ಗ್ವಾಲಿಯರ್: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia )ಒಂದು ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದ್ದಾರೆ. ತಾವು ಧರಿಸಿದ್ದ ಮಾಸ್ಕನ್ನೇ (Used Mask) ತೆಗೆದು ವ್ಯಕ್ತಿಯೊಬ್ಬರಿಗೆ ತೊಡಿಸಿದ ಸಿಂಧಿಯಾ ನಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಹೀಗೆ ಒಬ್ಬರು ಧರಿಸಿದ ಮಾಸ್ಕ್ನ್ನು ಇನ್ನೊಬ್ಬರಿಗೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಸಿಂಧಿಯಾ ತಾವು ತೊಟ್ಟ ಮಾಸ್ಕ್ನ್ನು ತೊಡಿಸಿದ್ದು ಇನ್ಯಾರಿಗೂ ಅಲ್ಲ, ಗ್ವಾಲಿಯರ್ (Gwalior) ನ ಮಾಜಿ ಸಂಸದ ಅನೂಪ್ ಮಿಶ್ರಾರಿಗೆ ಎಂದೂ ಟೈಮ್ಸ್ ನೌ ವರದಿ ಮಾಡಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಗುರುವಾ ಮುಂಜಾನೆ ಗ್ವಾಲಿಯರ್ನಲ್ಲಿರುವ ಮಾಂಡ್ರೆ ಮಾತಾ ದೇಗುಲಕ್ಕೆ ಭೇಟಿ ನೀಡಿದ್ದರು. ದೇಗುಲವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅನೂಪ್ ಮಿಶ್ರಾ ಮಾಸ್ಕ್ ಧರಿಸಿಲ್ಲ ಎಂಬುದನ್ನು ಗಮನಿಸಿದ ಕೇಂದ್ರ ಸಚಿವ, ತಾವು ಧರಿಸಿದ್ದ ಎರಡು ಮಾಸ್ಕ್ಗಳಲ್ಲಿ ಒಂದನ್ನು ತೆಗೆದು ಅವರಿಗೆ ತೊಡಿಸಿದ್ದಾರೆ. ಅದಾದ ಬಳಿಕ ದೇವಿಯ ದರ್ಶನ ಪಡೆದಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಒಂದು ಎನ್95 ಮಾಸ್ಕ್ ಧರಿಸಿದ್ದರು. ಅದರ ಮೇಲಿಂದ ಸರ್ಜಿಕಲ್ ಮಾಸ್ಕ್ ಹಾಕಿಕೊಂಡಿದ್ದರು. ಅರುಣ್ ಮಿಶ್ರಾ ಅವರಿಗೆ ತಾವು ಧರಿಸಿದ್ದ ಸರ್ಜಿಕಲ್ ಮಾಸ್ಕ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇನ್ನು ಜ್ಯೋತಿರಾದಿತ್ಯ ಸಿಂಧಿಯಾ ಮಾಂಡ್ರೆ ಮಾತಾ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಖೇದಾಪತಿ ಹನುಮಾನ್ ದೇಗುಲಕ್ಕೆ ತೆರಳಿ ಆಂಜನೇಯನ ಆಶೀರ್ವಾದ ಪಡೆದಿದ್ದಾರೆ. ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಗ್ವಾಲಿಯರ್ಗೆ ಭೇಟಿ ನೀಡಿರುವ ಅವರು ನಿನ್ನೆ (ಬುಧವಾರ) ರೋಡ್ ಶೋ ಕೂಡ ನಡೆಸಿ, ಸಾರ್ವಜನಿಕರೊಂದಿಗೆ ಬೆರೆತಿದ್ದರು.
ಇದೆಂತಾ ಸ್ವಚ್ಛತೆ?
ಕೊರೊನಾ ವಿರುದ್ಧ ಕಟ್ಟುನಿಟ್ಟಿನ ಸ್ವಚ್ಛತೆ ಕಾಪಾಡಬೇಕು ಎಂಬುದು ವೈದ್ಯಕೀಯ ಕ್ಷೇತ್ರದ ಸಲಹೆ. ಕೇಂದ್ರ ಸರ್ಕಾರವೂ ಕೂಡ ಇದನ್ನೇ ಒತ್ತಿ ಹೇಳುತ್ತಿದೆ. ಮಾಸ್ಕ್ ಧರಿಸುವುದೇ ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಿರಲಿ ಎಂದು. ಅಂಥದ್ದರಲ್ಲಿ ಹೀಗೆ ಒಬ್ಬರು ಬಳಸಿದ ಮಾಸ್ಕ್ನ್ನೇ ಇನ್ನೊಬ್ಬರು ಬಳಸುವುದು ಎಷ್ಟು ಸರಿ ಎಂದು ಈ ಘಟನೆಯ ವಿಡಿಯೋ ನೋಡಿದವರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯಿಂದ ಆರೋಪಿಗಳ ಗುರುತು ಪತ್ತೆಹಚ್ಚುವ ಕಾರ್ಯ
ಮಹಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು: ತನಿಖೆ ಆರಂಭಿಸಿದ ಸಿಬಿಐ
(Union minister Jyotiraditya Scindia gives his used mask to Former MP in Madhya Pradesh)
Published On - 4:36 pm, Thu, 23 September 21