ಸೋನಿಯಾ ಗಾಂಧಿ ಸ್ವಕ್ಷೇತ್ರ ರಾಯ್​ಬರೇಲಿಯಲ್ಲಿ ಕುಂಟುತ್ತಿದೆ ಲಸಿಕೆ ಅಭಿಯಾನ

ರಾಯ್​ಬರೇಲಿ ಲೋಕಸಭಾ ಕ್ಷೇತ್ರವು ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಲಸಿಕೆ ನೀಡುವ ವಿಚಾರದಲ್ಲಿ ತೀರಾ ಹಿಂದುಳಿದಿದೆ. ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ ಕೊನೆಯ ಸ್ಥಾನದಲ್ಲಿರುವುದು ಚರ್ಚೆಗೆ ಕಾರಣವಾಗಿದೆ.

ಸೋನಿಯಾ ಗಾಂಧಿ ಸ್ವಕ್ಷೇತ್ರ ರಾಯ್​ಬರೇಲಿಯಲ್ಲಿ ಕುಂಟುತ್ತಿದೆ ಲಸಿಕೆ ಅಭಿಯಾನ
ಸೋನಿಯಾಗಾಂಧಿ ಸ್ವಕ್ಷೇತ್ರದಲ್ಲಿ ಲಸಿಕೆ ಅಭಿಯಾನಕ್ಕೆ ಹಿನ್ನಡೆ
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 21, 2021 | 6:23 PM

ನಮ್ಮ ದೇಶದಲ್ಲಿ ಕೆಲವೊಂದು ವಿವಿಐಪಿ ಲೋಕಸಭಾ ಕ್ಷೇತ್ರಗಳಿವೆ. ಇವುಗಳು ಅಭಿವೃದ್ದಿ ಸೇರಿದಂತೆ ಎಲ್ಲದರಲ್ಲೂ ದೇಶದ ಉಳಿದ ಕ್ಷೇತ್ರಗಳಿಗೆ ಮಾದರಿ ಆಗಿರಬೇಕು. ಪ್ರಧಾನಿ, ಪ್ರಧಾನಿ ಅಭ್ಯರ್ಥಿಗಳು, ರಾಷ್ಟ್ರೀಯ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರಗಳು ದೇಶಕ್ಕೆ ಮಾದರಿಯಾಗಿರಬೇಕು ಎನ್ನುವ ನಿರೀಕ್ಷೆ ಸಹಜ. ಕೆಲ ನಾಯಕರು ಪ್ರತಿನಿಧಿಸುವ ಕ್ಷೇತ್ರಗಳು ಮಾದರಿ ಆಗಿ ಅಭಿವೃದ್ದಿ ಆಗಿವೆ. ಆದರೇ, ಈಗ ಕೊರೊನಾ ಲಸಿಕೆ ನೀಡಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಪ್ರತಿನಿಧಿಸುವ ರಾಯ್​ಬರೇಲಿ ಕ್ಷೇತ್ರ ತೀರಾ ಹಿಂದುಳಿದಿದೆ. ಇದು ಚರ್ಚೆಗೆ ಗ್ರಾಸವಾಗಿದೆ.

