ಪ್ರಧಾನಿ ಮೋದಿ ಘೋಷಿಸಿದರು ಹೊಸ 5 ‘I’ ಫಾರ್ಮುಲಾ

ದೆಹಲಿ: ಸಿಐಐ 125 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾರ್ಷಿಕ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ್ದಾರೆ. 125 ವರ್ಷ ಸಂಘಟನೆ ನಡೆಸುವುದು ಸುಲಭದ ಮಾತಲ್ಲ. ಕೊರೊನಾ ವಿರುದ್ಧ ಹೋರಾಡಲು ಕ್ರಮ ಕೈಗೊಳ್ಳಬೇಕು. ಭಾರತ ಪ್ರತಿದಿನ 3 ಲಕ್ಷ ಪಿಪಿಇ ಕಿಟ್‌ ಉತ್ಪಾದಿಸುತ್ತಿದೆ. ಜತೆಗೆ ದೇಶದ ಅರ್ಥವ್ಯವಸ್ಥೆಯನ್ನೂ ಬಲಿಷ್ಠಪಡಿಸಬೇಕು. ಎಲ್ಲ ಸಂಕಷ್ಟಗಳಿಂದ ಹೊರಬರುವುದು ಮನುಷ್ಯನ ತಾಕತ್ತು. ಜೀವ ಉಳಿಸಿಕೊಳ್ಳುವುದರ ಜತೆ ಅರ್ಥವ್ಯವಸ್ಥೆ ಸುಧಾರಣೆ ಮಾಡಬೇಕಾಗಿದೆ. ದೇಶದ ಕ್ಷಮತೆಯ ಮೇಲೆ ಪೂರ್ಣ ವಿಶ್ವಾಸವಿದೆ ಎಂದರು. ಆತ್ಮನಿರ್ಭರ […]

ಪ್ರಧಾನಿ ಮೋದಿ ಘೋಷಿಸಿದರು ಹೊಸ 5 ‘I’ ಫಾರ್ಮುಲಾ
Follow us
ಸಾಧು ಶ್ರೀನಾಥ್​
| Updated By:

Updated on:Jun 02, 2020 | 12:15 PM

ದೆಹಲಿ: ಸಿಐಐ 125 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾರ್ಷಿಕ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ್ದಾರೆ.

125 ವರ್ಷ ಸಂಘಟನೆ ನಡೆಸುವುದು ಸುಲಭದ ಮಾತಲ್ಲ. ಕೊರೊನಾ ವಿರುದ್ಧ ಹೋರಾಡಲು ಕ್ರಮ ಕೈಗೊಳ್ಳಬೇಕು. ಭಾರತ ಪ್ರತಿದಿನ 3 ಲಕ್ಷ ಪಿಪಿಇ ಕಿಟ್‌ ಉತ್ಪಾದಿಸುತ್ತಿದೆ. ಜತೆಗೆ ದೇಶದ ಅರ್ಥವ್ಯವಸ್ಥೆಯನ್ನೂ ಬಲಿಷ್ಠಪಡಿಸಬೇಕು. ಎಲ್ಲ ಸಂಕಷ್ಟಗಳಿಂದ ಹೊರಬರುವುದು ಮನುಷ್ಯನ ತಾಕತ್ತು. ಜೀವ ಉಳಿಸಿಕೊಳ್ಳುವುದರ ಜತೆ ಅರ್ಥವ್ಯವಸ್ಥೆ ಸುಧಾರಣೆ ಮಾಡಬೇಕಾಗಿದೆ. ದೇಶದ ಕ್ಷಮತೆಯ ಮೇಲೆ ಪೂರ್ಣ ವಿಶ್ವಾಸವಿದೆ ಎಂದರು.

ಆತ್ಮನಿರ್ಭರ ಭಾರತಕ್ಕಾಗಿ 5 ‘I’ ಫಾರ್ಮುಲಾ: ಆತ್ಮನಿರ್ಭರ ಭಾರತಕ್ಕಾಗಿ 5 ‘I’ ಫಾರ್ಮುಲಾ. ಇನ್ಫ್ರಾ, ಇನ್‌ವೆಸ್ಟ್‌ಮೆಂಟ್, ಇನೋವೇಷನ್, ಇಂಟೆಂಟ್ ಸೇರಿದಂತೆ 5 ಫಾರ್ಮುಲಾ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುತ್ತಿದ್ದೇವೆ. ರೈತರು ತಾವು ಬಯಸಿದಲ್ಲಿ ಉತ್ಪನ್ನಗಳನ್ನ ಮಾರಬಹುದು. ಕಲ್ಲಿದ್ದಲು ಕ್ಷೇತ್ರದಲ್ಲಿ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ಕೊಡಲಾಗುತ್ತೆ.

