ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 10ಕ್ಕೆ ನಾಲ್ಕನೇ ಹಂತದ ಮತದಾನ ನಡೆಯಲಿದ್ದು, ಹೌರಾ ಜಿಲ್ಲೆಯ ದೊಮಜೂರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಕ್ಷಾವಾಲಾನ ಮನೆಯಲ್ಲಿ ಊಟ ಮಾಡಿದ್ದಾರೆ. ದೊಮಜೂರ್ನಲ್ಲಿ ಬಿಜೆಪಿಯ ರಜಿಬ್ ಬ್ಯಾನರ್ಜಿ ಸ್ಪರ್ಧಿಸುತ್ತಿದ್ದು,ಬಿಜೆಪಿ ಭರ್ಜರಿ ಪ್ರಚಾರ ನಡೆಸಿದೆ. ರಜಿಬ್ ಅವರು ಬಂಗಾಳದ ಮಾಜಿ ಅರಣ್ಯ ಸಚಿವರಾಗಿದ್ದು ಕೆಲವು ತಿಂಗಳ ಹಿಂದೆಯಷ್ಟೇ ಟಿಎಂಸಿಯಿಂದ ಬಿಜೆಪಿಗೆ ಸೇರಿದ್ದರು. ನಾನು ಒಂದೇ ಒಂದು ಗ್ರಾಮ ಪಂಚಾಯತ್ ಗೆ ಮಾತ್ರ ಭೇಟಿ ನೀಡಿದ್ದೆ ಆದರೆ ಅಲ್ಲಿನ ಉತ್ಸಾಹ ನೋಡಿದರೆ ರಜಿಬ್ ಬ್ಯಾನರ್ಜಿ ಬಹುಮತದಿಂದ ಗೆಲ್ಲುವ ಲಕ್ಷಣಗಳು ಕಾಣುತ್ತಿದೆ. ಮಮತಾ ಬ್ಯಾನರ್ಜಿ ಅವರ ಒತ್ತಡ ಆಕೆಯ ಭಾಷಣ ಮತ್ತು ವರ್ತನೆಯಲ್ಲಿ ಕಾಣಿಸುತ್ತದೆ ಎಂದು ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅಮಿತ್ ಶಾ ಹೇಳಿದ್ದಾರೆ.
ನೆಲದಲ್ಲಿ ಕುಳಿತು ಊಟ ಮಾಡಿದ ಶಾ
ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಅಮಿತ್ ಶಾ ಬುಧವಾರ ಬಂಗಾಳದ ರಿಕ್ಷಾವಾಲಾನ ಮನೆಯಲ್ಲಿ ಮಧ್ಯಾಹ್ನದೂಟ ಮಾಡಿದ್ದಾರೆ. ನೆಲದಲ್ಲಿ ಕುಳಿತು ಪುಟ್ಟ ಮರದ ಮೇಜಿನಲ್ಲಿರಿಸಿದ ಅನ್ನ, ಬೇಳೆಸಾರು, ತರಕಾರಿಗಳಿರುವ ತಟ್ಟೆಯಿಂದ ಅಮಿತ್ ಶಾ ಊಟ ಮಾಡುತ್ತಿರುವ ದೃಶ್ಯವನ್ನು ಎಎನ್ಐ ಟ್ವೀಟ್ ಮಾಡಿದೆ.
Domjur: Union Home Minister and BJP leader Amit Shah has lunch at the residence of a rickshaw puller who is also a BJP supporter. Rajib Banerjee, party’s candidate from the constituency also present. #WestBengal pic.twitter.com/het96CYWnz
— ANI (@ANI) April 7, 2021
ಅಮಿತ್ ಶಾ ಮತ್ತು ಬ್ಯಾನರ್ಜಿ ಲಾರಿಯೊಂದರ ಮೇಲೆ ನಿಂತು ಮತದಾರರತ್ತ ಕೈ ಬೀಸುತ್ತಿದ್ದು, ಬಿಜೆಪಿ ಧ್ವಜಗಳನ್ನು ಹಿಡಿದು ಬೆಂಬಲಿಗರು ಹೆಜ್ಜೆ ಹಾಕಿದ್ದಾರೆ. ದಾರಿಯುದ್ದಕ್ಕೂ ನಾಯಕರಿಗೆ ಹೂವಿನ ಮಳೆ ಸುರಿಯಲಾಗಿತ್ತು.
I visited only one gram panchayat but with the enthusiasm I saw, I’m confident that Rajib Banerjee will win with majority. On 2nd May, BJP will form govt with over 200 seats. Mamata Banerjee’s frustration can be seen in her speeches & behaviour: HM & BJP leader Amit Shah pic.twitter.com/dC4VRZpWw5
— ANI (@ANI) April 7, 2021
2011ರಲ್ಲಿ ಮಮತಾ ಬ್ಯಾನರ್ಜಿ ಗೆಲುವಿಗೆ ಕಾರಣವಾದ ಸಿಂಗೂರ್ ಭೂಸ್ವಾಧೀನ ವಿರುದ್ಧ ಚಳವಳಿ ನಡೆದ ಸಿಂಗೂರ್ ನಲ್ಲಿಯೂ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ. ನಿನ್ನೆ ಪ್ರಧಾನಿ ಮೋದಿಯವರು ಇಲ್ಲಿಗೆ ಭೇಟಿ ನೀಡಿದ್ದರು. ಬಿಜೆಪಿ ಬಂಗಾಳದಲ್ಲಿ ಅಧಿಕಾರಕ್ಕೇರಿದರೆ ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
ನಾವು ಈ ಪ್ರದೇಶಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಈ ಪ್ರದೇಶದಲ್ಲಿ ಆಲೂಗಡ್ಡೆ ಕೃಷಿಗಾಗಿ 500 ಕೋಟಿ ಮಧ್ಯಪ್ರವೇಶಿಕೆ ನಿಧಿಯನ್ನುಘೋಷಿಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಮೂರನೇ ಹಂತ ಮುಕ್ತಾಯವಾಗಿದೆ.
ಇದನ್ನೂ ಓದಿ: West Bengal Elections 2021: ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ, ವಿವಿಪ್ಯಾಟ್ ಪತ್ತೆ; ಚುನಾವಣಾ ಅಧಿಕಾರಿ ಅಮಾನತು