ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಐಎಸ್ಎಫ್ ಜತೆಗಿನ ಮೈತ್ರಿ ಚುನಾವಣೆಯಲ್ಲಿ ಮುಳುವಾಯಿತು: ಅಭಿಪ್ರಾಯ ವ್ಯಕ್ತಪಡಿಸಿದ ಎಡಪಕ್ಷ
West Bengal Assembly Elections 2021: ಮೈತ್ರಿಕೂಟದಲ್ಲಿ ಐಎಸ್‌ಎಫ್ ಸೇರ್ಪಡೆಗೊಳ್ಳುವುದು ಸರ್ವಾನುಮತದ ನಿರ್ಧಾರವಾಗಿರಲಿಲ್ಲ. ಸೆಲೀಮ್ (ಪೊಲಿಟ್‌ಬ್ಯುರೊ ಸದಸ್ಯ ಮೊಹಮ್ಮದ್ ಸೆಲೀಮ್) ಅವರು ಐಎಸ್‌ಎಫ್ ಅನ್ನು ಪ್ರಗತಿಪರ ಶಕ್ತಿಯೆಂದು ಬಿಂಬಿಸಿದ್ದರು, ಅದು ವಾಸ್ತವದಲ್ಲಿ ಅಲ್ಲ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಒಂದು ತಿಂಗಳ ನಂತರ, ಪಕ್ಷದ ಕಾರ್ಯಕ್ಷಮತೆಯನ್ನು ಚರ್ಚಿಸಲು ಸಿಪಿಐ (ಎಂ) ಪಶ್ಚಿಮ ಬಂಗಾಳ ರಾಜ್ಯ ಸಮಿತಿ ಸದಸ್ಯರು ಎರಡು ದಿನಗಳ ಪರಿಶೀಲನಾ ಸಭೆಯಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 294 ಶಾಸಕರ ಸದನಕ್ಕೆ ಒಬ್ಬ ಪ್ರತಿನಿಧಿಯನ್ನು ಕಳುಹಿಸಲು ಪಕ್ಷವು ವಿಫಲವಾದ ಕಾರಣ, ಹೆಚ್ಚಿನ ನಾಯಕರು ಒಂದು ತಿಂಗಳ ಹಳೆಯ ಇಂಡಿಯನ್ ಸೆಕ್ಯುಲರ್ ಫೋರ್ಸ್ (ಐಎಸ್ಎಫ್) ನೊಂದಿಗೆ ಕೈಜೋಡಿಸುವ ನಿರ್ಧಾರಕ್ಕೆ ದೂಷಿಸಿದರು.
ಕಾಂಗ್ರೆಸ್ ಮತ್ತು ಭಾರತೀಯ ಸೆಕ್ಯುಲರ್ ಫ್ರಂಟ್ ಜೊತೆಗಿನ ಮೈತ್ರಿ ಮುರಿದರೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಿಪಿಐ (ಎಂ) ಸ್ಪಷ್ಟಪಡಿಸಿದೆ. ಎರಡು ದಿನಗಳ ರಾಜ್ಯ ಸಮಿತಿ ಸಭೆಯ ನಂತರ ಅಲಿಮುದ್ದೀನ್ ಬೀದಿ ಕಚೇರಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಏತನ್ಮಧ್ಯೆ, ಸಿಪಿಐ (ಎಂ) ತಮ್ಮ ಮೈತ್ರಿ ಪಕ್ಷಗಳ (ಕಾಂಗ್ರೆಸ್ ಮತ್ತು ಐಎಸ್ಎಫ್) ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕು ಎಂದು ಎಡರಂಗದ ಪಾಲುದಾರ ಫಾರ್ವರ್ಡ್ ಬ್ಲಾಕ್ ಹೇಳಿದೆ.
ಇತ್ತೀಚಿನ ಚುನಾವಣೆಯಲ್ಲಿ ಎಡರಂಗ, ಕಾಂಗ್ರೆಸ್ ಮತ್ತು ಐಎಸ್ಎಫ ಜತೆ ಮೈತ್ರಿ ಮಾಡಿಕೊಂಡಿತ್ತು., ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿಗೆ ವಿರುದ್ಧವಾದ ಮತದಾರರನ್ನು ಕ್ರೋಢೀಕರಿಸಲು ಈ ಮೈತ್ರಿ ಮಾಡಲಾಗಿತ್ತು. ಎಡರಂಗ ಮತ್ತು ಕಾಂಗ್ರೆಸ್ ಎರಡೂ ಒಂದೇ ಒಂದು ಸ್ಥಾನ ಗೆಲ್ಲಲು ಪಡೆಯಲು ವಿಫಲವಾದರೆ, ಐಎಸ್ಎಫ್ ಸ್ಪರ್ಧಿಸಿದ 27 ರಲ್ಲಿ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿತು.
