Mahakumbh Mela 2025: ತ್ರಿವೇಣಿ ಸಂಗಮದಲ್ಲಿ ಪತ್ನಿಯೊಂದಿಗೆ ಪುಣ್ಯಸ್ನಾನ ಮಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ನಿತ್ಯವೂ ಎಲ್ಲಾ ಪಕ್ಷಗಳ ಸಾಕಷ್ಟು ಪ್ರತಿನಿಧಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಹಲವು ಪುಣ್ಯ ನೀರಿನಲ್ಲಿ ಮಿಂದೆದ್ದಿದ್ದಾರೆ. ಹಾಗೆಯೇ ಭಾನುವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಕುಟುಂಬದವರೊಂದಿಗೆ ತೆರಳಿ ಪುಣ್ಯಸ್ನಾನ ಮಾಡಿದರು. ಬಳಿಕ ಏನೇನು ಮಾತನಾಡಿದ್ದಾರೆ ಇಲ್ಲಿದೆ ಮಾಹಿತಿ.

Mahakumbh Mela 2025: ತ್ರಿವೇಣಿ ಸಂಗಮದಲ್ಲಿ ಪತ್ನಿಯೊಂದಿಗೆ ಪುಣ್ಯಸ್ನಾನ  ಮಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್

Updated on: Feb 17, 2025 | 9:25 AM

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ ತಮ್ಮ ಕುಟುಂಬದೊಂದಿಗೆ ಮಹಾ ಕುಂಭ ಮೇಳಕ್ಕೆ ಆಗಮಿಸಿದರು. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸಂತರು, ಮಹಾತ್ಮರು ಮತ್ತು ಭಕ್ತರ ಸಮುದ್ರವೇ ಸೇರುವ ಸ್ಥಳ. ಇದು ಧರ್ಮ ಮತ್ತು ನಂಬಿಕೆಯ ಅತ್ಯಂತ ದೊಡ್ಡ ಹಬ್ಬ ಎಂದು ಬಣ್ಣಿಸಿದ್ದಾರೆ.

ಮಹಾ ಕುಂಭದಲ್ಲಿ ಭಾಗವಹಿಸುವುದು ತಮ್ಮ ಸೌಭಾಗ್ಯ, ಮಹಾ ಕುಂಭದಲ್ಲಿ ಭಾಗವಹಿಸುವ ಸೌಭಾಗ್ಯ ನಮಗೆ ಸಿಕ್ಕಿದೆ ನಾವು ಇಲ್ಲಿರುವುದಕ್ಕೆ ತುಂಬಾ ಸಂತೋಷವಾಗಿದ್ದೇವೆ. ಮಹಾಕುಂಭವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಬದಲಾಗಿ ಭಾರತದ ಆಧ್ಯಾತ್ಮಿಕ ಶಕ್ತಿ ಮತ್ತು ಏಕತೆಯ ಅತಿ ದೊಡ್ಡ ಸಂಗಮವಾಗಿದೆ.

ಈ ಕಾರ್ಯಕ್ರಮವು ಭಕ್ತರಿಗೆ ನಂಬಿಕೆಯ ಕೇಂದ್ರ ಮಾತ್ರವಲ್ಲದೆ, ಭಾರತೀಯ ಸಂಸ್ಕೃತಿ ಮತ್ತು ಜೀವನ ತತ್ವಶಾಸ್ತ್ರವನ್ನು ವಿಶ್ವ ವೇದಿಕೆಯಲ್ಲಿ ಸ್ಥಾಪಿಸುವ ಅವಕಾಶವೂ ಆಗಿದೆ. ಮಹಾ ಕುಂಭಮೇಳದ ಪ್ರತಿ ಕ್ಷಣವೂ ಸನಾತನ ಸಂಪ್ರದಾಯಗಳ ಭವ್ಯತೆಯನ್ನು ಪ್ರತಿಬಿಂಬಿಸುತ್ತದೆ, ಇದು ಭವಿಷ್ಯದ ಪೀಳಿಗೆಗೆ ಸ್ಪೂರ್ತಿದಾಯಕವಾಗಿರುತ್ತದೆ ಎಂದು ಅವರು ಹೇಳಿದರು.

