5 ಪುರಾತತ್ವ ಸ್ಥಳಗಳ ಅಭಿವೃದ್ಧಿ, ಮ್ಯೂಸಿಯಂ ಸ್ಥಾಪನೆ: ವಿತ್ತ ಸಚಿವೆ ನಿರ್ಮಲಾ

|

Updated on: Feb 01, 2020 | 12:52 PM

ದೆಹಲಿ: ಕೇಂದ್ರ ಬಜೆಟ್​ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಐತಿಹಾಸಿಕ ಸ್ಥಳಗಳಾಗಿ ದೇಶದ ವಿವಿಧೆಡೆ ಐದು ಪುರಾತತ್ವ ಸ್ಥಳಗಳನ್ನು ಅಭಿವೃದ್ಧಿ ಮಾಡಲಾಗುವುದು. ಹರಿಯಾಣ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್ ಹಾಗೂ ತಮಿಳುನಾಡಿನ 5 ಪುರಾತತ್ವ ಸ್ಥಳಗಳನ್ನು ಐತಿಹಾಸಿಕ ಸ್ಥಳಗಳಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಸಿಂಧೂ ನಾಗರಿಕತೆ ಮ್ಯೂಸಿಯಂ, ಆದಿವಾಸಿ ಮ್ಯೂಸಿಯಂ: ಹರಿಯಾಣದ ರಾಖಿಗರಿ, ಉತ್ತರಪ್ರದೇಶದ ಹಸ್ತಿನಾಪುರ, ಅಸ್ಸಾಂನ ಶಿವಸಾಗರ್, ಗುಜರಾತ್​ನ ದೊಲವೀರ ಹಾಗೂ ತಮಿಳುನಾಡಿನ ಆದಿಚನಲ್ಲೂರ ಸ್ಥಳಗಳನ್ನು […]

5 ಪುರಾತತ್ವ ಸ್ಥಳಗಳ ಅಭಿವೃದ್ಧಿ, ಮ್ಯೂಸಿಯಂ ಸ್ಥಾಪನೆ: ವಿತ್ತ ಸಚಿವೆ ನಿರ್ಮಲಾ
Follow us on

ದೆಹಲಿ: ಕೇಂದ್ರ ಬಜೆಟ್​ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಐತಿಹಾಸಿಕ ಸ್ಥಳಗಳಾಗಿ ದೇಶದ ವಿವಿಧೆಡೆ ಐದು ಪುರಾತತ್ವ ಸ್ಥಳಗಳನ್ನು ಅಭಿವೃದ್ಧಿ ಮಾಡಲಾಗುವುದು. ಹರಿಯಾಣ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್ ಹಾಗೂ ತಮಿಳುನಾಡಿನ 5 ಪುರಾತತ್ವ ಸ್ಥಳಗಳನ್ನು ಐತಿಹಾಸಿಕ ಸ್ಥಳಗಳಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಸಿಂಧೂ ನಾಗರಿಕತೆ ಮ್ಯೂಸಿಯಂ, ಆದಿವಾಸಿ ಮ್ಯೂಸಿಯಂ:
ಹರಿಯಾಣದ ರಾಖಿಗರಿ, ಉತ್ತರಪ್ರದೇಶದ ಹಸ್ತಿನಾಪುರ, ಅಸ್ಸಾಂನ ಶಿವಸಾಗರ್, ಗುಜರಾತ್​ನ ದೊಲವೀರ ಹಾಗೂ ತಮಿಳುನಾಡಿನ ಆದಿಚನಲ್ಲೂರ ಸ್ಥಳಗಳನ್ನು ಅಭಿವೃದ್ಧಿ ಮಾಡಲಾಗುವುದು. ಅಲ್ಲದೆ ಅಹಮದಾಬಾದ್‌ನಲ್ಲಿ ಸಿಂಧೂ ನಾಗರಿಕತೆ ಸಾರುವ ಮ್ಯೂಸಿಯಂ ಸ್ಥಾಪನೆ ಮತ್ತು ಜಾರ್ಖಂಡ್‌ನಲ್ಲಿ ಆದಿವಾಸಿ ಮ್ಯೂಸಿಯಂ ಸ್ಥಾಪನೆ ಮಾಡಲಾಗುತ್ತೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Published On - 12:41 pm, Sat, 1 February 20