Prashasan Gaon Ki Aur: ಕೇಂದ್ರ ಸರ್ಕಾರದ ಉತ್ತಮ ಆಡಳಿತ ಸಪ್ತಾಹಕ್ಕೆ ಇಂದು ದೇಶಾದ್ಯಂತ ಚಾಲನೆ; ಏನಿದು ಅಭಿಯಾನ? ಇಲ್ಲಿದೆ ಮಾಹಿತಿ

| Updated By: Lakshmi Hegde

Updated on: Dec 20, 2021 | 8:08 AM

Good Governance: ಉತ್ತಮ ಆಡಳಿತ ಸಪ್ತಾಹದ ಥೀಮ್​ ಪ್ರಶಾಸನ್​ ಗಾಂವ್​ ಕೀ ಓರ್(ಗ್ರಾಮಾಡಳಿತದ ಕಡೆಗೆ)​​ ಎಂದಾಗಿದೆ.  ಇಂದಿನಿಂದ ಪ್ರಾರಂಭವಾಗುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

Prashasan Gaon Ki Aur: ಕೇಂದ್ರ ಸರ್ಕಾರದ ಉತ್ತಮ ಆಡಳಿತ ಸಪ್ತಾಹಕ್ಕೆ ಇಂದು ದೇಶಾದ್ಯಂತ ಚಾಲನೆ; ಏನಿದು ಅಭಿಯಾನ? ಇಲ್ಲಿದೆ ಮಾಹಿತಿ
ನರೇಂದ್ರ ಮೋದಿ
Follow us on

ದೆಹಲಿ: ಬಿಜೆಪಿ ರಾಷ್ಟ್ರಾದ್ಯಂತ ಇಂದಿನಿಂದ ಏಳುದಿನಗಳ ಕಾಲ ಉತ್ತಮ ಆಡಳಿತ (Good Governance) ವಾರವನ್ನು ಆಚರಿಸಲಿದೆ. ಇಂದು ದೇಶದ ಎಲ್ಲ ಜಿಲ್ಲೆಗಳು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಪ್ತಾಹ ಪ್ರಾರಂಭವಾಗಲಿದ್ದು, ಇದು ಸಾರ್ವಜನಿಕರ ಕುಂದುಕೊರತೆ ಪರಿಹಾರ ಮಾಡಿ, ಉತ್ತಮ ಸೇವೆ ನೀಡುವ ಅಭಿಯಾನವಾಗಿದೆ.  ಅಂದಹಾಗೆ ಇದು ಆಜಾದಿ ಕಾ ಅಮೃತಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳುತ್ತಿರುವ ಸಪ್ತಾಹವಾಗಿದ್ದು, ಡಿಸೆಂಬರ್​ 25ರವರೆಗೆ ಇರಲಿದೆ. ಈ ಅವಧಿಯಲ್ಲಿ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದಿಂದ ಹಲವು ಕಾರ್ಯಕ್ರಮಗಳು ನಡೆಯಲಿವೆ. 

ಈ ಉತ್ತಮ ಆಡಳಿತ ಸಪ್ತಾಹದ ಥೀಮ್​ ಪ್ರಶಾಸನ್​ ಗಾಂವ್​ ಕೀ ಓರ್(ಗ್ರಾಮಾಡಳಿತದ ಕಡೆಗೆ)​​ ಎಂದಾಗಿದೆ.  ಇಂದಿನಿಂದ ಪ್ರಾರಂಭವಾಗುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಸಂದರ್ಭದಲ್ಲಿ ಸರ್ವತೋಮುಖ ಅಭಿವೃದ್ಧಿ, ಸರ್ವಜನಾಂಗ ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತದತ್ತ ಕ್ಷಿಪ್ರವಾಗಿ ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಇಂದು ದೆಹಲಿಯಲ್ಲಿ ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸಿಬ್ಬಂದಿ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್​ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಎರಡು ವರ್ಷಗಳ ಸಾಧನೆ ಮತ್ತು ಉತ್ತಮ ಆಡಳಿತ ಸಪ್ತಾಹದ ಪೋರ್ಟಲ್​​ನ್ನು ಇಂದು ಅವರು ಬಿಡುಗಡೆ ಮಾಡುವರು. ಹಾಗೇ, ಪ್ರಶಾಸನ್​ ಗಾಂವ್​ ಕೀ ಓರ್ ಸಂಬಂಧಿತ ಸಿನಿಮಾವನ್ನು ಇಂದು ಬಿಡುಗಡೆ ಮಾಡಲಾಗುವುದು. ಹಾಗೇ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಉತ್ತಮ ಆಡಳಿತದ ಮೌಲ್ಯಮಾಪನವನ್ನೂ ಬಿಡುಗಡೆ ಮಾಡಲಾಗುವುದು. ಒಂದು ವಾರದ ಕಾರ್ಯಕ್ರಮದ ಅವಧಿಯಲ್ಲಿ 700ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಸಂಬಂಧ ಮಾರ್ಗಸೂಚಿಯನ್ನು ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ, ಧಾರವಾಡ ಕೃಷಿ ವಿವಿ ಮಹಿಳೆಯರನ್ನ ಸಶಕ್ತರನ್ನಾಗಿಸಿದ್ದು ಹೇಗೆ?