ನಂತರ, ಧರ್ಮೇಂದ್ರ ಪ್ರಧಾನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, ಮಹಾ ಕುಂಭವು ಸನಾತನ ನಾಗರಿಕತೆ, ಸಂಸ್ಕೃತಿ, ತತ್ವಶಾಸ್ತ್ರ ಮತ್ತು ನಮ್ಮ ಶಾಶ್ವತ ಸಂಪ್ರದಾಯಗಳ ಜೀವಂತಿಕೆಯ ಪುರಾವೆಯಾಗಿದೆ.

ಮತ್ತಷ್ಟು ಓದಿ: Video: ಮಹಾಕುಂಭ ಮೇಳ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಪ್ರಧಾನಿ ಮೋದಿ

ಗಂಗಾ, ಯಮುನಾ ಮತ್ತು ಸರಸ್ವತಿ ಮಾತೆಯರ ಪವಿತ್ರ ನದಿಗಳ ಸಂಗಮದಲ್ಲಿ ನನ್ನ ಕುಟುಂಬದೊಂದಿಗೆ ಪುಣ್ಯ ಸ್ನಾನ ಮಾಡುತ್ತಿರುವುದು ನನ್ನ ಸೌಭಾಗ್ಯ. ಏಕತೆಯ ಮಹಾಕುಂಭದಲ್ಲಿ ಅಮೃತ ಸ್ನಾನ ಮಾಡುವುದು ನನಗೆ ಮರೆಯಲಾಗದ ಅನುಭವ. ಗಂಗಾ ಮಾತೆ ಎಲ್ಲರಿಗೂ ಆಶೀರ್ವಾದ ಮಾಡಲಿ, ಇದು ನನ್ನ ಹಾರೈಕೆ ಎಂದಿದ್ದಾರೆ.

ಈ ಕಾರ್ಯಕ್ರಮವು ಭಕ್ತರಿಗೆ ನಂಬಿಕೆಯ ಕೇಂದ್ರ ಮಾತ್ರವಲ್ಲದೆ, ಭಾರತೀಯ ಸಂಸ್ಕೃತಿ ಮತ್ತು ಜೀವನ ತತ್ವಶಾಸ್ತ್ರವನ್ನು ವಿಶ್ವ ವೇದಿಕೆಯಲ್ಲಿ ಸ್ಥಾಪಿಸುವ ಅವಕಾಶವಾಗಿದೆ. ಮಹಾ ಕುಂಭಮೇಳದ ಪ್ರತಿ ಕ್ಷಣವೂ ಸನಾತನ ಸಂಪ್ರದಾಯಗಳ ಭವ್ಯತೆಯನ್ನು ಪ್ರತಿಬಿಂಬಿಸುತ್ತದೆ, ಇದು ಭವಿಷ್ಯದ ಪೀಳಿಗೆಗೆ ಸ್ಪೂರ್ತಿದಾಯಕವಾಗಿರುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ,  ಕೈಮಗ್ಗ ಮತ್ತು ಜವಳಿ ರಾಜ್ಯ ಸಚಿವ ರಾಕೇಶ್ ಸಚನ್, ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಸಾರಿಗೆ ರಾಜ್ಯ ಸಚಿವ ದಯಾಶಂಕರ್ ಸಿಂಗ್ ಕೂಡ ಸಂಗಮದಲ್ಲಿ ಸ್ನಾನ ಮಾಡಿದರು. ಮಂತ್ರಿಗಳು ಗಂಗಾ ಮಾತೆಯನ್ನು ಪೂಜಿಸುವ ಮೂಲಕ ರಾಷ್ಟ್ರ ಮತ್ತು ಜನರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