ಕೊವಿಡ್ ಲಸಿಕೆಯ ಮುಂಜಾಗರೂಕತೆ ಡೋಸ್‌ ಪಡೆಯಲು ಅರ್ಹ ಹಿರಿಯ ನಾಗರಿಕರಿಗೆ ಸಂದೇಶ ಕಳಿಸಲಿದೆ ಕೇಂದ್ರ

| Updated By: ರಶ್ಮಿ ಕಲ್ಲಕಟ್ಟ

Updated on: Dec 31, 2021 | 10:45 AM

ಕೊವಿಡ್-19ನ ಮುಂಜಾಗರೂಕತೆ ಲಸಿಕೆ ತೆಗೆದುಕೊಳ್ಳುವುದನ್ನು ನೆನಪಿಸಲು ಅರ್ಹ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ಸಂದೇಶ (SMS) ಕಳುಹಿಸಲಿದೆ.

ಕೊವಿಡ್ ಲಸಿಕೆಯ ಮುಂಜಾಗರೂಕತೆ ಡೋಸ್‌ ಪಡೆಯಲು ಅರ್ಹ ಹಿರಿಯ ನಾಗರಿಕರಿಗೆ ಸಂದೇಶ ಕಳಿಸಲಿದೆ ಕೇಂದ್ರ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಜನವರಿ 10 ರಿಂದ ಪ್ರಾರಂಭವಾಗುವ ಕೊವಿಡ್-19ನ (Covid 19) ಮುಂಜಾಗರೂಕತೆ ಲಸಿಕೆ ಡೋಸ್ (precautionary dose) ತೆಗೆದುಕೊಳ್ಳುವುದನ್ನು ನೆನಪಿಸಲು ಅರ್ಹ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ಸಂದೇಶ (SMS) ಕಳುಹಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಗುರುವಾರ ತಿಳಿಸಿದೆ. ಹೊಸ ಒಮಿಕ್ರಾನ್ (omicron) ರೂಪಾಂತರದ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿರುವುದರಿಂದ ದೇಶವು ದೈನಂದಿನ ಕೊವಿಡ್ ಸೋಂಕುಗಳಲ್ಲಿ ತೀವ್ರ ಹೆಚ್ಚಳವನ್ನು ಎದುರಿಸುತ್ತಿರುವ ಮಧ್ಯೆ ಇದು ಬಂದಿದೆ. ಕೊವಿಡ್-19 ಲಸಿಕೆಯ ಮುಂಜಾಗರೂಕತೆ ಡೋಸ್ ಪ್ರಾಥಮಿಕವಾಗಿ ಸೋಂಕು, ಆಸ್ಪತ್ರೆಗೆ ದಾಖಲು ಮತ್ತು ಸಾವಿನ ತೀವ್ರತೆಯನ್ನು ತಗ್ಗಿಸಲು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು(Narendra Modi) ಡಿಸೆಂಬರ್ 25 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಒಮಿಕ್ರಾನ್ ಉಲ್ಬಣದ ಹಿನ್ನೆಲೆಯಲ್ಲಿ ಮಕ್ಕಳಿಗೆ ಲಸಿಕೆ ಮತ್ತು ವಯಸ್ಕರಿಗೆ ಬೂಸ್ಟರ್ ಡೋಸ್‌ಗಳ ಮುಂದಿನ ಹಂತಗಳನ್ನು ಘೋಷಿಸಿದ್ದರು.

“ಜನವರಿ 10 ರಿಂದ ಭಾರತವು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ‘ಮುಂಜಾಗರೂಕತೆ’ ಲಸಿಕೆ ಡೋಸ್ ನೀಡಲು ಪ್ರಾರಂಭಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಕೇಂದ್ರದ ಪ್ರಕಾರ, ದೇಶದ ವಯಸ್ಕ ಜನಸಂಖ್ಯೆಯ ಸರಿಸುಮಾರು 90 ಪ್ರತಿಶತದಷ್ಟು ಜನರು ಕೊವಿಡ್19 ವಿರುದ್ಧ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.

“ಭಾರತದ ವಯಸ್ಕ ಜನಸಂಖ್ಯೆಯ ಸರಿಸುಮಾರು 90 ಪ್ರತಿಶತದಷ್ಟು ಜನರು ಕೊವಿಡ್-19 ವಿರುದ್ಧ ಮೊದಲ ಡೋಸ್‌ ಲಸಿಕೆ ಹಾಕಿದ್ದಾರೆ. ಸರಾಸರಿಯಾಗಿ, ಭಾರತವು ಕಳೆದ ವಾರ ದಿನಕ್ಕೆ 8,000 ಕ್ಕಿಂತ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ಒಟ್ಟಾರೆ ಪ್ರಕರಣದ ಧನಾತ್ಮಕತೆಯ ಪ್ರಮಾಣವು 0.92 ಶೇಕಡಾ. ಡಿಸೆಂಬರ್ 26 ರಿಂದ ನಂತರ, ದೇಶವು ಪ್ರತಿದಿನ 10,000 ಪ್ರಕರಣಗಳನ್ನು ವರದಿ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘8 ಜಿಲ್ಲೆಗಳಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇ 10 ಕ್ಕಿಂತ ಹೆಚ್ಚು’
ಮಿಜೋರಾಂನ ಆರು ಜಿಲ್ಲೆಗಳು, ಅರುಣಾಚಲ ಪ್ರದೇಶದ ಒಂದು ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಸಾಪ್ತಾಹಿಕ ಕೊವಿಡ್ ಪಾಸಿಟಿವಿಟಿ ದರವು ಶೇಕಡಾ 10 ಕ್ಕಿಂತ ಹೆಚ್ಚು ಎಂದು ಅಗರ್ವಾಲ್ ಹೇಳಿದರು.

“ದೇಶದ 14 ಜಿಲ್ಲೆಗಳಲ್ಲಿ ಸಾಪ್ತಾಹಿಕ ಕೇಸ್ ಪಾಸಿಟಿವಿಟಿ ದರವು ಶೇಕಡಾ 5-10 ರ ನಡುವೆ ಇದೆ. ಭಾರತದಲ್ಲಿ ಕೊರೊನಾವೈರಸ್‌ನ ಒಮಿಕ್ರಾನ್ ರೂಪಾಂತರದ 961 ಪ್ರಕರಣಗಳಿವೆ, ಅದರಲ್ಲಿ 320 ರೋಗಿಗಳು ಚೇತರಿಸಿಕೊಂಡಿದ್ದಾರೆ” ಎಂದು ಅವರು ಹೇಳಿದರು.

ಇದನ್ನೂ  ಓದಿ: ಒಮಿಕ್ರಾನ್​ ಒಂದು ಪ್ರಾಕೃತಿಕ ಲಸಿಕೆ, ಇದು ಕೊವಿಡ್​ 19ನ ಅಂತಿಮ ಹಂತ: ಬೂಸ್ಟರ್​ ಡೋಸ್​ ಬೇಡವೆಂದ ಡಾ. ಅಮಿತಾವ್​ ಬ್ಯಾನರ್ಜಿ

Published On - 10:35 am, Fri, 31 December 21