ಸೂಜಿ ಇಲ್ಲದೆ ನೀಡಬಹುದಾದ mRNA ಆಧಾರಿತ ಕೊವಿಡ್ ಬೂಸ್ಟರ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ

ಕೊವಿಡ್-19 ಲಸಿಕೆಗಳ ವೇಗವರ್ಧಿತ ಅಭಿವೃದ್ಧಿಗಾಗಿ ಸರ್ಕಾರದ ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ಅಡಿಯಲ್ಲಿ ಡಿಬಿಟಿ ಮತ್ತು ಬಿಐಆರ್​​ಎಸಿ ಜಾರಿಗೊಳಿಸಿದ ಮಿಷನ್ ಕೊವಿಡ್ ಸುರಕ್ಷಾ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಿದ ಐದನೇ ಲಸಿಕೆಯಾಗಿದೆ GEMCOVAC-OM.

ಸೂಜಿ ಇಲ್ಲದೆ ನೀಡಬಹುದಾದ mRNA ಆಧಾರಿತ ಕೊವಿಡ್ ಬೂಸ್ಟರ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ
ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 24, 2023 | 8:29 PM

ಒಮಿಕ್ರಾನ್ ವಿರುದ್ಧ ನಿರ್ದಿಷ್ಟ mRNA ಆಧಾರಿತ ಬೂಸ್ಟರ್ ಲಸಿಕೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಶನಿವಾರ ಬಿಡುಗಡೆ ಮಾಡಿದ್ದಾರೆ. GEMCOVAC-OM ಎಂಬ ಭಾರತದ ಮೊದಲ mRNA ಲಸಿಕೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆ (DBT) ಮತ್ತು ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಧನಸಹಾಯದೊಂದಿಗೆ ಜೆನೋವಾ ಸ್ಥಳೀಯ ಪ್ಲಾಟ್‌ಫಾರ್ಮ್ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಈ ಲಸಿಕೆ ತುರ್ತು ಬಳಕೆಯ ಅಧಿಕಾರಕ್ಕಾಗಿ (EUA) ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (DCGI) ಕಚೇರಿಯಿಂದ ಅನುಮೋದನೆ ಪಡೆಯಿತು.

ಕೊವಿಡ್-19 ಲಸಿಕೆಗಳ ವೇಗವರ್ಧಿತ ಅಭಿವೃದ್ಧಿಗಾಗಿ ಸರ್ಕಾರದ ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ಅಡಿಯಲ್ಲಿ ಡಿಬಿಟಿ ಮತ್ತು ಬಿಐಆರ್​​ಎಸಿ ಜಾರಿಗೊಳಿಸಿದ ಮಿಷನ್ ಕೊವಿಡ್ ಸುರಕ್ಷಾ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಿದ ಐದನೇ ಲಸಿಕೆಯಾಗಿದೆ GEMCOVAC-OM. ತುಲನಾತ್ಮಕವಾಗಿ ಕಡಿಮೆ ಸಮಯದಲ್ಲಿ ಇತರ ಲಸಿಕೆಗಳನ್ನು ತಯಾರಿಸಲು ಈ ಫ್ಯೂಚರ್ ರೆಡಿ ತಂತ್ರಜ್ಞಾನ ವೇದಿಕೆಯನ್ನು ಬಳಸಬಹುದು ಎಂದಿದ್ದಾರೆ ಸಿಂಗ್.

GEMCOVAC-OM ಒಂದು ಥರ್ಮೋಸ್ಟೆಬಲ್ ಲಸಿಕೆಯಾಗಿದ್ದು ಇತರ ಅನುಮೋದಿತ mRNA-ಆಧಾರಿತ ಲಸಿಕೆಗಳಿಗೆ ಬಳಸಲಾಗುವ ಅಲ್ಟ್ರಾ-ಕೋಲ್ಡ್ ಚೈನ್ ಮೂಲಸೌಕರ್ಯದ ಅಗತ್ಯವಿರುವುದಿಲ್ಲ.

ಈ ಕಂಡುಹಿಡಿಯುವಿಕೆ ನಮ್ಮ ದೇಶದ ಮೈಲಿಗಲ್ಲು. ಈ ಲಸಿಕೆಯನ್ನು ನಿಯೋಜಿಸಲು ಅಸ್ತಿತ್ವದಲ್ಲಿರುವ ಪೂರೈಕೆ ಸರಪಳಿ ಮೂಲಸೌಕರ್ಯವು ಸಾಕಾಗುತ್ತದೆ. ಇದರ ವಿಶಿಷ್ಟ ವೈಶಿಷ್ಟ್ಯವೆಂದರೆ ಈ ಲಸಿಕೆಯನ್ನು ಸೂಜಿ ಚುಚ್ಚುಮದ್ದು ಇಲ್ಲದೆ ನಿರ್ವಹಿಸಬಹುದು ಎಂದು ಸಿಂಗ್ ಹೇಳಿದ್ದಾರೆ.

ಸೂಜಿ-ಮುಕ್ತ ಇಂಜೆಕ್ಷನ್ ಡಿವೈಸ್ ಬಳಸಿಕೊಂಡು ಲಸಿಕೆಯನ್ನು ಇಂಟ್ರಾ ಡರ್ಮ್ (ಚರ್ಮದ ಒಳಗೆ) ನೀಡಲಾಗುತ್ತದೆ.ಇದು ಗಮನಾರ್ಹವಾಗಿ ಹೆಚ್ಚಿನ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