ಕೊರೊನಾ ಸಂಕಷ್ಟದಲ್ಲೂ 150 ದೇಶಗಳಿಗೆ ಭಾರತ ನೆರವು: ದೇಶದ ಜಿಡಿಪಿಯಲ್ಲಿ ಎಂಎಸ್‌ಎಂಇ ಕೊಡುಗೆಯಿದೆ. MSMEಗೆ ಹೊಸ ವ್ಯಾಖ್ಯಾನವನ್ನು ನೀಡುತ್ತಿದ್ದೇವೆ. ವಿಶ್ವದಲ್ಲಿ ಈಗ ಭಾರತದ ಮೇಲಿನ ವಿಶ್ವಾಸ ಹೆಚ್ಚಿದೆ. ಕೊರೊನಾ ಸಂಕಷ್ಟದಲ್ಲೂ 150 ದೇಶಗಳಿಗೆ ಭಾರತದಿಂದ ವೈದ್ಯಕೀಯ ನೆರವು ನೀಡಿದೆ.

ಆನ್‌ಲೈನ್ ಈವೆಂಟ್‌ ಈಗ ಅವಶ್ಯಕವಾಗಿದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದ್ದೇವೆ. ಭಾರತದ ಉದ್ಯಮಿಗಳು, ರೈತರ ಮೇಲೆ ನಮಗೆ ವಿಶ್ವಾಸವಿದೆ. ಈಗ ಮುಂದೆ ಏನು ಮಾಡಬೇಕೆಂಬ ಸವಾಲಿದೆ. ಭಾರತದ ಅರ್ಥವ್ಯವಸ್ಥೆ ಮತ್ತೆ ಹಳಿಗೆ ಬರುವ ವಿಶ್ವಾಸವಿದೆ. ಜೂನ್ 8ರ ಬಳಿಕ ಮತ್ತಷ್ಟು ಕೆಲಸಗಳು ಆರಂಭವಾಗಲಿದೆ.

74 ಕೋಟಿ ಜನರಿಗೆ ಪಡಿತರವನ್ನು ನೀಡಿದ್ದೇವೆ. 8 ಕೋಟಿಗೂ ಹೆಚ್ಚು ಜನರಿಗೆ ಸಿಲಿಂಡರ್ ತಲುಪಿಸಿದ್ದೇವೆ. ಕೇಂದ್ರ ಸರ್ಕಾರ ದೇಶದ ಉದ್ಯಮಗಳ ಜತೆ ಇದೆ. ಭಾರತದ ಉದ್ಯಮಿಗಳು ವಿಶ್ವದ ಭರವಸೆ ಬಳಸಿಕೊಳ್ಳಬೇಕು. ಸಣ್ಣ ಉದ್ಯಮಗಳಿಗೂ ಹೆಚ್ಚಿನ ಅವಕಾಶ ಸಿಗಲಿದೆ.

ಮೇಕ್ ಇನ್ ಇಂಡಿಯಾ ಮೇಡ್ ಫಾರ್ ವರ್ಲ್ಡ್ ಆಗಲಿ: ಮೇಕ್‌ ಇನ್‌ ಇಂಡಿಯಾದಿಂದ ಉದ್ಯೋಗ ಸೃಷ್ಟಿಯಾಗಿದೆ. ಮೇಕ್ ಇನ್ ಇಂಡಿಯಾ ಮೇಡ್ ಫಾರ್ ವರ್ಲ್ಡ್ ಆಗಲಿ. ಆಮದು ಮೇಲಿನ ನಮ್ಮ ಅವಲಂಬನೆ ಕಡಿಮೆಗೆ ಪ್ರಯತ್ನ ಮಾಡುತ್ತೇವೆ. ಉದ್ಯಮಿಗಳು ದೇಶಕ್ಕೆ ಪ್ರೇರಣೆಯಾಗಲಿ.

Published On - 12:07 pm, Tue, 2 June 20