ರಾಯ್ಬರೇಲಿ ಲೋಕಸಭಾ ಕ್ಷೇತ್ರವು ದೇಶಕ್ಕೆ ಪ್ರಧಾನಿಯನ್ನು ನೀಡಿದ ಕ್ಷೇತ್ರ. ಇಂದಿರಾಗಾಂಧಿ ರಾಯ್ಬರೇಲಿ ಕ್ಷೇತ್ರದಿಂದಲೇ ಲೋಕಸಭೆಗೆ ಆಯ್ಕೆಯಾಗುತ್ತಿದ್ದರು. ಈಗ ಅವರ ಸೊಸೆ ಸೋನಿಯಾಗಾಂಧಿ ಇದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇದು ಉತ್ತರ ಪ್ರದೇಶದಲ್ಲಿ ವಿವಿಐಪಿ ಲೋಕಸಭಾ ಕ್ಷೇತ್ರ. ಸೋನಿಯಾಗಾಂಧಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಮೈತ್ರಿಕೂಟದ ಅಧ್ಯಕ್ಷೆ ಆಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ರಾಯ್​ಬರೇಲಿಯಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳೂ ಆಗಿವೆ. ಏಮ್ಸ್ ಆಸ್ಪತ್ರೆ, ರೈಲ್ವೇ ಕೋಚ್ ಫ್ಯಾಕ್ಟರಿ, ವಿಮಾನ ಪೈಲಟ್ ತರಬೇತಿ ಕೇಂದ್ರ, ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿಸಿದ್ದು ಸೇರಿದಂತೆ ಕೆಲ ಅಭಿವೃದ್ದಿ ಕೊಡುಗೆಗಳನ್ನು ಸೋನಿಯಾಗಾಂಧಿ ತಾವು ಪ್ರತಿನಿಧಿಸುತ್ತಿರುವ ರಾಯ್​ಬರೇಲಿ ಕ್ಷೇತ್ರಕ್ಕೆ ನೀಡಿದ್ದರು.

ಆದರೆ ಈಗ ರಾಯ್​ಬರೇಲಿ ಲೋಕಸಭಾ ಕ್ಷೇತ್ರವು ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಲಸಿಕೆ ನೀಡುವ ವಿಚಾರದಲ್ಲಿ ತೀರಾ ಹಿಂದುಳಿದಿದೆ. ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ ಕೊನೆಯ ಸ್ಥಾನದಲ್ಲಿರುವುದು ಚರ್ಚೆಗೆ ಕಾರಣವಾಗಿದೆ. ರಾಯ್​ಬರೇಲಿಯಲ್ಲಿ ಜನರು ಈಗ ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯ ಜನಸಂಖ್ಯೆ 39 ಲಕ್ಷ. ಆದರೆ, ಇದುವರೆಗೂ 2,21,084 ಜನರು ಮಾತ್ರ ಕೊರೊನಾ ಲಸಿಕೆ ಪಡೆದಿದ್ದಾರೆ. ಈ ಪೈಕಿ 1,88,060 ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಅಂದರೆ ಜಿಲ್ಲೆಯ ಜನಸಂಖ್ಯೆಯ ಪೈಕಿ ಶೇ 4.6ರಷ್ಟು ಜನರು ಮಾತ್ರ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 33,024 ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ಈಗಾಗಲೇ ಶೇ 9ಕ್ಕಿಂತ ಹೆಚ್ಚಿನ ಜನರು ಕೊರೊನಾ ಲಸಿಕೆ ಪಡೆದಿದ್ದಾರೆ. ರಾಜ್ಯದ ಸರಾಸರಿಗೆ ಹೋಲಿಸಿದರೆ, ರಾಯ್​ಬರೇಲಿಯಲ್ಲಿ ಅರ್ಧದಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದಾರೆ.

