AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ಬಾಲಿಯಲ್ಲಿ ಜಿ 20 ಶೃಂಗಸಭೆ ವೇಳೆ ಗೋ ಬ್ಯಾಕ್ ಮೋದಿ ಎಂದು ಫಲಕ ಹಿಡಿದ ಯುವತಿ; ಫೋಟೊಶಾಪ್ ಮಾಡಿದ ಚಿತ್ರ ವೈರಲ್

ವೈರಲ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ ಜುಲೈ 1 ರಂದು ಮಾಡಿರುವ ಟ್ವೀಟ್ ನಲ್ಲಿ ಮಹಿಳೆಯ ಫೋಟೊ ಸಿಕ್ಕಿದೆ.

Fact Check ಬಾಲಿಯಲ್ಲಿ ಜಿ 20 ಶೃಂಗಸಭೆ ವೇಳೆ ಗೋ ಬ್ಯಾಕ್ ಮೋದಿ ಎಂದು ಫಲಕ ಹಿಡಿದ ಯುವತಿ; ಫೋಟೊಶಾಪ್ ಮಾಡಿದ ಚಿತ್ರ ವೈರಲ್
ವೈರಲ್ ಫೋಟೊ
TV9 Web
| Edited By: |

Updated on:Nov 18, 2022 | 9:05 PM

Share

ಇಂಡೋನೇಷ್ಯಾದ(Indonesia) ಬಾಲಿಯಲ್ಲಿ(Bali) ಎರಡು ದಿನಗಳ ಜಿ20 ಶೃಂಗಸಭೆ (G20 summit ) ನವೆಂಬರ್ 16 ರಂದು ಭಾರತಕ್ಕೆ ಅಧ್ಯಕ್ಷತೆಯನ್ನು ಹಸ್ತಾಂತರಿಸುವುದರೊಂದಿಗೆ ಮುಕ್ತಾಯಗೊಂಡಿತು. ಇದೆಲ್ಲದರ ನಡುವೆ, ಮಹಿಳೆಯೊಬ್ಬರು  Go Back Modi. Again. Go Back Modi ಎಂದು ಬರೆದಿರುವ ಫಲಕವನ್ನು ಹಿಡಿದಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಫೋಟೊ ಬಾಲಿಯದ್ದು, ಶೃಂಗಸಭೆಯ ಸಮಯದಲ್ಲಿ ಈ ಯುವತಿ ಈ ರೀತಿ ಪ್ರತಿಭಟನೆ ಮಾಡಿದ್ದಾಳೆ ಎಂಬ ಒಕ್ಕಣೆ ಜತೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರ ಶೇರ್ ಆಗಿದೆ. ಕೆಲವರು ಈ ಫೋಟೊ ನವೆಂಬರ್ 15 ರಂದು ಚಿತ್ರೀಕರಿಸಿದ್ದು ಎಂದು ಹೇಳಿದ್ದಾರೆ. ಈ ರೀತಿ ಕೆಂಪು ಸೂಟ್ ಸಾಹೇಬರನ್ನು ಸ್ವಾಗತಿಸಲಾಯಿತು ಎಂದು ಟ್ವೀಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿಯವರ ವಿರುದ್ಧದ ಈ ಪ್ರತಿಭಟನೆಯನ್ನು ಮಾಧ್ಯಮಗಳು ವರದಿ ಮಾಡಿಲ್ಲ ಎಂದು ಹಲವರು ಮಾಧ್ಯಮದವರನ್ನು ಟೀಕಿಸಿದ್ದಾರೆ. ಅಂದಹಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೊ ಫೋಟೋಶಾಪ್ ಮಾಡಿದ ಚಿತ್ರವಾಗಿದೆ.

ಫ್ಯಾಕ್ಟ್ ಚೆಕ್ ವೈರಲ್ ಚಿತ್ರ ಮಾರ್ಫ್ ಮಾಡಿದ್ದು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮೂಲ ಫೋಟೋದಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿರುವ ಫಲಕವನ್ನು ಯುವತಿ ಹಿಡಿದು ನಿಂತಿದ್ದಾಳೆ. ವೈರಲ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ ಜುಲೈ 1 ರಂದು ಮಾಡಿರುವ ಟ್ವೀಟ್ ನಲ್ಲಿ ಮಹಿಳೆಯ ಫೋಟೊ ಸಿಕ್ಕಿದೆ. ಈ ಫೋಟೊದಲ್ಲಿ “Want to save American democracy? Read this sign and comply! #ElectDemocrats2022 up and down every ballot! ⁦@CasaDemocrats ಎಂದು ಬರೆದಿದೆ.

ವೈರಲ್ ಆಗಿರುವ ಚಿತ್ರ ಮತ್ತು ಮೂಲ ಫೋಟೊದಲ್ಲಿ ಫಲಕದಲ್ಲಿರುವ ವಿಷಯಗಳನ್ನು ಹೊರತುಪಡಿಸಿ ಬಾಕಿ ಎಲ್ಲವೂ ಒಂದೇ ಆಗಿವೆ. ಹಳೆಯ ಫೋಟೊದಲ್ಲಿನ ಫಲಕದಲ್ಲಿ “Democrats and Independents must unite to vote out Republicans. Vote Blue this November. Paid for by concerned citizen ಎಂದು ಬರೆಯಲಾಗಿದೆ. ಫ್ಯಾಕ್ಟ್ ಚೆಕ್ ನಿಂದ ತಿಳಿದು ಬಂದ ಸಂಗತಿಯೇನೆಂದರೆ ವೈರಲ್ ಫೋಟೋ ಬಾಲಿಯದ್ದು ಅಲ್ಲ. ಈ ಫೋಟೊ ಅಮೆರಿಕದಲ್ಲಿದ್ದು. ಈ ಫೋಟೊವನ್ನು G20 ಶೃಂಗಸಭೆಗೆ ತಿಂಗಳುಗಳ ಮೊದಲು ತೆಗೆದುಕೊಳ್ಳಲಾಗಿದೆ. ಫಲಕದಲ್ಲಿನ ವಿಷಯಗಳನ್ನು ಎಡಿಟ್ ಮಾಡಿ ಬದಲಿಸಲಾಗಿದೆ.

ಮೂಲ ಫೋಟೊ ಅಮೆರಿಕದ ಫೋಟೊ ಶೇರಿಂಗ್ ವೆಬ್ ಸೈಟ್ Imgurನಲ್ಲಿಯೂ ಶೇರ್ ಆಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:00 pm, Fri, 18 November 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?