AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಭಾವ ಆಗಿರುವುದು ಕೊವಿಡ್ 19 ಲಸಿಕೆಯಲ್ಲ..ನಿಮ್ಮಲ್ಲಿರುವ ಪ್ರಬುದ್ಧತೆ’-ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ ನೂತನ ಆರೋಗ್ಯ ಸಚಿವ

Covid 19 Vaccine: ಜನವರಿಯಿಂದ ದೇಶದಲ್ಲಿ ಕೊವಿಡ್ 19 ಲಸಿಕೆ ಅಭಿಯಾನ ಶುರುವಾಗಿದೆ. ಆರು ತಿಂಗಳಲ್ಲಿ ಒಟ್ಟು 47 ಕೋಟಿ ಜನರಿಗೆ ಕೊವಿಡ್​ 19 ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

‘ಅಭಾವ ಆಗಿರುವುದು ಕೊವಿಡ್ 19 ಲಸಿಕೆಯಲ್ಲ..ನಿಮ್ಮಲ್ಲಿರುವ ಪ್ರಬುದ್ಧತೆ’-ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ ನೂತನ ಆರೋಗ್ಯ ಸಚಿವ
ಮನ್​ಸುಖ್ ಮಾಂಡವಿಯಾ
TV9 Web
| Edited By: |

Updated on:Aug 01, 2021 | 6:57 PM

Share

ದೇಶದಲ್ಲಿ ಕೊರೊನಾ ಲಸಿಕೆ (Corona Vaccine) ಅಭಾವ ಆಗಿರುವ ಬಗ್ಗೆ ಕೇಂದ್ರ ಸರ್ಕಾರ (Union Government)ವನ್ನು ಟೀಕಿಸಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ ತಿರುಗೇಟು ನೀಡಿದ್ದಾರೆ. ಜುಲೈ ಒಂದೇ ತಿಂಗಳಲ್ಲಿ 13 ಕೋಟಿ ಡೋಸ್​​ಗಳಷ್ಟು ಕೊರೊನಾ ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ (Covid 19 Vaccine) ಅಭಿಯಾನದ ವೇಗ ಕಡಿಮೆಯಾಗಿಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ (Rahul Gandhi)ಯವರು, ಜುಲೈ ತಿಂಗಳೂ ಕಳೆಯಿತು. ಆದರೂ ದೇಶದಲ್ಲಿ ಕೊರೊನಾ ಲಸಿಕೆ ಅಭಾವದ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ ಎಂದಿದ್ದರು.

ರಾಹುಲ್ ಗಾಂಧಿಯವರ ವ್ಯಂಗ್ಯಕ್ಕೆ ತಿರುಗೇಟು ನೀಡಿದ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಜುಲೈ ತಿಂಗಳಲ್ಲಿ ಒಟ್ಟು 13 ಕೋಟಿ ಡೋಸ್​ಗಳಷ್ಟು ಕೊರೊನಾ ಲಸಿಕೆ ನೀಡಲಾಗಿದೆ. ಈ ತಿಂಗಳಲ್ಲಿ ಲಸಿಕಾ ಅಭಿಯಾನ ಇನ್ನಷ್ಟು ವೇಗಗೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜುಲೈ ತಿಂಗಳಲ್ಲಿ 13 ಕೋಟಿ ಡೋಸ್​ ಲಸಿಕೆ ಹಾಕಲಾಗಿದೆ. ಅದರಲ್ಲಿ ನೀವೂ ಒಬ್ಬರು ಎಂದು ನಾನು ಕೇಳಿದ್ದೇನೆ. ಲಸಿಕೆ ಅಭಿವೃದ್ಧಿಗೆ ಶ್ರಮಿಸಿದ ನಮ್ಮ ವಿಜ್ಞಾನಿಗಳ ಬಗ್ಗೆ ನೀವು ಒಂದೇಒಂದು ಶಬ್ದ ಒಳ್ಳೆಯ ಮಾತುಗಳನ್ನಾಡುತ್ತಿಲ್ಲ. ಸಾರ್ವಜನಿಕರ ಬಳಿ ಲಸಿಕೆ ಪಡೆಯುವಂತೆ ಮನವಿಯನ್ನೂ ಮಾಡುತ್ತಿಲ್ಲ. ಲಸಿಕೆ ವಿಚಾರದಲ್ಲೂ ರಾಜಕೀಯವನ್ನೇ ಮಾಡುತ್ತಿದ್ದೀರಿ. ನಿಜ ಹೇಳಬೇಕೆಂದರೆ ಅಭಾವ ಇರುವುದು ಕೊವಿಡ್​ 19 ಲಸಿಕೆಗೆ ಅಲ್ಲ. ನಿಮ್ಮಲ್ಲಿ ಪ್ರಬುದ್ಧತೆಗೆ ಕೊರತೆ ಇದೆ ಎಂದು ಮನ್​ಸುಖ್ ಮಾಂಡವಿಯಾ ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ್ದಾರೆ.

47 ಕೋಟಿ ಜನರಿಗೆ ಲಸಿಕೆ ಜನವರಿಯಿಂದ ದೇಶದಲ್ಲಿ ಕೊವಿಡ್ 19 ಲಸಿಕೆ ಅಭಿಯಾನ ಶುರುವಾಗಿದೆ. ಆರು ತಿಂಗಳಲ್ಲಿ ಒಟ್ಟು 47 ಕೋಟಿ ಜನರಿಗೆ ಕೊವಿಡ್​ 19 ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಅದರಲ್ಲೂ ಕಳೆದ 24ಗಂಟೆಯಲ್ಲಿ 60,15,842 ಡೋಸ್ ಲಸಿಕೆ ನೀಡಲಾಗಿದೆ. ಕೊವಿಡ್​ 19 ಲಸಿಕೆ ನೀಡುವ ವೇಗ ಜಾಸ್ತಿಯಾಗುತ್ತಿದೆ ಎಂದೂ ತಿಳಿಸಿದೆ.

ಇದನ್ನೂ ಓದಿ: CBSE 10th Result 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಆಗಸ್ಟ್​ 2ಕ್ಕೆ ಘೋಷಣೆ ಸಾಧ್ಯತೆ; ಇಲ್ಲಿದೆ ನೋಡಿ ಮಾಹಿತಿ

Union Health Minister slams Congress Leader Rahul Gandhi over vaccine shortage Tweet

Published On - 6:56 pm, Sun, 1 August 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್