ರಾಯ್ಬರೇಲಿಯಲ್ಲಿ ಜೂನ್ 20ರ ಭಾನುವಾರದವರೆಗೂ ಲಸಿಕೆ ಪಡೆದಿರುವವರ ಅಂಕಿಅಂಶದ ಪ್ರಕಾರ, 60 ವರ್ಷ ಮೇಲ್ಪಟ್ಟವರ ಪೈಕಿ 64,552 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 11,809 ಮಂದಿ ಮಾತ್ರ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನೂ 45 ರಿಂದ 60 ವರ್ಷ ವಯೋಮಾನದವರ ಪೈಕಿ 64,644 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದರೆ, 6944 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 18ರಿಂದ 44 ವರ್ಷ ವಯೋಮಾನದವರ ಪೈಕಿ 34,625 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದರೆ ಕೇವಲ ಮೂವರು ಮಾತ್ರ 2ನೇ ಡೋಸ್ ಲಸಿಕೆ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಲಸಿಕೆ ಪಡೆದ ಬಳಿಕ ಯಾರಿಗಾದರೂ ಜ್ವರ ಬಂದರೆ, ಅವರು ಉಳಿದವರಿಗೆ ಲಸಿಕೆ ಪಡೆಯದಂತೆ ಸಲಹೆ ಮಾಡುತ್ತಿದ್ದಾರೆ. ಈ ರೀತಿಯ ಮಾತುಗಳಿಂದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರಾದ ಸುರೇಂದ್ರ ಪ್ರತಾಪ್ ಸಿಂಗ್ ಹೇಳ್ತಾರೆ. ಲಸಿಕಾ ಕೇಂದ್ರಗಳ ನರ್ಸ್​ಗಳೇ ಪೋನ್ ಮಾಡಿ, 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವವರನ್ನು ಲಸಿಕಾ ಕೇಂದ್ರಗಳಿಗೆ ಬರುವಂತೆ ಕರೆಯಬೇಕಾದ ಪರಿಸ್ಥಿತಿ ಇದೆ.

ಲಸಿಕೆ ಪಡೆಯಲು ಹಿಂದೇಟು ಹಾಕಲು ರಾಜಕಾರಣಿಗಳ ಹೇಳಿಕೆಗಳು ಕಾರಣ ಎಂಬ ಮಾತು ಕೇಳಿ ಬಂದಿದೆ. ವೀರೇಂದ್ರ ಸಿಂಗ್ ಎನ್ನುವವರು ಹೇಳುವ ಪ್ರಕಾರ, ನಮ್ಮ ಗ್ರಾಮದಲ್ಲಿ ಯಾದವ್, ಮುಸ್ಲಿಂ ಸಮುದಾಯದ ಜನರು ಕೊರೊನಾ ಲಸಿಕೆ ಪಡೆಯಲ್ಲ ಎನ್ನುತ್ತಿದ್ದಾರೆ. ಅಖಿಲೇಶ್ ಯಾದವ್, ಬಿಜೆಪಿ ಲಸಿಕೆಯನ್ನು ಪಡೆಯಲ್ಲ ಎಂದ ಬಳಿಕ ಜನರು ಹೀಗೆ ಹೇಳುತ್ತಿದ್ದಾರೆ ಅಂತಾರೆ. ಆದರೆ, ಈಗ ಅಖಿಲೇಶ್ ಯಾದವ್ ಕೂಡ ಲಸಿಕೆ ಪಡೆಯಿರಿ ಅಂತ ಹೇಳುತ್ತಿರುವುದು ಜನರ ಗಮನಕ್ಕೆ ಬಂದಿಲ್ಲ. ಇನ್ನೂ ರಾಯ್​ಬರೇಲಿ ಲೋಕಸಭಾ ಸದಸ್ಯೆಯಾಗಿರುವ ಸೋನಿಯಾಗಾಂಧಿ ಕೂಡ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಇದು ಕೂಡ ಜನರ ಗಮನಕ್ಕೆ ಬಂದಿಲ್ಲ.

ನಾವು ಸೋನಿಯಾಗಾಂಧಿ ಕೊರೊನಾ ಲಸಿಕೆ ಪಡೆಯುವ ಪೋಟೋ ನೋಡಿಲ್ಲ. ಸೋನಿಯಾಗಾಂಧಿ ಅವರೇ ಕೊರೊನಾ ಲಸಿಕೆ ಪಡೆಯಲು ರಾಯ್​ಬರೇಲಿ ಜನರಿಗೆ ಮನವಿ ಮಾಡಬೇಕು. ಇದು ಹೆಚ್ಚಿನ ಜನರು ಲಸಿಕೆ ಪಡೆಯಲು ಸಹಾಯಕವಾಗಬಹುದು ಎಂದು ಸ್ಥಳೀಯರಾದ ನಿನಿನ್ ಮೋಹನ್ ಹೇಳುತ್ತಾರೆ. ಜಿಲ್ಲೆಯಲ್ಲಿ 89 ಲಸಿಕಾ ಕೇಂದ್ರಗಳಿವೆ. 4000 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಹಲವು ಕಿಲೋಮೀಟರ್​ಗಳಷ್ಟು ದೂರಕ್ಕೆ ಕ್ರಮಿಸಬೇಕಾಗಿದೆ. ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಲು ಇದೂ ಸಹ ಕಾರಣವಾಗಿದೆ.

