Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯೋಗಾಭ್ಯಾಸ ಮಾಡುವಾಗ ‘ಅಲ್ಲಾ’ ಎಂದು ಪಠಣ ಮಾಡಿದರೆ ಅದರ ಮಹತ್ವ ಕಡಿಮೆಯಾಗುವುದಿಲ್ಲ’-ವಿವಾದ ಸೃಷ್ಟಿಸಿದ ಅಭಿಷೇಕ್ ಮನು ಸಿಂಘ್ವಿ

international yoga day 2021: ಶತಮಾನಗಳಿಂದಲೂ ಯೋಗಾಭ್ಯಾಸ ಮಾಡುವಾಗ ಓಂ ಎಂದು ದೀರ್ಘಸ್ವರ ಉಚ್ಚಾರ ಮಾಡಲಾಗುತ್ತದೆ. ಅದನ್ನೇ ಈಗ ಅಭಿಷೇಕ್​ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ. ಇವರ ಟ್ವೀಟ್​ಗೆ ಯೋಗ ಗುರು ಬಾಬಾ ರಾಮ್​ ದೇವ್​ ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ. ಓಂ ಶಬ್ದ ಪಠಣ ಯಾವುದೇ ಧರ್ಮ, ಜಾತಿಯ ಪ್ರತಿಬಿಂಬಕವಲ್ಲ ಎಂದಿದ್ದಾರೆ.

‘ಯೋಗಾಭ್ಯಾಸ ಮಾಡುವಾಗ ‘ಅಲ್ಲಾ’ ಎಂದು ಪಠಣ ಮಾಡಿದರೆ ಅದರ ಮಹತ್ವ ಕಡಿಮೆಯಾಗುವುದಿಲ್ಲ’-ವಿವಾದ ಸೃಷ್ಟಿಸಿದ ಅಭಿಷೇಕ್ ಮನು ಸಿಂಘ್ವಿ
ಅಭಿಷೇಕ್ ಮನು ಸಿಂಘ್ವಿ
Follow us
TV9 Web
| Updated By: Lakshmi Hegde

Updated on: Jun 21, 2021 | 4:55 PM

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಕಾಂಗ್ರೆಸ್ ನಾಯಕ ಅಭಿಷೇಕ್​ ಮನು ಸಿಂಘ್ವಿ ತಮ್ಮದೊಂದು ಅಭಿಪ್ರಾಯ ವ್ಯಕ್ತಪಡಿಸಿ, ಸಿಕ್ಕಾಪಟೆ ಟೀಕೆಗೆ ಗುರಿಯಾಗಿದ್ದಾರೆ. ಯೋಗವನ್ನು ಮಾಡುವಾಗ ಓಂ ಎಂದು ಉಚ್ಛರಿಸುವ ಬಗ್ಗೆ ಮಾತನಾಡಿದ ಅಭಿಷೇಕ್​ ಮನು ಸಿಂಘ್ವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿದ ಅವರು, ‘ಓಂ’ ಶಬ್ದ ಉಚ್ಚರಿಸುವ ಮೂಲಕ ಯೋಗಾಭ್ಯಾಸ ಮಾಡಿದರೆ ಯೋಗದ ಮಹತ್ವ ಹೆಚ್ಚಾಗುವುದಿಲ್ಲ..‘ಅಲ್ಲಾ’ ಎಂದು ಉಚ್ಚರಿಸುತ್ತ ಯೋಗ ಮಾಡಿದಾಕ್ಷಣ ಅದರ ಶಕ್ತಿ ಏನೂ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದೇ ಈ ವಿವಾದಕ್ಕೆ ಕಾರಣ.

