ಕುಸುಮ್: ಅನ್ನದಾತ ಇನ್ನು ವಿದ್ಯುತ್​ದಾತನೂ ಆಗುತ್ತಾನೆ! ಇದು ನಿರ್ಮಲಾ ಕೊಡುಗೆ

ದೆಹಲಿ: ಲೋಕಸಭೆಯಲ್ಲಿ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅನ್ನದಾತರಿಗೆ ಬಂಪರ್ ಯೋಜನೆ ಘೋಷಿಸಿದ್ದಾರೆ. ಅನ್ನದಾತರನ್ನು ವಿದ್ಯುತ್ ಉತ್ಪಾದಕರನ್ನಾಗಿ ಮಾಡುತ್ತೇವೆ. ರೈತರಿಗೆ ಕುಸುಮ್ ಯೋಜನೆಯಡಿ ಸೋಲಾರ್‌ ಪಂಪ್‌ ನೀಡುತ್ತೇವೆ. ವಿದ್ಯುತ್ ಉತ್ಪಾದನೆಗಾಗಿ ರೈತರ ಬರಡು ಭೂಮಿ ಬಳಕೆ ಮಾಡಲಾಗುವುದು. ಈ ಸಂಬಂಧ 20 ಲಕ್ಷ ರೈತರಿಗೆ ಸೋಲಾರ್ ಪಂಪ್​ಸೆಟ್​ ವಿತರಿಸಿ ರೈತರ ಪಂಪ್​ಸೆಟ್​ ಅನ್ನು ಸೌರ ವಿದ್ಯುತ್ ಜೊತೆ ಜೋಡನೆ ಮಾಡಲಾಗುವುದು ಎಂದು ಹೇಳಿದರು. ರೈತರ ಆದಾಯ ದ್ವಿಗುಣಕ್ಕೆ ಕ್ರಮ: […]

ಕುಸುಮ್: ಅನ್ನದಾತ ಇನ್ನು ವಿದ್ಯುತ್​ದಾತನೂ ಆಗುತ್ತಾನೆ! ಇದು ನಿರ್ಮಲಾ ಕೊಡುಗೆ
Follow us
ಸಾಧು ಶ್ರೀನಾಥ್​
|

Updated on:Feb 01, 2020 | 12:05 PM

ದೆಹಲಿ: ಲೋಕಸಭೆಯಲ್ಲಿ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅನ್ನದಾತರಿಗೆ ಬಂಪರ್ ಯೋಜನೆ ಘೋಷಿಸಿದ್ದಾರೆ. ಅನ್ನದಾತರನ್ನು ವಿದ್ಯುತ್ ಉತ್ಪಾದಕರನ್ನಾಗಿ ಮಾಡುತ್ತೇವೆ. ರೈತರಿಗೆ ಕುಸುಮ್ ಯೋಜನೆಯಡಿ ಸೋಲಾರ್‌ ಪಂಪ್‌ ನೀಡುತ್ತೇವೆ. ವಿದ್ಯುತ್ ಉತ್ಪಾದನೆಗಾಗಿ ರೈತರ ಬರಡು ಭೂಮಿ ಬಳಕೆ ಮಾಡಲಾಗುವುದು. ಈ ಸಂಬಂಧ 20 ಲಕ್ಷ ರೈತರಿಗೆ ಸೋಲಾರ್ ಪಂಪ್​ಸೆಟ್​ ವಿತರಿಸಿ ರೈತರ ಪಂಪ್​ಸೆಟ್​ ಅನ್ನು ಸೌರ ವಿದ್ಯುತ್ ಜೊತೆ ಜೋಡನೆ ಮಾಡಲಾಗುವುದು ಎಂದು ಹೇಳಿದರು.

