ಮಹಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು: ತನಿಖೆ ಆರಂಭಿಸಿದ ಸಿಬಿಐ

ಪ್ರಯಾಗರಾಜ್ ನಗರದಲ್ಲಿರುವ ಬಾಗಂಬರಿ ಮಠದಲ್ಲಿ ಸಿಬಿಐ ತಂಡವು ಪರಿಶೀಲನೆ ನಡೆಸಿತು. ಬಾಗಂಬರಿ ಮಠದಲ್ಲಿ ನರೇಂದ್ರಗಿರಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮಹಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು: ತನಿಖೆ ಆರಂಭಿಸಿದ ಸಿಬಿಐ
ಅಖಾಡ ಪರಿಷತ್ ಅಧ್ಯಕ್ಷರಾಗಿದ್ದ ದಿವಂಗತ ನರೇಂದ್ರ ಗಿರಿ


ಲಖನೌ: ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ಹೊಣೆಯನ್ನು ಉತ್ತರ ಪ್ರದೇಶ ಸರ್ಕಾರವು ಬುಧವಾರ ಸಿಬಿಐಗೆ ಹಸ್ತಾಂತರಿಸಿದೆ. ಭಾರತದ ಸಾಧುಗಳ ಅತಿದೊಡ್ಡ ಸಂಘಟನೆಯ ಅಧ್ಯಕ್ಷರಾಗಿದ್ದ ನರೇಂದ್ರ ಗಿರಿ ಅವರ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಕಳೆದ ಸೋಮವಾರ ಪತ್ತೆಯಾಗಿತ್ತು. ಸಿಬಿಐ ತನಿಖೆಗೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದರು.

ಪ್ರಯಾಗರಾಜ್ ನಗರದಲ್ಲಿರುವ ಬಾಗಂಬರಿ ಮಠದಲ್ಲಿ ಸಿಬಿಐ ತಂಡವು ಗುರುವಾರ ಪರಿಶೀಲನೆ ನಡೆಸಿತು. ಬಾಗಂಬರಿ ಮಠದಲ್ಲಿ ನರೇಂದ್ರಗಿರಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸೂಚನೆಯ ಮೇರೆಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ಗೃಹ ಇಲಾಖೆಯು ಹಿಂದಿ ಭಾಷೆಯಲ್ಲಿ ಮಾಡಿರುವ ಟ್ವೀಟ್​ನಲ್ಲಿ ಈ ಮೊದಲು ತಿಳಿಸಿತ್ತು.

ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸರು ಮಂಗಳವಾರ 18 ಮಂದಿಯ ವಿಶೇಷ ತನಿಖಾ ದಳ (SIT) ರಚಿಸಿತ್ತು. ಪ್ರಕರಣದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ಓರ್ವ ಶಿಷ್ಯನನ್ನು ಹರಿದ್ವಾರದಲ್ಲಿ ಬಂಧಿಸಲಾಗಿದೆ. ನರೇಂದ್ರ ಗಿರಿ ಸಾವಿಗೆ ಸಂಬಂಧಿಸಿದ ಮರಣ ಪತ್ರವೊಂದು ಪತ್ತೆಯಾಗಿದ್ದು, ತನಿಖೆಗೆ ಮತ್ತೊಂದು ಆಯಾಮ ಒದಗಿಸಿತ್ತು. ಶಿಷ್ಯ ಆನಂದ ಗಿರಿ ನನ್ನ ವಿರುದ್ಧ ಚಿತಾವಣೆ ಮಾಡುತ್ತಿದ್ದು, ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ನರೇಂದ್ರ ಗಿರಿ ಪತ್ರದಲ್ಲಿ ಹೇಳಿದ್ದರು.

ಮರಣೋತ್ತರ ಪರೀಕ್ಷೆಯನ್ನು ಐವರು ವೈದ್ಯರ ತಂಡವು ಬುಧವಾರ ನಡೆಸಿತು. ಅಟಾಪ್ಸಿಯ ನಂತರ ಪಾರ್ಥಿವ ಶರೀರವನ್ನು ಬಾಗಂಬರಿ ಗದ್ದಿ ಮಠಕ್ಕೆ ಕೊಂಡೊಯ್ಯಲಾಯಿತು. ನಿಂಬೆಗಿಡದ ಬುಡದಲ್ಲಿ ಸ್ವಾಮಿಯ ಸಮಾಧಿ ಮಾಡಲಾಯಿತು. ಮರಣೋತ್ತರ ಪರೀಕ್ಷೆ ನಡೆಯುವ ಸ್ಥಳದ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿತ್ತು.

ಇದನ್ನೂ ಓದಿ: ಮಹಾಂತ ನರೇಂದ್ರ ಗಿರಿ ಸಾವಿಗೆ ಬ್ಲ್ಯಾಕ್​ಮೇಲ್ ತಿರುವು ಕೊಟ್ಟ ಮರಣಪತ್ರ ಬರೆದವರು ಯಾರು? ಪತ್ರದಲ್ಲಿ ಏನಿದೆ?

ಇದನ್ನೂ ಓದಿ: ಬಾಗಂಬರಿ ಮಠದಲ್ಲಿ ಡೆತ್​ನೋಟ್​ ಪತ್ತೆ: ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು

(CBI Commence Probe into Death of Akhara Parishad President Narendra Giri)

Read Full Article

Click on your DTH Provider to Add TV9 Kannada