ಸಂಜುಕ್ತ ಮೋರ್ಚಾ ಜನರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲರಾದರು. ಎಡಪಂಥೀಯ ಮತದಾರರಲ್ಲಿ ಒಂದು ಭಾಗವು ಸಹ ಸಂಜುಕ್ತ ಮೋರ್ಚಾದ ಪರ್ಯಾಯ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿತು. ಪ್ರಚಾರವು ಸಹ ಮತದಾರರ ಮೇಲೆ ಪ್ರಭಾವ ಬೀರಲು ವಿಫಲವಾಗಿದೆ ಎಂದು ರಾಜ್ಯ ಸಮಿತಿ ಹೇಳಿದೆ. ಕಾಂಗ್ರೆಸ್ ಮತ್ತು ಐಎಎಫ್ ಹೇಳಿಕೆಗಳು ಜನರಲ್ಲಿ ಗೊಂದಲವನ್ನು ಸೃಷ್ಟಿಸಿದವು. ವಿಶೇಷವೆಂದರೆ, ಸಂಜುಕ್ತ ಮೋರ್ಚಾ ರಚನೆ, ಐಎಸ್‌ಎಫ್ ಅನ್ನು ಸೇರಿಸಿಕೊಳ್ಳುವುದು, ಒಂದು ಕಡೆ ವಿವಿಧ ವರ್ಗದ ಜನರಿಂದ ಪಕ್ಷವನ್ನು ಬೇರ್ಪಡಿಸುವುದು ಮತ್ತು ಇನ್ನೊಂದೆಡೆ ಹೋರಾಟದಲ್ಲಿ ಹೆಚ್ಚುವರಿ ಶಕ್ತಿಯನ್ನು ಪಡೆಯುವುದು ಎರಡು ಗುರಿಗಳಾಗಿವೆ. ರಾಜಕೀಯ ಸನ್ನಿವೇಶವು ಮೈತ್ರಿಕೂಟದ ಪರವಾಗಿರಲಿಲ್ಲ, ಬಿಜೆಪಿಯ “ಧ್ರುವೀಕರಣ ರಾಜಕೀಯ” ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸಹಾಯ ಮಾಡಿತು.
ಮೈತ್ರಿಕೂಟದಲ್ಲಿ ಐಎಸ್‌ಎಫ್ ಸೇರ್ಪಡೆಗೊಳ್ಳುವುದು ಸರ್ವಾನುಮತದ ನಿರ್ಧಾರವಾಗಿರಲಿಲ್ಲ. ಸೆಲೀಮ್ (ಪೊಲಿಟ್‌ಬ್ಯುರೊ ಸದಸ್ಯ ಮೊಹಮ್ಮದ್ ಸೆಲೀಮ್) ಅವರು ಐಎಸ್‌ಎಫ್ ಅನ್ನು ಪ್ರಗತಿಪರ ಶಕ್ತಿಯೆಂದು ಬಿಂಬಿಸಿದ್ದರು, ಅದು ವಾಸ್ತವದಲ್ಲಿ ಅಲ್ಲ. ಹೊಸ ಪಕ್ಷದೊಂದಿಗೆ ಕೈಜೋಡಿಸುವ ಪರವಾದವರು ಅಲ್ಪಸಂಖ್ಯಾತ ಮತಗಳನ್ನು ಟಿಎಂಸಿಗೆ ವಲಸೆ ಹೋಗುವುದನ್ನು ತಡೆಯಲು ಬಯಸಿದ್ದರು. ಸಿಪಿಐ (ಎಂ) ಯಾವಾಗಲೂ ಜಾತ್ಯತೀತತೆಯ ಧ್ವನಿಯಾಗಿರುವುದರಿಂದ ಈ ಕಾರ್ಯತಂತ್ರವು ತಪ್ಪಾಗಿದೆ ಮತ್ತು ಮತದಾರರು ಅದನ್ನು ಸ್ವೀಕರಿಸಲಿಲ್ಲ ಎಂದು ರಾಜ್ಯ ಸಮಿತಿಯ ಸದಸ್ಯರೊಬ್ಬರು ಹೇಳಿದರು.
