Union Minister’s Brother Death: ಬಿಹಾರ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರ ಸಹೋದರ ಮೃತ; ವೈದ್ಯರ ನಿರ್ಲಕ್ಷ್ಯ ಆರೋಪ; ಇಬ್ಬರ ಅಮಾನತು

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 28, 2023 | 12:33 PM

Nirmal Choubey Death: ನಿರ್ಮಲ್ ಚೌಬೆ ದಾಖಲಾಗಿದ್ದ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರೇ ಇರಲಿಲ್ಲ. ಇದು ಅವರು ಸಾಯಲು ಕಾರಣ ಎಂಬುದು ಅವರ ಸಂಬಂಧಿಗಳ ಆರೋಪ. ಆಸ್ಪತ್ರೆಯ ಅಧಿಕಾರಿಗಳು ಹೇಳುವ ಪ್ರಕಾರ ನಿರ್ಮಲ್ ಚೌಬೆ ಅವರು ಹೃದಯಾಘಾತಕ್ಕೊಳಗಾಗಿ ಬಳಿಕ ಮೃತಪಟ್ಟಿದ್ದಾರೆ.

Union Ministers Brother Death: ಬಿಹಾರ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರ ಸಹೋದರ ಮೃತ; ವೈದ್ಯರ ನಿರ್ಲಕ್ಷ್ಯ ಆರೋಪ; ಇಬ್ಬರ ಅಮಾನತು
ಕೇಂದ್ರ ಸಚಿವ ಅಶ್ವಿನಿ ಚೌಬೆ
Image Credit source: HT
Follow us on

ಭಾಗಲ್ಪುರ್: ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಅಶ್ವಿನಿ ಚೌಬೆ (Ashwini Choubey) ಅವರ ಸಹೋದರ ನಿರ್ಮಲ್ ಚೌಬೆ (Nirnal Choubey) ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬಿಹಾರದ ಭಾಗಲ್ಪುರ್​ನ ಮಾಯಾಗಂಜ್ ಆಸ್ಪತ್ರೆಯಲ್ಲಿ ನಿರ್ಮಲ್ ಶುಕ್ರವಾರ ನಿಧನರಾಗಿದ್ದಾರೆ. ಇದು ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತ ಎಂದು ಮೃತ ನಿರ್ಮಲ್ ಚೌಬೆಯ ಸಂಬಂಧಿಗಳು ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಮಾಯಾಗಂಜ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.

ಆದರೆ, ನಿರ್ಮಲ್ ಚೌಬೆ ದಾಖಲಾಗಿದ್ದ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರೇ ಇರಲಿಲ್ಲ. ಇದು ಅವರು ಸಾಯಲು ಕಾರಣ ಎಂಬುದು ಅವರ ಸಂಬಂಧಿಗಳ ಆರೋಪ. “ಅವರಿಗೆ (ನಿರ್ಮಲ್ ಚೌಬೆ) ದೈಹಿಕ ಆಯಾಸವಾದ್ದರಿಂದ ಆಸ್ಪತ್ರೆಗೆ ಕರೆತಂದೆವು. ಅಲ್ಲಿ ವೈದ್ಯರೇ ಇರಲಿಲ್ಲ. ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರು ಇಲ್ಲಎಂದು ಚಂದನ್ ಎಂಬುವವರು ಹೇಳಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು ಹೇಳುವ ಪ್ರಕಾರ ನಿರ್ಮಲ್ ಚೌಬೆ ಅವರು ಹೃದಯಾಘಾತಕ್ಕೊಳಗಾಗಿ ಬಳಿಕ ಮೃತಪಟ್ಟಿದ್ದಾರೆ. “ರೋಗಿಯನ್ನು ಗಂಭೀರ ಸ್ಥಿತಿಯಲ್ಲಿದ್ದಾಗ ಕರೆತರಲಾಗಿದೆ. ಅವರಿಗೆ ಭಾರೀ ಹೃದಯಾಘಾತವಾಗಿದ್ದುದು ಕಂಡುಬಂತು. ಹಿರಿಯ ವೈದ್ಯರು ಅಗತ್ಯ ಔಷಧೋಪಚಾರ ಮಾಡಿದರು. ಬಳಿಕ ಅವರನ್ನು ಐಸಿಯುಗೆ ವರ್ಗಾಯಿಸಲಾಯಿತು. ಅಲ್ಲಿ ಯಾವ ವೈದ್ಯರೂ ಇರಲಿಲ್ಲ. ನಾನು ಈಗ ಇಬ್ಬರು ವೈದ್ಯರನ್ನು ಅಮಾನತುಗೊಳಿಸಿದ್ದೇನೆಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅಸೀಮ್ ದಾಸ್ ಹೇಳಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತ ಭಾಗಲ್ಪುರ್ ಸಿಟಿ ಡಿಎಸ್​ಪಿ ಅಜಯ್ ಕುಮಾರ್ ಚೌಧರ್ ಪ್ರತಿಕ್ರಿಯಿಸಿ, ಯಾರಾದರೂ ದೂರು ಕೊಟ್ಟರೆ ನಾವು ತನಿಖೆ ನಡೆಸುತ್ತೇವೆ. ಸಾವಿಗೆ ಕಾರಣವಾಗುವಂತೆ ಯಾರಾದರೂ ನಿರ್ಲಕ್ಷ್ಯ ತೋರಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೆಯೇ, ವೈದ್ಯರಿಗೆ ಬೆದರಿಕೆಯಾಗುವಂತೆ ಗಲಾಟೆ ನಡೆಸುವವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Published On - 12:33 pm, Sat, 28 January 23