ಸ್ವದೇಶಿ ಮಂತ್ರ ಜಪಿಸಿದ್ದ ಕೇಂದ್ರ ಯೂಟರ್ನ್, ವಿದೇಶಿ ಉತ್ಪನ್ನ ಮಾರಾಟ ನಿರ್ಬಂಧ ವಾಪಸ್!

ದೆಹಲಿ: ಕೊರೊನಾ ಬಿಕ್ಕಟ್ಟು ಭಾರತವನ್ನು ನಲುಗಿಸಿದೆ. ಲಾಕ್​ಡೌನ್​ನಿಂದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅದೆಷ್ಟೋ ಜನರು ಕೆಲಸವಿಲ್ಲದೆ ಬೀದಿಗೆ ಬಂದಿದ್ದಾರೆ. ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ್ ಅಭಿಯಾನ ಆರಂಭಿಸಿದ್ರು. ಸ್ವದೇಶಿ ಮಂತ್ರ ಜಪಿಸಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ಆತುರದ ನಿರ್ಧಾರದಿಂದ ಎಡವಟ್ಟು ಮಾಡ್ಕೊಂಡಿದೆ. ವಿದೇಶಿ ವಸ್ತುಗಳಿಗೆ ಗುಡ್​ ಬೈ ಹೇಳಿ ಯೂಟರ್ನ್ ಹೊಡೆದಿದೆ. ವಿದೇಶಿ ಉತ್ಪನ್ನ ಮಾರಾಟ ನಿರ್ಬಂಧ ಹಿಂಪಡೆದ ಗೃಹ ಇಲಾಖೆ..! ಯೆಸ್.. ದೇಶದಾದ್ಯಂತ ಅರೆಸೇನಾ ಪಡೆ ಕ್ಯಾಂಟೀನ್‌ಗಳಲ್ಲಿ ವಿದೇಶಿ […]

ಸ್ವದೇಶಿ ಮಂತ್ರ ಜಪಿಸಿದ್ದ ಕೇಂದ್ರ ಯೂಟರ್ನ್, ವಿದೇಶಿ ಉತ್ಪನ್ನ ಮಾರಾಟ ನಿರ್ಬಂಧ ವಾಪಸ್!
Follow us
ಸಾಧು ಶ್ರೀನಾಥ್​
| Updated By:

Updated on:Jun 02, 2020 | 10:02 AM

ದೆಹಲಿ: ಕೊರೊನಾ ಬಿಕ್ಕಟ್ಟು ಭಾರತವನ್ನು ನಲುಗಿಸಿದೆ. ಲಾಕ್​ಡೌನ್​ನಿಂದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅದೆಷ್ಟೋ ಜನರು ಕೆಲಸವಿಲ್ಲದೆ ಬೀದಿಗೆ ಬಂದಿದ್ದಾರೆ. ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ್ ಅಭಿಯಾನ ಆರಂಭಿಸಿದ್ರು. ಸ್ವದೇಶಿ ಮಂತ್ರ ಜಪಿಸಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ಆತುರದ ನಿರ್ಧಾರದಿಂದ ಎಡವಟ್ಟು ಮಾಡ್ಕೊಂಡಿದೆ. ವಿದೇಶಿ ವಸ್ತುಗಳಿಗೆ ಗುಡ್​ ಬೈ ಹೇಳಿ ಯೂಟರ್ನ್ ಹೊಡೆದಿದೆ.

ವಿದೇಶಿ ಉತ್ಪನ್ನ ಮಾರಾಟ ನಿರ್ಬಂಧ ಹಿಂಪಡೆದ ಗೃಹ ಇಲಾಖೆ..! ಯೆಸ್.. ದೇಶದಾದ್ಯಂತ ಅರೆಸೇನಾ ಪಡೆ ಕ್ಯಾಂಟೀನ್‌ಗಳಲ್ಲಿ ವಿದೇಶಿ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರ ಗೃಹ ಸಚಿವಾಲಯ ಗೇಟ್​​​ಪಾಸ್ ನೀಡಿತ್ತು. ಸಾವಿರಕ್ಕೂ ಹೆಚ್ಚು ವಿದೇಶಿ ಉತ್ಪನ್ನಗಳ ಮಾರಾಟಕ್ಕೆ ಬ್ರೇಕ್ ಹಾಕಿ ಕೇವಲ ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೆ ಜೈ ಎಂದಿತ್ತು. ಆದ್ರೀಗ ದಿಢೀರ್ ಯೂಟರ್ನ್​ ಹೊಡೆದಿರೋ ಕೇಂದ್ರ ಸರ್ಕಾರ ಆದೇಶ ಮಾಡಿದಷ್ಟೇ ವೇಗದಲ್ಲಿ ಅದನ್ನು ವಾಪಸ್ ಪಡೆದಿದೆ. ಈ ಬಗ್ಗೆ ಶೀಘ್ರದಲ್ಲೇ ಪರಿಷ್ಕೃತ ಆದೇಶ ಹೊರಡಿಸೋದಾಗಿ ಮೋದಿ ಸರ್ಕಾರ ಹೇಳಿದೆ.