ಕಾಂಗ್ರೆಸ್ ವಿರುದ್ಧ ಮುರ್ಷಿದಾಬಾದ್‌ನ ಕೆಲವು ಸ್ಥಾನಗಳಲ್ಲಿ ಐಎಸ್‌ಎಫ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ ಮೈತ್ರಿಕೂಟಕ್ಕೂ ಹಿನ್ನಡೆ ಉಂಟಾಯಿತು. ಐಎಸ್ಎಫ್ ಸೇರ್ಪಡೆಗೆ ವಿರುದ್ಧವಾಗಿದ್ದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, ತಮ್ಮ ಪಕ್ಷವು ಆ ಸಂಘಟನ ಜತೆ ಸ್ಥಾನಗಳನ್ನು ಹಂಚಿಕೊಳ್ಳಬಾರದು ಎಂದಿದ್ದರು. ಪ್ರಾಸಂಗಿಕವಾಗಿ, ಅನೇಕ ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯರು ಐಎಸ್ಎಫ್ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸದೆ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸಿದ್ದರು.
ಮುಂಬರುವ ಪುರಸಭೆ ಚುನಾವಣೆಯಲ್ಲಿ ಸಿಪಿಐ (ಎಂ) ಜೊತೆಗಿನ ಮೈತ್ರಿ ಮಾಡಲಾಗುತ್ತದೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧೀರ್ ರಂಜನ್ ಚೌಧರಿ ಶನಿವಾರ ಹೇಳಿದ್ದಾರೆ. ಸಭೆಯ ನಂತರ, ಮೈತ್ರಿಕೂಟದ ಭವಿಷ್ಯ ಏನು ಎಂದು ಹೇಳಲು ಇನ್ನೂ ಸಮಯವಿಲ್ಲ ಎಂದು ತಿಳಿಸಲಾಯಿತು. ಕಾಂಗ್ರೆಸ್ ಜೊತೆಗಿನ ಪಕ್ಷದ ಮೈತ್ರಿ ಬಗ್ಗೆ ಅನೇಕ ಸದಸ್ಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು, ಇದೇ ರೀತಿಯ ಒಪ್ಪಂದವು 2016 ರ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯನ್ನುಂಟುಮಾಡಿದೆ ಎಂದು ಹೇಳಿದರು. ಆ ಸಮಯದಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಪಡೆದಿದ್ದರೆ, ಎಡ ಪಕ್ಷಗಳು ಕೇವಲ 26 ಸ್ಥಾನಗಳನ್ನು ಗಳಿಸಿತ್ತು.
ಲೋಕಸಭೆಯಲ್ಲಿನ ಪ್ರತಿಪಕ್ಷದ ನಾಯಕ ಧಾರ್ಮಿಕ ಮುಖಂಡ ಅಬ್ಬಾಸ್ ಸಿದ್ದಿಕಿ ಸ್ಥಾಪಿಸಿದ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ಸಂಕೋಚ ವ್ಯಕ್ತಪಡಿಸಿದರು. “ನಾವು ಎಂದಿಗೂ ಭಾರತೀಯ ಸೆಕ್ಯುಲರ್ ಫ್ರಂಟ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ, ನಮ್ಮ ಮೈತ್ರಿ ಸಿಪಿಐ (ಎಂ) ನೊಂದಿಗೆ ಇದೆ, ನಾವು ಬೇರೆಯಾಗಿಲ್ಲ, ಮೈತ್ರಿ ಇದೆ” ಎಂದು ಅವರು ಹೇಳಿದ್ದಾರೆ.
ಐಎಸ್ಎಫ್ ಪ್ರವೇಶದಿಂದ ಮೈತ್ರಿಕೂಟದ ಸ್ವಚ್ಛವಾದದ ಚಿತ್ರಣವು ಕಳಂಕಿತವಾಗಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಕ್ಕಾಗಿ ಪಕ್ಷವನ್ನು ದೂಷಿಸಿದರು.
ಇದನ್ನೂ ಓದಿ: ‘ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೊಡೆತ ಬಿದ್ದಿದ್ದು ಬಿಜೆಪಿಯಿಂದ..ಟಿಎಂಸಿ ಗೆದ್ದಿದ್ದೂ ಬಿಜೆಪಿಯಿಂದ’
(West Bengal Assembly polls Blamed it on the decision to join hands with Congress and ISF Feels CPIM Leaders)
Published On - 5:10 pm, Mon, 21 June 21