ಬಿಹಾರ: ನಳಂದಾದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿತ; ಇಬ್ಬರು ಕಾರ್ಮಿಕರು ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Nov 18, 2022 | 9:10 PM

ಭಕ್ತಿಯಾರ್‌ಪುರ-ರಾಜೌಲಿ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಮೇಲ್ಸೇತುವೆಯ ಹೆಚ್ಚಿನ ಭಾಗ ಕುಸಿದಿದೆ. ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಿಹಾರ: ನಳಂದಾದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿತ; ಇಬ್ಬರು ಕಾರ್ಮಿಕರು ಸಾವು
ಕುಸಿದು ಬಿದ್ದ ಸೇತುವೆ
Follow us on

ಪಾಟ್ನಾ: ಬಿಹಾರದ (Bihar)ನಳಂದಾ ಪ್ರದೇಶದ ಬೇನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಿರ್ಮಾಣ ಹಂತದ ಸೇತುವೆ  (bridge collapsed) ಕುಸಿದಿದೆ. ಅವಶೇಷಗಳ ಅಡಿಯಲ್ಲಿ ಎಷ್ಟು ಜನರು ಸಿಲುಕಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಭಾಗನ್ ಬಿಘಾ ಚೌಕ್ ನಲ್ಲಿ ಈ ಘಟನೆ ನಡೆದಿದೆ. ಭಕ್ತಿಯಾರ್‌ಪುರ-ರಾಜೌಲಿ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಮೇಲ್ಸೇತುವೆಯ ಹೆಚ್ಚಿನ ಭಾಗ ಕುಸಿದಿದೆ. ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬೇನಾ ಪೊಲೀಸ್ ಠಾಣೆ ಮತ್ತು ಭಾಗನ್ ಬಿಘಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು  ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಿದ್ದಾರೆ.

ಘಟನೆ ನಡೆದಾಗ ಚತುಷ್ಪಥ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿತ್ತು ಎಂದು ಬಿಡಿಒ ಲಕ್ಷ್ಮಣ್ ಕುಮಾರ್ ತಿಳಿಸಿದ್ದಾರೆ. ಅವಶೇಷಗಳಡಿಯಲ್ಲಿ ಎಷ್ಟು ಮಂದಿ ಹೂತು ಹೋಗಿದ್ದಾರೆ ಎಂಬ ಬಗ್ಗೆ ಸದ್ಯ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Published On - 8:16 pm, Fri, 18 November 22