Coronavirus Third Wave: ಸೆಪ್ಟೆಂಬರ್​-ಅಕ್ಟೋಬರ್​ ವೇಳೆಗೆ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ತಲುಪಲಿದೆ – ಐಐಟಿ ಅಧ್ಯಯನ

Covid 19 Third Wave: ಎರಡನೇ ಅಲೆಯ ಆಧಾರದ ಮೇಲೆ ಮೂರು ಸಾಧ್ಯತೆಗಳನ್ನು ಲೆಕ್ಕ ಹಾಕಲಾಗಿದೆ. ಸದ್ಯ ನಮ್ಮ ಅಂದಾಜಿನ ಪ್ರಕಾರ ದೇಶದಲ್ಲಿ ಜುಲೈ 15ರ ಸುಮಾರಿಗೆ ಸಂಪೂರ್ಣ ಅನ್​ಲಾಕ್​ ಆಗಬಹುದು. ಅದರನ್ವಯ ಮೂರನೇ ಅಲೆ ಸಾಧ್ಯತೆಗಳು ಹೀಗಿವೆ ಎಂದು ತಜ್ಞರು ವಿವರಿಸಿದ್ದಾರೆ.

Coronavirus Third Wave: ಸೆಪ್ಟೆಂಬರ್​-ಅಕ್ಟೋಬರ್​ ವೇಳೆಗೆ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ತಲುಪಲಿದೆ - ಐಐಟಿ ಅಧ್ಯಯನ
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on:Jun 21, 2021 | 5:09 PM

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅನಿರೀಕ್ಷಿತವಾಗಿ ಅವಾಂತರ ಸೃಷ್ಟಿಸಿ ಈಗ ಇಳಿಕೆಯತ್ತ ಸಾಗುತ್ತಿದೆ. ಮೊದಲ ಅಲೆಗಿಂತಲೂ ಹೆಚ್ಚು ಅಡ್ಡ ಪರಿಣಾಮ ಬೀರಿರುವ ಕೊರೊನಾ ಎರಡನೇ ಅಲೆ ಸಾಕಷ್ಟು ಸಾವು-ನೋವುಗಳನ್ನು ಉಂಟುಮಾಡಿ ಇಡೀ ದೇಶವನ್ನೇ ನಲುಗಿಸಿದೆ. ಆದರೆ, ಇದರ ಆಘಾತವನ್ನು ಅರಗಿಸಿಕೊಳ್ಳುವ ಮುನ್ನವೇ ತಜ್ಞರು ಕೊರೊನಾ ಮೂರನೇ ಅಲೆಯ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ. ಇಂದು (ಜೂನ್ 21) ಕಾನ್ಪುರದ ಐಐಟಿ ಪ್ರಕಟಿಸಿದ ಅಧ್ಯಯನದಲ್ಲಿ ಸೆಪ್ಟೆಂಬರ್​-ಅಕ್ಟೋಬರ್ ವೇಳೆಯಲ್ಲಿ ಕೊವಿಡ್​ 19 ಮೂರನೇ ಅಲೆ ಉಚ್ಛ್ರಾಯ ಸ್ಥಿತಿಗೆ ತಲುಪಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ. ಈ ಬಗ್ಗೆ ಅಧ್ಯಯನ ಮಾಡಿರುವ ಪ್ರೊ. ರಾಜೇಶ್ ರಂಜನ್ ಹಾಗೂ ಮಹೇಂದ್ರ ವರ್ಮ ಸದರಿ ವಿಚಾರದ ಕುರಿತಾದ ಮಾಹಿತಿ ನೀಡಿದ್ದಾರೆ.

ಕೊರೊನಾ ಎರಡನೇ ಅಲೆಯ ಹೊಡೆತ ಅನುಭವಿಸಿರುವ ಆಡಳಿತ ವರ್ಗ ಹಾಗೂ ಸಾರ್ವಜನಿಕರಲ್ಲಿ ಮೂರನೇ ಅಲೆ ಬಗ್ಗೆ ಸಹಜವಾಗಿಯೇ ಆತಂಕ ಸೃಷ್ಟಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ್ದೇವೆ. ಎರಡನೇ ಅಲೆಯ ಆಧಾರದ ಮೇಲೆ ಮೂರು ಸಾಧ್ಯತೆಗಳನ್ನು ಲೆಕ್ಕ ಹಾಕಲಾಗಿದೆ. ಸದ್ಯ ನಮ್ಮ ಅಂದಾಜಿನ ಪ್ರಕಾರ ದೇಶದಲ್ಲಿ ಜುಲೈ 15ರ ಸುಮಾರಿಗೆ ಸಂಪೂರ್ಣ ಅನ್​ಲಾಕ್​ ಆಗಬಹುದು. ಅದರನ್ವಯ ಮೂರನೇ ಅಲೆ ಸಾಧ್ಯತೆಗಳು ಹೀಗಿವೆ ಎಂದು ಅದನ್ನು ವಿವರಿಸಿದ್ದಾರೆ.

ಸಾಧ್ಯತೆ 1: ಸಹಜತೆಯತ್ತ ಮರಳಿದರೆ – ಮೂರನೇ ಅಲೆ ಅಕ್ಟೋಬರ್​ ತಿಂಗಳಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಲಿದೆ. ಆದರೆ, ಆ ಹಂತದಲ್ಲಿ ಅದು ಉಂಟುಮಾಡುವ ಪರಿಣಾಮಗಳು ಎರಡನೇ ಅಲೆಗಿಂತ ಕೊಂಚ ಕಡಿಮೆ ಇರಲಿದೆ.