ಶತಮಾನಗಳಿಂದಲೂ ಯೋಗಾಭ್ಯಾಸ ಮಾಡುವಾಗ ಓಂ ಎಂದು ದೀರ್ಘಸ್ವರ ಉಚ್ಚಾರ ಮಾಡಲಾಗುತ್ತದೆ. ಅದನ್ನೇ ಈಗ ಅಭಿಷೇಕ್​ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ. ಇವರ ಟ್ವೀಟ್​ಗೆ ಯೋಗ ಗುರು ಬಾಬಾ ರಾಮ್​ ದೇವ್​ ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ. ಓಂ ಶಬ್ದ ಪಠಣ ಯಾವುದೇ ಧರ್ಮ, ಜಾತಿಯ ಪ್ರತಿಬಿಂಬಕವಲ್ಲ. ಎಲ್ಲ ಧರ್ಮ, ಜಾತಿ-ಮತದವರಿಗೂ ದೇವರು ಒಬ್ಬನೇ. ಅಲ್ಲಾ..ಈಶ್ವರ, ಪರಮಾತ್ಮ ಎಲ್ಲರೂ ಒಂದೇ. ದೇವರನ್ನು ನಂಬುವವರಿಗೆ ಓಂ ಶಬ್ದ ಯಾವ ಕಾರಣಕ್ಕೂ ನಿಷೇಧವಲ್ಲ. ಅವರು ಯಾವುದೇ ಧರ್ಮಕ್ಕೆ ಸೇರಿರಲಿ ಧೈರ್ಯವಾಗಿ ಓಂ ಪಠಣ ಮಾಡುತ್ತಾರೆ ಎಂದಿದ್ದಾರೆ.

ಸಿಂಘ್ವಿಯಿಂದ ಮತ್ತೊಂದು ಟ್ವೀಟ್ ತಮ್ಮ ಟ್ವೀಟ್​ ವಿವಾದ ಸೃಷ್ಟಿಸುತ್ತಿದ್ದಂತೆ  ಅಭಿಷೇಕ್​ ಮನು ಸಿಂಘ್ವಿ ಮತ್ತೊಂದು ಟ್ವೀಟ್​ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಶ್ರೀರಾಮನ ಹೆಸರಲ್ಲಿ ಕೋಟ್ಯಂತರ ಭಕ್ತರನ್ನು ಲೂಟಿ ಮಾಡುತ್ತಿರುವವರು ಇದೀಗ ನನ್ನ ನಂಬಿಕೆಯನ್ನು ಪ್ರಶ್ನಿಸುವ ಮೂಲಕ ತಮ್ಮ ಪಾಪವನ್ನು ಅಳಿಸಿಕೊಳ್ಳಲು ನೋಡುತ್ತಿದ್ದಾರೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಯೋಗ ಆಚರಣೆಯಲ್ಲಿದೆ..ಇದು ನಮ್ಮ ಪರಂಪರೆ ಎಂಬುದು ನನಗೆ ಗೊತ್ತಿದೆ. ನನ್ನ ನಂಬಿಕೆಯ ಬಗ್ಗೆ ಯಾವುದೇ ಸೋ ಕಾಲ್ಡ್​​  ರಾಷ್ಟ್ರೀಯವಾದಿಗಳಿಂದ ಪ್ರಮಾಣ ಪತ್ರ ಬೇಕಾಗಿಲ್ಲ. ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ಹೇಳಿದ್ದಾರೆ.

ಈ ವರ್ಷ ನಡೆಯುತ್ತಿರುವುದು ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಜಗತ್ತಿನ ಹಲವು ದೇಶಗಳಲ್ಲಿ ಅನೇಕರು ಇಂದು ಯೋಗಾಭ್ಯಾಸವನ್ನು ಒಂದು ಹಬ್ಬದಂತೆ ಆಚರಿಸಿದ್ದಾರೆ. ಸೂರ್ಯನಮಸ್ಕಾರ, ಪ್ರಾಣಾಯಾಮಗಳನ್ನು ಮಾಡಿದ್ದಾರೆ. ಹೀಗೆ ಯೋಗ ಮಾಡುವಾಗ ಸರ್ವೇ ಸಾಮಾನ್ಯವಾಗಿ ಓಂ ಎಂದೇ ಹೇಳಲಾಗುತ್ತದೆ. ಅಷ್ಟಕ್ಕೂ ಈ ಯೋಗ ಎಂಬುದು ಭಾರತ ಜಗತ್ತಿಗೆ ನೀಡಿದ ಅತ್ಯದ್ಭುತ ಕೊಡುಗೇ ಎಂದೇ ಹೇಳಲಾಗುತ್ತದೆ. ಆದರೆ ಅದರಲ್ಲಿ ಓಂ ಶಬ್ದ ಉಚ್ಚರಿಸುವ ಬಗ್ಗೆ ಮಾತನಾಡಿದ ಅಭಿಷೇಕ್​ ಮನು ಸಿಂಘ್ವಿ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ, ಮಗ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ; ಇದನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ: ಸಿದ್ದರಾಮಯ್ಯ

ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