ರೈತರ ಆದಾಯ ದ್ವಿಗುಣಕ್ಕೆ ಕ್ರಮ: ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆ ಮುಖಾಂತರ ದೇಶದ ರೈತರ ಆದಾಯ ದ್ವಿಗುಣಗೊಳಿಸುವತ್ತ ಸರ್ಕಾರದ ಚಿತ್ತ ಹರಿಸಲಾಗುವುದು. ರೈತರ ಆದಾಯವನ್ನು ಹೆಚ್ಚಿಸಲು ಕೃಷಿ ಸಿಂಚಾಯಿ ಯೋಜನೆ ಜಾರಿ ಮಾಡಲಾಗುವುದು. ಅನ್ನದಾತರಿಗಾಗಿ ಕೃಷಿ ಮಾರುಕಟ್ಟೆ ಉದಾರೀಕರಣಗೊಳಿಸುವ ಅಗತ್ಯವಿದೆ. ಕೃಷಿ ವಲಯಕ್ಕೆ 16 ಅಂಶಗಳ ಯೋಜನೆ ಜಾರಿಗೆ ತರಲಾಗುವುದು. ಫಸಲ್‌ ಭಿಮಾ ಯೋಜನೆಯಿಂದ 6.11 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದರು.

ಪಂಚಾಯತ್ ವ್ಯಾಪ್ತಿಯಲ್ಲಿ ಶೀತಲಗೃಹ ಸ್ಥಾಪನೆ: 100 ಜಿಲ್ಲೆಗಳಲ್ಲಿ ಜಲ ಸಂವರ್ಧನೆಗೆ ಯೋಜನೆ ಜಾರಿಗೆ ತರಲಾಗುವುದು. ಪಶುಪಾಲನೆ, ಮೀನುಗಾರಿಕೆಯತ್ತ ಗಮನಹರಿಸುವ ಅಗತ್ಯವಿದೆ. 162 ಬಿಲಿಯನ್ ಮೆಟ್ರಿಕ್ ಟನ್ ಆಹಾರ ಸಂಸ್ಕರಣೆ ಗುರಿ ಹೊಂದಿದ್ದೇವೆ. ರೈತರಿಗಾಗಿ ಧಾನ್ಯ ಲಕ್ಷ್ಮೀ ಯೋಜನೆ, ಮುದ್ರಾ, ನಬಾರ್ಡ್‌ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುವುದು. ಕಿಸಾನ್ ರೈಲು, ಕೃಷಿ ಉಡಾನ್ ಯೋಜನೆ ಜಾರಿ ಗೊಳಿಸುತ್ತೇವೆ. ಹಾಲು, ಮಾಂಸ, ಮೀನು ಸಾಗಾಟಕ್ಕೆ ಕಿಸಾನ್‌ ರೈಲು ಸಹಕಾರಿಯಾಗಲಿದೆ. 313 ಮಿಲಿಯನ್ ಮೆಟ್ರಿಕ್ ಟನ್ ತೋಟಗಾರಿಕಾ ಉತ್ಪನ್ನ ಬೆಳೆಯುತ್ತಿದ್ದೇವೆ. ಪಂಚಾಯತ್ ವ್ಯಾಪ್ತಿಯಲ್ಲಿ ಶೀತಲಗೃಹ ಸ್ಥಾಪನೆ ಮಾಡಲಾಗುವುದು. ಕೃಷಿ ಸಾಲಕ್ಕಾಗಿ ನಬಾರ್ಡ್‌ಗೆ 15 ಲಕ್ಷ ಕೋಟಿ ರೂಪಾಯಿ ನೀಡಲಾಗುವುದು. ದೇಶಾದ್ಯಂತ 500 ಮೀನು ಉತ್ಪಾದಕರ ಸಂಘ ಸ್ಥಾಪನೆ ಮಾಡಲಾಗುವುದು. 2023ರವರೆಗೆ 2 ಲಕ್ಷ ಟನ್ ಮೀನು ಉತ್ಪಾದನೆ ಗುರಿ ಹೊಂದಿದ್ದೇವೆ. ಕೃಷಿ, ಗ್ರಾಮೀಣಾಭಿವೃದ್ಧಿಗೆ 2.83 ಲಕ್ಷ ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.

Published On - 11:42 am, Sat, 1 February 20