ಕೆಲವು ಜನರಲ್ಲಿ ಕೊರೊನಾ ಲಸಿಕೆ ಬಗ್ಗೆ ತಪ್ಪು ಕಲ್ಪನೆಗಳಿದ್ದವು. ಅವುಗಳನ್ನು ದೂರ ಮಾಡಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಕೊಟ್ಟಿರುವ ಟಾರ್ಗೆಟ್ ಮುಟ್ಟಲು ಯತ್ನಿಸುತ್ತಿದ್ದೇವೆ. ಜೂನ್ 21ರಿಂದ ಕ್ಲಸ್ಟರ್ ಮಟ್ಟದಲ್ಲಿ ಲಸಿಕೆ ನೀಡುತ್ತೇವೆ.  ಜಿಲ್ಲೆಯಲ್ಲಿ ಒಟ್ಟು 6 ತಾಲ್ಲೂಕುಗಳಿವೆ. ಪ್ರತಿ ತಾಲ್ಲೂಕಿನಲ್ಲಿ ತಲಾ ನಾಲ್ಕು ಕ್ಲಸ್ಟರ್ ಮಾಡಿ ಲಸಿಕೆ ಅಭಿಯಾನ ನಡೆಸುತ್ತೇವೆ ಎಂದು ವೈದ್ಯಾಧಿಕಾರಿ ಡಿ.ಎಸ್.ಅಸ್ತಾನ ಹೇಳಿದ್ದಾರೆ.

ಕೊರೊನಾ ಲಸಿಕೆ ಬಗ್ಗೆ ತಪ್ಪು ಮಾಹಿತಿ ಹರಡಿದ್ದರಿಂದ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ ಎನ್ನುವುದು ವಿನೀತ್ ಗುಪ್ತಾ ಅವರ ಹೇಳಿಕೆ. ರಾಯ್​ಬರೇಲಿಯ ಕಡಿಮೆ ಲಸಿಕಾಕರಣವು ರಾಜಕೀಯ ಪಕ್ಷಗಳಲ್ಲಿ ಆರೋಪ, ಪ್ರತ್ಯಾರೋಪಕ್ಕೂ ಕಾರಣವಾಗಿದೆ. ಆರಂಭದ ದಿನಗಳಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರು ಲಸಿಕೆ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಿದರು. ಈಗ ಜನರ ಮುಂದೆ ಬಂದು ಕ್ಷಮೆ ಕೇಳಬೇಕೆಂದು ಉತ್ತರ ಪ್ರದೇಶದ ಬಿಜೆಪಿ ವಕ್ತಾರ ನವೀನ್ ಶ್ರೀವಾಸ್ತವ್ ಆಗ್ರಹಿಸಿದ್ದಾರೆ.

