ಜಮ್ಮು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯ ಫೋಟೊ ಹಂಚಿಕೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಕಮಾನು ನಿರ್ಮಾಣವು ಕಳೆದ ವರ್ಷ ಏಪ್ರಿಲ್‌ನಲ್ಲಿ ಪೂರ್ಣಗೊಂಡಿತು. ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (ಯುಎಸ್‌ಬಿಆರ್‌ಎಲ್) ಯೋಜನೆಯ ಭಾಗವಾಗಿ 1,486 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.

ಜಮ್ಮು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯ ಫೋಟೊ ಹಂಚಿಕೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಚೆನಾಬ್ ಸೇತುವೆ
Updated By: ರಶ್ಮಿ ಕಲ್ಲಕಟ್ಟ

Updated on: Feb 09, 2022 | 1:15 PM

ದೆಹಲಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಕೂ ಆ್ಯಪ್​​ನಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆೇ ಸೇತುವೆ ಚೆನಾಬ್ ಸೇತುವೆಯ (Chenab bridge)ಮೋಡಿಮಾಡುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. “ಮೋಡಗಳ ಮೇಲಿನ ವಿಶ್ವದ ಅತಿ ಎತ್ತರದ ಕಮಾನು ಚೆನಾಬ್ ಸೇತುವೆ” ಎಂದು ವೈಷ್ಣವ್ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಚಿತ್ರದಲ್ಲಿ, ಪರ್ವತಗಳ ಹಿನ್ನಲೆಯಲ್ಲಿ ಎತ್ತರವಾಗಿ ನಿಂತಿರುವಂತೆ ಸೇತುವೆಯು ಮೋಡಗಳ ಮೇಲೆ ಕಮಾನುಗಳಾಗಿ ಕಾಣುತ್ತದೆ. ಚೆನಾಬ್ ರೈಲು ಸೇತುವೆಯು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಬಕ್ಕಲ್ ಮತ್ತು ಕೌರಿ ನಡುವೆ ಇದೆ. ಇದು 1,315 ಮೀಟರ್ ಉದ್ದ ಮತ್ತು ನದಿಯಿಂದ 359 ಮೀಟರ್ ಎತ್ತರದಲ್ಲಿದೆ. ಇದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕೂಡ ಚೆನಾಬ್ ರೈಲು ಸೇತುವೆಯ ಚಿತ್ರಗಳನ್ನು ಕೂ ಆ್ಯಪ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. “ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿರುವ 1315 ಮೀ ಉದ್ದದ ಚೆನಾಬ್ ಸೇತುವೆಯ ಕಮಾನು ಎಷ್ಟು ಅದ್ಭುತವಾಗಿದೆ. ಸೇತುವೆಯು ನದಿಯ ತಳ ಮಟ್ಟದಿಂದ 359 ಮೀ ಎತ್ತರದಲ್ಲಿ ನಿಲ್ಲುತ್ತದೆ ಮತ್ತು ಇದು ಐಫೆಲ್ ಟವರ್‌ಗಿಂತ ಎತ್ತರವಾಗಿರುತ್ತದೆ. ಸೇತುವೆಯು ಕಾಶ್ಮೀರ ಕಣಿವೆಗೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಚೆನಾಬ್ ಸೇತುವೆಯ ಅತ್ಯಾಕರ್ಷಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟಿಜನ್‌ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬಪು “ವಾವ್… ವಾಸ್ತುಶಿಲ್ಪದ ಅದ್ಭುತ ಸಾಧನೆ” ಎಂದು ಹೇಳಿದರು.

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಕಮಾನು ನಿರ್ಮಾಣವು ಕಳೆದ ವರ್ಷ ಏಪ್ರಿಲ್‌ನಲ್ಲಿ ಪೂರ್ಣಗೊಂಡಿತು. ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (ಯುಎಸ್‌ಬಿಆರ್‌ಎಲ್) ಯೋಜನೆಯ ಭಾಗವಾಗಿ 1,486 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಸೇತುವೆಯು ಡಿಸೆಂಬರ್ 2022 ರಲ್ಲಿ ರೈಲು ಸಂಚಾರಕ್ಕೆ ತೆರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ನಮ್ಮನ್ನು ಟೀಕಿಸಿ ಪರವಾಗಿಲ್ಲ, ನಿಮ್ಮ ಕೆಲಸ ಏನೆಂದು ಮರೆಯಬೇಡಿ; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

Published On - 1:14 pm, Wed, 9 February 22