ಶೀಘ್ರದಲ್ಲೇ ಪರಿಷ್ಕೃತ ಪಟ್ಟಿ ಬಿಡುಗಡೆಯ ಸಬೂಬು..! ಇನ್ನು, ಕೇಂದ್ರ ಗೃಹ ಸಚಿವಾಲಯ ನಿನ್ನೆ ಹೊರಡಿಸಲಾಗಿದ್ದ ಆದೇಶದಂತೆ ಚಾಕೊಲೆಟ್‌, ಎಲೆಕ್ಟ್ರಾನಿಕ್‌ ಸಾಧನಗಳು, ಬ್ರ್ಯಾಂಡೆಡ್‌ ಚಪ್ಪಲಿ, ಶೂಗಳು, ಮೈಕ್ರೊ ಓವನ್‌ಗಳು ಸೇರಿ ಆಮದು ಮಾಡಿಕೊಳ್ಳೋ 1,000ಕ್ಕೂ ಹೆಚ್ಚು ವಸ್ತುಗಳು ಸಿಎಪಿಎಫ್‌ ಕ್ಯಾಂಟೀನ್​ಗಳಲ್ಲಿ ಲಭ್ಯವಿರುವುದಿಲ್ಲ ಅಂತ ಪಟ್ಟಿ ರಿಲೀಸ್ ಮಾಡಿದ್ರು. ಅಲ್ಲದೇ ದೇಶದಾದ್ಯಂತ ಕೇವಲ ಸ್ವದೇಶಿ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಅಂತ ಹೇಳಲಾಗಿತ್ತು.

ಆದ್ರೀಗ ಈ ನಿರ್ಧಾರದಿಂದ ದಿಢೀರ್ ಉಲ್ಟಾ ಹೊಡೆದಿರೋ ಕೇಂದ್ರ ಸರ್ಕಾರ ಸದ್ಯದ್ಲಲೇ ಪರಿಷ್ಕೃತ ಪಟ್ಟಿ ರಿಲೀಸ್ ಮಾಡ್ತೀವಿ ಎಂದಿದೆ. ಕೇಂದ್ರದ ಈ ಎಡವಟ್ಟು ನಿರ್ಧಾರ ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಒಮ್ಮೆ ಮಾಡಿದ ಆದೇಶ ಮತ್ತೆ ವಾಪಾಸ್ ಪಡೆದಿದ್ದೇಕೆ? ವಿದೇಶಿ ಕಂಪನಿಗಳ ಒತ್ತಡ ಏನಾದ್ರೂ ಬಂತಾ ಅನ್ನೋ ಪ್ರಶ್ನೆಗಳು ಸುಳಿದಾಡ್ತಿದೆ.

ಸಿಆರ್‌ಪಿಎಫ್‌, ಬಿಎಸ್‌ಎಫ್‌, ಐಟಿಬಿಪಿ, ಸಿಐಎಸ್‌ಎಫ್‌, ಎಸ್‌ಎಸ್‌ಬಿ, ಎನ್‌ಎಸ್‌ಜಿ ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರೋ ಕುಟುಂಬದ ಸದಸ್ಯರಿಗೆ ಕ್ಯಾಂಟೀನ್ ಸೇವೆ ಲಭ್ಯವಿದೆ. ಕ್ಯಾಂಟೀನ್​ಗಳಲ್ಲಿ ವಾರ್ಷಿಕ 2,800 ಕೋಟಿ ವಹಿವಾಟು ನಡೆಯಲಿದೆ. ಇಲ್ಲಿ ವಿದೇಶಿ ಉತ್ಪನ್ನಗಳಿಗೆ ಬ್ರೇಕ್ ಹಾಕಿ ಸ್ವದೇಶಿ ಮಂತ್ರ ಜಪಿಸೋಕೆ ಹೋಗಿ ಯೂಟರ್ನ್ ಹೊಡೆದಿದೆ. ಆದ್ರೂ ಇನ್ನೆರಡು ದಿನಗಳಲ್ಲಿ ಪರಿಷ್ಕೃತ ಪಟ್ಟಿ ರಿಲೀಸ್ ಆಗೋ ಸಾಧ್ಯತೆ ಇದೆ. ಆ ಪಟ್ಟಿಯಲ್ಲಿ ವಿದೇಶಿ ಕಂಪನಿಗಳು ಉತ್ಪನ್ನಗಳು ಇರುತ್ತೋ..? ಇಲ್ವೋ ಅನ್ನೋದು ಕುತೂಹಲ ಮೂಡಿಸಿದೆ.

Published On - 9:35 am, Tue, 2 June 20

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು