “ಜೈ ಶ್ರೀ ರಾಮ್” ಎಂದು ಕೂಗುವಂತೆ ನನ್ನನ್ನು ಒತ್ತಾಯಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಆದರೆ ಈ ಘಟನೆಯಲ್ಲಿ ಯಾವುದೇ ಕೋಮು ದ್ವೇಷದ ಕೋನ ಇರಲಿಲ್ಲ ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿದ್ದಾರೆ. ತಾಯತಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಕೋಪಗೊಂಡ ಹಿಂದೂಗಳು ಮತ್ತು ಮುಸ್ಲಿಮರು ಸೇರಿದ ಆರು ಜನರಿಂದ ಈ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಉತ್ತರಪ್ರದೇಶದ ಪೊಲೀಸರು ಹೇಳಿದ್ದಾರೆ.

ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾದ ಕಾರಣ ಟ್ವಿಟರ್ “ಕಾನೂನು ಗುರಾಣಿಯನ್ನು ಕಳೆದುಕೊಂಡಿದೆ” ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇದನ್ನೂ  ಓದಿ: ಗಾಜಿಯಾಬಾದ್​ನಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಪೊಲೀಸರ ವಾದ ತಳ್ಳಿದ ಸಂತ್ರಸ್ತ ಅಬ್ದುಲ್ ಸಮದ್ ಕುಟುಂಬ

(Complaint lodged in Delhi against actor Swara Bhasker Managing Director of Twitter India and two others Over Ghaziabad Posts)