ದುಷ್ಟ ಅಳಿಯನಿಂದಾಗಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Aug 08, 2020 | 6:05 PM

ಹೈದರಾಬಾದ್: ಮಗಳಿಗೆ ಆಕೆಯ ಗಂಡ ನೀಡುತ್ತಿರುವ ಕಿರುಕುಳದಿಂದ ಮಗಳು ವೇದನೆ ಪಡುತ್ತಿರುವುದನ್ನು ನೋಡಲಾರದೇ ವಿಡಿಯೋ ಮಾಡಿಟ್ಟು ಮಾವ ಆತ್ಮಹತ್ಯೆ ಮಾಡಿಕೊಂಡ ಕರುಳು ಹಿಂಡುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರದ ಕಡಪ ಜಿಲ್ಲೆಯ ಪ್ರೊದ್ದಟೂರಿನ ಬಾಬು ರೆಡ್ಡಿ ಎಂಬಾತ, ಆತನ ಹಿರಿಯ ಮಗಳಿಗೆ ಆಕೆಯ ಗಂಡ ನಿತ್ಯ ಕಿರುಕುಳ ನೀಡುತ್ತಿದ್ದು, ಅ ದರಿಂದ ಆಕೆ ಪಡುತ್ತಿರುವ ಯಾತನೆ ನೋಡಲಾಗದೇ, ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಡಿಯೋದಲ್ಲಿ ತನ್ನ ಸಾವಿಗೆ ಹಿರಿಯ ಮಗಳ ಗಂಡನೇ ಕಾರಣ. ಆತ ನಿತ್ಯ ನನ್ನ […]

ದುಷ್ಟ ಅಳಿಯನಿಂದಾಗಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
Follow us on

ಹೈದರಾಬಾದ್: ಮಗಳಿಗೆ ಆಕೆಯ ಗಂಡ ನೀಡುತ್ತಿರುವ ಕಿರುಕುಳದಿಂದ ಮಗಳು ವೇದನೆ ಪಡುತ್ತಿರುವುದನ್ನು ನೋಡಲಾರದೇ ವಿಡಿಯೋ ಮಾಡಿಟ್ಟು ಮಾವ ಆತ್ಮಹತ್ಯೆ ಮಾಡಿಕೊಂಡ ಕರುಳು ಹಿಂಡುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರದ ಕಡಪ ಜಿಲ್ಲೆಯ ಪ್ರೊದ್ದಟೂರಿನ ಬಾಬು ರೆಡ್ಡಿ ಎಂಬಾತ, ಆತನ ಹಿರಿಯ ಮಗಳಿಗೆ ಆಕೆಯ ಗಂಡ ನಿತ್ಯ ಕಿರುಕುಳ ನೀಡುತ್ತಿದ್ದು, ಅ ದರಿಂದ ಆಕೆ ಪಡುತ್ತಿರುವ ಯಾತನೆ ನೋಡಲಾಗದೇ, ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಡಿಯೋದಲ್ಲಿ ತನ್ನ ಸಾವಿಗೆ ಹಿರಿಯ ಮಗಳ ಗಂಡನೇ ಕಾರಣ. ಆತ ನಿತ್ಯ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದನ್ನು ನೋಡಲಾರದೇ ಆತ್ಮಹತ್ಯೆ ಮಾಡುಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನನ್ನ ಅಳಿಯನೇ ಕಾರಣ ಅಂತಾ ವಿಡಿಯೋದಲ್ಲಿ ರಿಕಾರ್ಡ್‌ ಮಾಡಿದ್ದಾನೆ.

ತಂದೆ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಹಿರಿಯ ಮಗಳು ಶ್ವೇತಾರೆಡ್ಡಿ ಕೂಡಾ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಂದೆ ಮತ್ತು ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿಯುತ್ತಲೇ ಬಿ.ಇ. ಓದುತ್ತಿದ್ದ ಕಿರಿಯ ಮಗಳು ಸಾಯಿ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗೆ ದುಷ್ಟ ಅಳಿಯನಿಂದಾಗಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು ಆಂಧ್ರಪ್ರದೇಶವನ್ನ ತಲ್ಲಣಗೊಳಿಸಿದೆ.