
ಭೋಪಾಲ್, ಅಕ್ಟೋಬರ್ 27: ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಸರ್ಕಾರಿ ಮದ್ಯದಂಗಡಿ(
Liquor Shop) ಯಿಂದ ವಿದ್ಯಾರ್ಥಿನಿಯರು ಮದ್ಯ ಖರೀದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದ್ಯದಂಡಗಿಯಲ್ಲಿ ಯಾವುದೇ ಪ್ರಶ್ನೆ ಮಾಡದೆ ಅವರಿಗೆ ಮದ್ಯ ಮಾರಾಟ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮಾಂಡ್ಲಾ ಜಿಲ್ಲೆಯ ನೈನ್‌ಪುರದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿನಿಯರು ಇದು ರಾಜ್ಯದಲ್ಲಿ ಕಾನೂನು ಜಾರಿ ವ್ಯವಸ್ಥೆಯ ಬಗ್ಗೆ ಆಕ್ರೋಶವನ್ನು ಹುಟ್ಟುಹಾಕಿದೆ ಮತ್ತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ದೃಶ್ಯದಲ್ಲಿ ವಿದ್ಯಾರ್ಥಿನಿಯರ ಗುಂಪೊಂದು ತಲೆಗೆ ದುಪಟ್ಟಾ ಹೊದ್ದು ಮದ್ಯದಂಗಡಿ ಪ್ರವೇಶಿಸಿ, ಕೌಂಟರ್ ಬಳಿ ಹೋಗಿ, ಮದ್ಯ ಖರೀದಿಸಿ ಹೊರಟು ಹೋಗುವುದನ್ನು ತೋರಿಸಲಾಗಿದೆ.
ವಿಡಿಯೋ ನೋಡಿದ ಕೂಡಲೇ, ಪೊಲೀಸರ ತಂಡ ಅಂಗಡಿಗೆ ಭೇಟಿ ನೀಡಿ, ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಲಾಗಿದ್ದು, ಸಾಮಾನ್ಯ ಪರವಾನಗಿ ಷರತ್ತುಗಳು (GLC) ಮತ್ತು ಕ್ರಿಮಿನಲ್ ಮದ್ಯ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂಬುದು ದೃಢಪಟ್ಟಿದೆ. ಈ ವಿಷಯ ವಿವರವಾದ ತನಿಖೆಗೆ ಕಾರಣವಾಗಿದೆ ಮತ್ತು ನಂತರ ಮದ್ಯ ಮಾರಾಟಗಾರನನ್ನು ಬಂಧಿಸಲಾಗಿದೆ.
ಮತ್ತಷ್ಟ ಓದಿ: Viral: ಮದ್ವೆಯಲ್ಲಿ ಮದ್ಯ, ನಾನ್ ವೆಜ್ ಇರಲ್ಲ; ವಿಚಿತ್ರ ಮದುವೆ ಆಮಂತ್ರಣ ಪತ್ರಿಕೆ ವೈರಲ್
ಪ್ರಸ್ತುತ ಅಂಗಡಿ ಮಾಲೀಕರ ವಿಚಾರಣೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿನಿಯರು ಅವರೇ ಬಂದು ಮದ್ಯ ಖರೀದಿಸಿದ್ದಾರೆಯೇ ಅಥವಾ ಯಾರಾದರೂ ಅವರನ್ನು ಕಳುಹಿಸಿದ್ದಾರೆಯೇ ಎನ್ನುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
ಮದ್ಯ ಖರೀದಿಸಿದ ವಿಡಿಯೋ
ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಬಕಾರಿ ಅಧಿಕಾರಿ ರಾಮ್‌ಜಿ ಪಾಂಡೆ ಮಾತನಾಡಿ, ಈ ವಿಷಯವನ್ನು ದೃಢಪಡಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ವರದಿಯನ್ನು ಕಳುಹಿಸಲಾಗುವುದು. ಮದ್ಯದಂಗಡಿಯ ಪರವಾನಗಿಯನ್ನು ರದ್ದುಗೊಳಿಸಲಾಗುವುದು, ದಂಡ ವಿಧಿಸಲಾಗುವುದು ಮತ್ತು ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಿದ ಉದ್ಯೋಗಿಯನ್ನು ವಜಾಗೊಳಿಸಲಾಗುವುದು. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