ದೇಶದಲ್ಲಿ ಕೊರೊನಾ ಲಸಿಕೆ (Corona Vaccine) ಅಭಾವ ಆಗಿರುವ ಬಗ್ಗೆ ಕೇಂದ್ರ ಸರ್ಕಾರ (Union Government)ವನ್ನು ಟೀಕಿಸಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿರುಗೇಟು ನೀಡಿದ್ದಾರೆ. ಜುಲೈ ಒಂದೇ ತಿಂಗಳಲ್ಲಿ 13 ಕೋಟಿ ಡೋಸ್ಗಳಷ್ಟು ಕೊರೊನಾ ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ (Covid 19 Vaccine) ಅಭಿಯಾನದ ವೇಗ ಕಡಿಮೆಯಾಗಿಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ (Rahul Gandhi)ಯವರು, ಜುಲೈ ತಿಂಗಳೂ ಕಳೆಯಿತು. ಆದರೂ ದೇಶದಲ್ಲಿ ಕೊರೊನಾ ಲಸಿಕೆ ಅಭಾವದ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ ಎಂದಿದ್ದರು.
ರಾಹುಲ್ ಗಾಂಧಿಯವರ ವ್ಯಂಗ್ಯಕ್ಕೆ ತಿರುಗೇಟು ನೀಡಿದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಜುಲೈ ತಿಂಗಳಲ್ಲಿ ಒಟ್ಟು 13 ಕೋಟಿ ಡೋಸ್ಗಳಷ್ಟು ಕೊರೊನಾ ಲಸಿಕೆ ನೀಡಲಾಗಿದೆ. ಈ ತಿಂಗಳಲ್ಲಿ ಲಸಿಕಾ ಅಭಿಯಾನ ಇನ್ನಷ್ಟು ವೇಗಗೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜುಲೈ ತಿಂಗಳಲ್ಲಿ 13 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಅದರಲ್ಲಿ ನೀವೂ ಒಬ್ಬರು ಎಂದು ನಾನು ಕೇಳಿದ್ದೇನೆ. ಲಸಿಕೆ ಅಭಿವೃದ್ಧಿಗೆ ಶ್ರಮಿಸಿದ ನಮ್ಮ ವಿಜ್ಞಾನಿಗಳ ಬಗ್ಗೆ ನೀವು ಒಂದೇಒಂದು ಶಬ್ದ ಒಳ್ಳೆಯ ಮಾತುಗಳನ್ನಾಡುತ್ತಿಲ್ಲ. ಸಾರ್ವಜನಿಕರ ಬಳಿ ಲಸಿಕೆ ಪಡೆಯುವಂತೆ ಮನವಿಯನ್ನೂ ಮಾಡುತ್ತಿಲ್ಲ. ಲಸಿಕೆ ವಿಚಾರದಲ್ಲೂ ರಾಜಕೀಯವನ್ನೇ ಮಾಡುತ್ತಿದ್ದೀರಿ. ನಿಜ ಹೇಳಬೇಕೆಂದರೆ ಅಭಾವ ಇರುವುದು ಕೊವಿಡ್ 19 ಲಸಿಕೆಗೆ ಅಲ್ಲ. ನಿಮ್ಮಲ್ಲಿ ಪ್ರಬುದ್ಧತೆಗೆ ಕೊರತೆ ಇದೆ ಎಂದು ಮನ್ಸುಖ್ ಮಾಂಡವಿಯಾ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
47 ಕೋಟಿ ಜನರಿಗೆ ಲಸಿಕೆ
ಜನವರಿಯಿಂದ ದೇಶದಲ್ಲಿ ಕೊವಿಡ್ 19 ಲಸಿಕೆ ಅಭಿಯಾನ ಶುರುವಾಗಿದೆ. ಆರು ತಿಂಗಳಲ್ಲಿ ಒಟ್ಟು 47 ಕೋಟಿ ಜನರಿಗೆ ಕೊವಿಡ್ 19 ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಅದರಲ್ಲೂ ಕಳೆದ 24ಗಂಟೆಯಲ್ಲಿ 60,15,842 ಡೋಸ್ ಲಸಿಕೆ ನೀಡಲಾಗಿದೆ. ಕೊವಿಡ್ 19 ಲಸಿಕೆ ನೀಡುವ ವೇಗ ಜಾಸ್ತಿಯಾಗುತ್ತಿದೆ ಎಂದೂ ತಿಳಿಸಿದೆ.
ಇದನ್ನೂ ಓದಿ: CBSE 10th Result 2021: ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಆಗಸ್ಟ್ 2ಕ್ಕೆ ಘೋಷಣೆ ಸಾಧ್ಯತೆ; ಇಲ್ಲಿದೆ ನೋಡಿ ಮಾಹಿತಿ
Union Health Minister slams Congress Leader Rahul Gandhi over vaccine shortage Tweet
Published On - 6:56 pm, Sun, 1 August 21