ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ: ಬಿಜೆಪಿ-ಟಿಎಂಸಿ ಪಕ್ಷಗಳಲ್ಲಿನ ಆಂತರಿಕ ಬೆಳವಣಿಗೆಗಳು ಹೀಗಿವೆ
ಮೂಲತಃ ಮಾಡೆಲ್ ಆಗಿದ್ದ ಟಿಎಂಸಿ ಸಂಸದೆ ನುಸ್ರಜ್ ಜಹಾನ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅವರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದ ನೆಟ್ಟಿಗರು, ಟಿಎಂಸಿ ಸಂಸದೆಯ ಕಾಲೆಳೆದಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ಬಿರುಸಾಗುತ್ತ ಸಾಗಿದೆ. ಟಿಎಂಸಿಯಿಂದ ಬಿಜೆಪಿಗೆ, ಬಿಜೆಪಿಯಿಂದ ಟಿಎಂಸಿಗೆ ಪಕ್ಷಾಂತರವಾಗಲಿದ್ದಾರೆ ಎಂಬ ಸುದ್ದಿಗಳೇ ಪ್ರತಿನಿತ್ಯ ಹೊರಬರುತ್ತಿವೆ. ಪಕ್ಷಾಂತರವೇನಾದರೂ ಆಗಿದ್ದೇ ಆದಲ್ಲಿ, ಪಕ್ಷಕ್ಕೆ ಆಘಾತವಾಗುವುದೆಂಬುದನ್ನು ಅರಿತ ಟಿಎಂಸಿ ತನ್ನ ಸಂಸದ ಸತಾಬ್ದಿ ರಾಯ್ರನ್ನು ಪಕ್ಷದಲ್ಲೇ ಇರಿಸಿಕೊಳ್ಳುವ ಯತ್ನಕ್ಕೆ ಕೈಹಾಕಿ ಬಹುತೇಕ ಸಫಲವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರನ್ನು ಭೇಟಿಯಾದ ನಂತರ ಹೇಳಿಕೆ ನೀಡಿರುವ ಸತಾಬ್ದಿ ರಾಯ್, ಪಕ್ಷ ತೊರೆಯುವುದಿಲ್ಲ ಎಂದು ಖಾತ್ರಿಪಡಿಸಿದ್ದಾರೆ.
ಟಿಎಂಸಿ ಸಂಸದೆ ನುಸ್ರಜ್ ಜಹಾನ್ ಹೊಸ ಫೋಟೋಶೂಟ್ ಮೂಲತಃ ಮಾಡೆಲ್ ಆಗಿದ್ದ ಟಿಎಂಸಿ ಸಂಸದೆ ನುಸ್ರಜ್ ಜಹಾನ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅವರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದ ನೆಟ್ಟಿಗರು, ಟಿಎಂಸಿ ಸಂಸದೆಯ ಕಾಲೆಳೆದಿದ್ದಾರೆ. ‘ನೀವು ಸಂಸದೆಯಾಗಿದ್ದುಕೊಂಡು ಇಂತಹ ಫೋಟೋಶೂಟ್ ಮಾಡಿಸಬಾರದಿತ್ತು ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದರೂ, ಅವರ ಚಿತ್ರಗಳಿಗೆ ಪ್ರಶಂಸೆ ವ್ಯಕ್ತಪಡಿಸಿದವರ ಸಂಖ್ಯೆಯೂ ಕಡಿಮೆಯಿಲ್ಲ.
ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿರಲು ವಿಶೇಷ ತಂಡ ರಚಿಸಿದ ಟಿಎಂಸಿ ಜನವರಿ 30 ರಂದು ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳದ ಮತುವಾ ದಲಿತ ಜನಾಂಗ ವಾಸವಿರುವ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತುವಾ ಜನಾಂಗದ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ, ಇದೇ ಜನಾಂಗದ ಓರ್ವ ಸಂಸದ ಬಿಜೆಪಿಯಿಂದ ಆಯ್ಕೆಯಾಗಿದ್ದ. ಬಿಜೆಪಿ ಈ ಬಾರಿಯೂ ಮತುವಾ ಮತಗಳ ಮೇಲೆ ಕಣ್ಣಿಟ್ಟುರುವುದನ್ನು ಅರಿತ ಟಿಎಂಸಿ, ಬಿಜೆಪಿಗಿಂತ ಮೊದಲೇ ವಿಶೇಷ ತಂಡವೊಂದನ್ನು ಕಳಿಸಲು ನಿರ್ಧರಿಸಿದೆ. ಜನವರಿ 22 ರಂದು ಈ ಪ್ರದೇಶದಲ್ಲಿ ಪ್ರಚಾರ ಮೆರವಣಿಗೆ ನಡೆಸಲು ನಿರ್ಧರಿಸಿದೆ.
ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್ ಸೇರಲಿ: ಅಧೀರ್ ಚೌಧರಿ ಆಹ್ವಾನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೊಲಿಸಲು ಮಮತಾ ಬ್ಯಾನರ್ಜಿ ಕಾಂಗ್ರೆಸ್ ಸೇರಲಿ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಆಹ್ವಾನ ನೀಡಿದ್ದಾರೆ. ದೇಶದಲ್ಲಿ ಬಿಜೆಪಿಯನ್ನು ಮಣಿಸಲು ಇತರ ಪಕ್ಷಗಳು ಒಗ್ಗೂಡಬೇಕಿದ್ದು, ಸಿಎಂ ಮಮತಾ ಬ್ಯಾನರ್ಜಿ ಟಿಎಂಸಿ ತೊರೆದು ಕಾಂಗ್ರೆಸ್ ಸೇರುವ ಮೂಲಕ ಬಿಜೆಪಿ ವಿರುದ್ಧ ಸ್ಪರ್ಧಿಸಿದರೆ ಬಿಜೆಪಿಯನ್ನು ಸೋಲಿಸಬಹುದು ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ದೇಶದ ಜನರ ಕುತೂಹಲದ ಕಣ್ಣುಗಳು ಪಶ್ಚಿಮ ಬಂಗಾಳದತ್ತ ಹರಿಯುತ್ತಲೇ ಇರುವುದು ಖಚಿತವಾಗಿದೆ.

ಸಂಸದೆ ನುಸ್ರತ್ ಜಹಾನ್ ಹೊಸ ಫೋಟೋಶೂಟ್
2021 ವಿಧಾನಸಭೆ ಚುನಾವಣೆವರೆಗೆ ಪ್ರತಿ ತಿಂಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್ ಶಾ
Published On - 2:33 pm, Sat, 16 January 21