ರಾಯ್​ಬರೇಲಿ ಕ್ಷೇತ್ರದ ಒಟ್ಟು ಜನಸಂಖ್ಯೆ ಸುಮಾರು 40 ಲಕ್ಷ. ಇಲ್ಲಿ ಲಸಿಕೆ ನೀಡುತ್ತಿರುವ ವೇಗವನ್ನು ನೋಡಿದರೆ, ಎಲ್ಲರಿಗೂ ಲಸಿಕೆ ನೀಡಲು 5 ರಿಂದ 10 ವರ್ಷಗಳೇ ಬೇಕಾಗಬಹುದು. ರಾಜ್ಯ ಸರ್ಕಾರವೇ ನಿಧಾನಗತಿಯಲ್ಲಿ ಲಸಿಕೆ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ವಿನಯ್ ದ್ವಿವೇದಿ ಆರೋಪಿಸಿದ್ದಾರೆ. ಕಳೆದ ಜನವರಿಯಲ್ಲಿ ಅಖಿಲೇಶ್ ಯಾದವ್ ಲಸಿಕೆಗಳ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ಸರ್ಕಾರದ ಹಲವು ಸಚಿವರು, ಸಂಸದರು ಮತ್ತು ಶಾಸಕರೇ ಕೊರೊನಾ ನಿರ್ವಹಣಾ ಕ್ರಮಗಳ ಬಗ್ಗೆ ಅವೈಜ್ಞಾನಿಕ ಹೇಳಿಕೆಗಳನ್ನು ನೀಡಿದ್ದರು. ಸರ್ಕಾರ ಕಡಿಮೆ ಸಂಖ್ಯೆಯಲ್ಲಿ ಲಸಿಕೆಗಳನ್ನು ಪಡೆದ ಕಾರಣ ಲಸಿಕಾಕರಣದ ವೇಗವೂ ಕಡಿಮೆಯಾಗಿದೆ. ಇದಕ್ಕೆ ವಿರೋಧ ಪಕ್ಷಗಳನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎಂದು ಸಮಾಜವಾದಿ ಪಕ್ಷದ ವಕ್ತಾರ ವರುಣ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ಲಸಿಕೆ ಖರೀದಿಸಿ, ರಾಜ್ಯಗಳಿಗೆ ಹಂಚುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಲಸಿಕೆಯನ್ನು ಜನರಿಗೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಲಸಿಕೆ ನೀಡಿಕೆಯಲ್ಲಿ ಸಂಸದರ ಪಾತ್ರ ಹೆಚ್ಚೇನೂ ಇಲ್ಲ. ಹೀಗಾಗಿ ರಾಯ್​ಬರೇಲಿಯಲ್ಲಿ ಜನರು ಕಡಿಮೆ ಲಸಿಕೆ ಪಡೆದಿದ್ದಕ್ಕೆ ಸಂಸದೆಯಾಗಿರುವ ಸೋನಿಯಾಗಾಂಧಿ ಅವರನ್ನ ದೂಷಿಸುವುದು ಸರಿಯಲ್ಲ. ಜನರಲ್ಲಿ ಕೊರೊನಾ ಲಸಿಕೆ ಬಗ್ಗೆ ತಪ್ಪು ಕಲ್ಪನೆಗಳಿದ್ದರೆ, ರಾಜ್ಯ ಸರ್ಕಾರ ಅವುಗಳನ್ನು ನಿವಾರಣೆ ಮಾಡಬೇಕು. ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ರಾಜ್ಯ ಸರ್ಕಾರ ಜಾಗೃತಿ ಮೂಡಿಸಬೇಕು ಎಂದು ದೆಹಲಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಬರೀ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

(Vaccination Dull in Sonia Gandhi Rae Bareli Constituency Crossfire between BJP Congress)

ಇದನ್ನೂ ಓದಿ: ಕೊವಿಡ್ ಲಸಿಕೆ ಹಾಕಿಸಿಕೊಳ್ಳಿ: ರಾಹುಲ್ ಗಾಂಧಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸಲಹೆ

ಇದನ್ನೂ ಓದಿ: ಶೇ.75ರಷ್ಟು ಲಸಿಕೆ ಖರೀದಿ ಮಾಡಲಿರುವ ಕೇಂದ್ರ ಸರ್ಕಾರ.. ಯೋಗ ದಿನ ಹಿನ್ನೆಲೆ ಇಂದು ಅತಿಹೆಚ್ಚು ಲಸಿಕೆ ನೀಡುವ ಗುರಿ

Published On - 6:22 pm, Mon, 21 June 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್