ಸಾಧ್ಯತೆ 2: ಸಹಜ ಪರಿಸ್ಥಿತಿ ಇದ್ದು ವೈರಸ್​ ರೂಪಾಂತರಗೊಂಡರೆ – ಮೂರನೇ ಅಲೆ ಉತ್ತುಂಗಕ್ಕೆ ತಲುಪುವಾಗ ಹೆಚ್ಚು ಗಂಭೀರ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಎರಡನೇ ಅಲೆಗಿಂತಲೂ ಅಧಿಕ ಪರಿಣಾಮ ಬೀರುವ ಸಾಧ್ಯತೆಯಿದ್ದು, ಸೆಪ್ಟೆಂಬರ್​ನಲ್ಲೇ ಇದು ಉಂಟಾಗುವ ಸಾಧ್ಯತೆಯಿದೆ.

ಸಾಧ್ಯತೆ 3: ಕಠಿಣ ನಿಯಮಾವಳಿಗಳ ಪಾಲನೆಯಾದರೆ – ಮೂರನೇ ಅಲೆ ಉತ್ತುಂಗಕ್ಕೆ ತಲುಪುವ ಸಮಯ ವಿಳಂಬಗೊಳ್ಳಲಿದೆ. ಅಂದರೆ, ಕಠಿಣ ಸಾಮಾಜಿಕ ಅಂತರ ಹಾಗೂ ನಿಯಮ ಪಾಲನೆ ಮಾಡಿದಲ್ಲಿ ಅಕ್ಟೋಬರ್ ಅಂತ್ಯದ ಸುಮಾರಿಗೆ ಮೂರನೇ ಅಲೆಯ ತೀವ್ರತೆ ಕಾಣಿಸಬಹುದು. ಆದರೆ, ಅದು ಎರಡನೇ ಅಲೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಮೂರು ಸಾಧ್ಯತೆಗಳನ್ನು ಐಐಟಿ ಅಧ್ಯಯನಕಾರರು ತೆರೆದಿಟ್ಟಿದ್ದು, ಮೂರನೇ ಅಲೆ ಉಂಟಾಗುವುದಂತೂ ಸ್ಪಷ್ಟವಾಗಿದೆ. ಇದರಲ್ಲಿ ಇನ್ನೊಂದು ಗಮನಾರ್ಹ ಅಂಶವೆಂದರೆ ಸಾಧ್ಯತೆಗಳ ಪಟ್ಟಿಯಲ್ಲಿ ಲಸಿಕೆಯನ್ನು ಕೈ ಬಿಡಲಾಗಿದ್ದು, ಒಂದು ವೇಳೆ ಲಸಿಕೆ ವಿತರಣೆಯು ಇನ್ನಷ್ಟು ವೇಗ ಪಡೆದು ಎಲ್ಲರನ್ನೂ ತಲುಪಿದಲ್ಲಿ ಮೂರನೇ ಅಲೆ ಪ್ರಭಾವ ಗಣನೀಯವಾಗಿ ತಗ್ಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಮೇಲ್ಕಾಣಿಸಿದ ಅಧ್ಯಯನಗಳ ಅಂಶಗಳ ಪೈಕಿ ಕೊರೊನಾ ವೈರಾಣು ರೂಪಾಂತರಗೊಂಡರೆ ಗಂಭೀರ ಪರಿಣಾಮ ಉಂಟಾಗಲಿದೆ ಎನ್ನುವುದು ಚಿಂತಿಸಲೇಬೇಕಾದ ವಿಷಯವಾಗಿದೆ. ಈಗಾಗಲೇ ಡೆಲ್ಟಾ, ಡೆಲ್ಟಾ ಪ್ಲಸ್ ಪ್ರಬೇಧಗಳು ಬಲಗೊಂಡಿವೆ ಎಂದು ಹೇಳಲಾಗಿರುವುದರಿಂದ ಇದಕ್ಕಿಂತಲೂ ಬಲಾಢ್ಯ ರೂಪಾಂತರಿ ವೈರಾಣು ಬಂದರೆ ನಿರ್ವಹಣೆ ಕಷ್ಟವಾಗಬಹುದು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಅನ್​ಲಾಕ್​ ಆದರೂ ಕೊರೊನಾ ನಿಯಮಾವಳಿಗಳನ್ನು ಪಾಲಿಸುವುದು ಹಾಗೂ ಲಸಿಕೆ ತೆಗೆದುಕೊಳ್ಳುವುದು ಈ ಎರಡು ಅಂಶಗಳಿಗೆ ಜನರು ಪ್ರಾಧಾನ್ಯತೆ ನೀಡಲೇಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: Covid-19 ಕೊವಿಡ್ ಮೂರನೇ ಅಲೆ ಎದುರಿಸಲು ಭಾರತ ಹೇಗೆ ಸಿದ್ಧತೆ ನಡೆಸಬಹುದು? 

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಡಾ.ರಣದೀಪ್​ ಗುಲೇರಿಯಾ

Published On - 5:07 pm, Mon, 21 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್