ವಿದ್ಯುತ್ ದರ ನಿಗದಿಯಲ್ಲಿ ಭಾರೀ ಬದಲಾವಣೆ! ಗ್ರಾಹಕ ಉಪಯೋಗಿ ಸುಧಾರಣೆಗಳು ಜಾರಿಗೆ
ದೆಹಲಿ: ದೇಶದಲ್ಲಿ ವಿದ್ಯುತ್ ದರ ನಿಗದಿ ನೀತಿಯಲ್ಲಿ ಬದಲಾವಣೆ ಸನ್ನಿಹಿತವಾಗಿದೆ. ಬಳಕೆಗೆ ತಕ್ಕಂತೆ ಮಾತ್ರ ವಿದ್ಯುತ್ ದರ ವಿಧಿಸಲು ಶಿಫಾರಸು ಮಾಡಲಾಗಿದೆ. ಇದುವರೆಗೂ ವಿದ್ಯುತ್ ಬಳಕೆಯ ಉದ್ದೇಶದ ಆಧಾರದ ಮೇಲೆ ವಿದ್ಯುತ್ ದರ ನಿಗದಿ ಆಗುತ್ತಿತ್ತು. ಗೃಹ ಬಳಕೆಗೆ ಕಡಿಮೆ ದರ, ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್ ದರ ವಿಧಿಸಲಾಗುತ್ತಿತ್ತು. ಲೋಡ್ ಶೆಡ್ಡಿಂಗ್ ಇರಲ್ಲ, 24/7 ವಿದ್ಯುತ್ ಪೂರೈಕೆ ಈ ನೀತಿಯನ್ನು ಕೈ ಬಿಟ್ಟು ವೋಲ್ಟೇಜ್ ಆಧಾರದ ಮೇಲೆ ದರ ನೀಡಬೇಕು ಎಂದು ರಾಷ್ಟ್ರೀಯ ವಿದ್ಯುತ್ ದರ ನೀತಿಗೆ […]
ದೆಹಲಿ: ದೇಶದಲ್ಲಿ ವಿದ್ಯುತ್ ದರ ನಿಗದಿ ನೀತಿಯಲ್ಲಿ ಬದಲಾವಣೆ ಸನ್ನಿಹಿತವಾಗಿದೆ. ಬಳಕೆಗೆ ತಕ್ಕಂತೆ ಮಾತ್ರ ವಿದ್ಯುತ್ ದರ ವಿಧಿಸಲು ಶಿಫಾರಸು ಮಾಡಲಾಗಿದೆ. ಇದುವರೆಗೂ ವಿದ್ಯುತ್ ಬಳಕೆಯ ಉದ್ದೇಶದ ಆಧಾರದ ಮೇಲೆ ವಿದ್ಯುತ್ ದರ ನಿಗದಿ ಆಗುತ್ತಿತ್ತು. ಗೃಹ ಬಳಕೆಗೆ ಕಡಿಮೆ ದರ, ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್ ದರ ವಿಧಿಸಲಾಗುತ್ತಿತ್ತು.
ಲೋಡ್ ಶೆಡ್ಡಿಂಗ್ ಇರಲ್ಲ, 24/7 ವಿದ್ಯುತ್ ಪೂರೈಕೆ ಈ ನೀತಿಯನ್ನು ಕೈ ಬಿಟ್ಟು ವೋಲ್ಟೇಜ್ ಆಧಾರದ ಮೇಲೆ ದರ ನೀಡಬೇಕು ಎಂದು ರಾಷ್ಟ್ರೀಯ ವಿದ್ಯುತ್ ದರ ನೀತಿಗೆ ತಿದ್ದುಪಡಿ ತರಲು ರಾಜನಾಥ್ ಸಿಂಗ್ ನೇತೃತ್ವದ ಗ್ರೂಪ್ ಆಫ್ ಮಿನಿಸ್ಟರ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಗ್ರಾಹಕ ಕೇಂದ್ರಿತ ಸುಧಾರಣೆಗೆ ಶಿಫಾರಸು ಮಾಡಲಾಗಿದೆ. ಪ್ರಸ್ತುತ ವಿದ್ಯುತ್ ಬಳಕೆಯಲ್ಲಿ 50-60 ಕೆಟಗರಿಗಳಿವೆ. ಆದರೆ ಇನ್ನು ಮುಂದೆ ವೋಲ್ಟೇಜ್ ಆಧಾರದ ಮೇಲೆ 6 ಕೆಟಗರಿ ಮಾಡಿ ಅದರಲ್ಲಿ ಗ್ರಾಹಕರು ಮಾತ್ರವೇ ಇರಬೇಕು. ಹೊಸ ರಾಷ್ಟ್ರೀಯ ವಿದ್ಯುತ್ ದರ ನೀತಿಯ ಪ್ರಕಾರ ಲೋಡ್ ಶೆಡ್ಡಿಂಗ್ ಇರಲ್ಲ. 24/7 ವಿದ್ಯುತ್ ಪೂರೈಕೆ ಮಾಡಲಾಗುತ್ತೆ.
ರೈತರ ಪಂಪ್ ಸೆಟ್ಗಳಿಗೆ ಸಬ್ಸಿಡಿ ವಿದ್ಯುತ್ ಸ್ಥಗಿತ ಗ್ರಾಹಕರು ಬಳಸುವ ವೋಲ್ಟೇಜ್ ಆಧಾರದ ಮೇಲೆ ದರ ಕೊಡಬೇಕು. ಲೋಡ್ ಶೆಡ್ಡಿಂಗ್ ಮಾಡಿದ್ರೆ ವಿದ್ಯುತ್ ಪೂರೈಕೆದಾರ ಕಂಪನಿ, ಎಸ್ಕಾಂಗಳಿಗೆ ದಂಡ ವಿಧಿಸಲಾಗುತ್ತದೆ. ಶೇ. 15ಕ್ಕಿಂತ ಹೆಚ್ಚಿನ ವಾಣಿಜ್ಯ ನಷ್ಟವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವಂತಿಲ್ಲ. ರೈತರ ಪಂಪ್ ಸೆಟ್ಗಳಿಗೆ ಸಬ್ಸಿಡಿ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗುತ್ತೆ.
ರೈತರಿಗೆ ವಿದ್ಯುತ್ ಸಬ್ಸಿಡಿ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಬೇಕು. ಈ ಹಣವನ್ನು ರೈತರು ವಿದ್ಯುತ್ ಬಳಕೆಗೆ ಪಾವತಿ ಮಾಡಬೇಕು. ಮುಂದಿನ ವಾರ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ರಾಷ್ಟ್ರೀಯ ವಿದ್ಯುತ್ ದರ ನೀತಿಯನ್ನು ಪ್ರಸ್ತಾಪಿಸಲಾಗುತ್ತೆ. ಶಿಫಾರಸು ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ.