ಇಡೀ ವಿಶ್ವದಲ್ಲೇ ಅತಿದೊಡ್ಡ ಅಭಿಯಾನ.. ಭಾರತದ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ಕೆ ಜೈ ಹೋ ಎಂದ UNICEF

| Updated By: ganapathi bhat

Updated on: Jan 16, 2021 | 1:20 PM

ಭಾರತ ಕೊರೊನಾ ಲಸಿಕೆ ವಿತರಣೆಯನ್ನು ಆರಂಭಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ. ಕೋಲ್ಡ್​ಚೈನ್​ ಸ್ಟೋರೇಜ್​, ಸಾಗಾಟ ವ್ಯವಸ್ಥೆ, ತಂತ್ರಜ್ಞಾನ ನಿರ್ವಹಣೆ ಎಲ್ಲವೂ ವ್ಯವಸ್ಥಿತವಾಗಿದೆ.

ಇಡೀ ವಿಶ್ವದಲ್ಲೇ ಅತಿದೊಡ್ಡ ಅಭಿಯಾನ.. ಭಾರತದ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ಕೆ ಜೈ ಹೋ ಎಂದ UNICEF
ಕೊರೊನಾ ಲಸಿಕೆ ಹಂಚಿಕೆಗೆ ಸಿದ್ಧತೆ
Follow us on

ದೆಹಲಿ: ಭಾರತದಲ್ಲಿ ಆರಂಭವಾಗಿರುವ ಕೊರೊನಾ ಲಸಿಕೆ ಹಂಚಿಕೆ ಕಾರ್ಯವನ್ನು ವಿಶ್ವದ ಅತಿದೊಡ್ಡ ಲಸಿಕಾ ವಿತರಣೆ ಅಭಿಯಾನ ಎಂದು ವಿಶ್ವಸಂಸ್ಥೆ ಮಕ್ಕಳ ನಿಧಿಯ (UNICEF) ಭಾರತೀಯ ಪ್ರತಿನಿಧಿಗಳು ಬಣ್ಣಿಸಿದ್ದಾರೆ. ಈ ಕುರಿತು UNICEF India ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಭಾರತ ಕೊರೊನಾ ಲಸಿಕೆ ವಿತರಣೆಯನ್ನು ಆರಂಭಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ. ಕೋಲ್ಡ್​ಚೈನ್​ ಸ್ಟೋರೇಜ್​, ಸಾಗಾಟ ವ್ಯವಸ್ಥೆ, ತಂತ್ರಜ್ಞಾನ ನಿರ್ವಹಣೆ ಎಲ್ಲವೂ ವ್ಯವಸ್ಥಿತವಾಗಿದೆ. ಕೊರೊನಾ ಲಸಿಕೆ ನೀಡುವ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. ಎಲ್ಲರೂ ಅತ್ಯದ್ಭುತವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.


ಕೊರೊನಾ ಲಸಿಕೆ ಬರ್ತಿದ್ದಂಗೆ ಕಾಲರ್​ ಟ್ಯೂನ್​ ಬದಲಾಯ್ತು!

Published On - 1:05 pm, Sat, 16 January 21