ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Mallikarjun Kharge: ಖರ್ಗೆ ಅವರ ಹಿರಿತನ ಮತ್ತು ಅವರ ಸ್ಥಾನವನ್ನ ಪರಿಗಣಿಸಿ ಮೊದಲನೇ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು - ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ

ನೂತನ ರಾಷ್ಟ್ರಪತಿ ಮುರ್ಮು ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ( Union Minister of Parliamentary Affairs Minister Pralhad Joshi) ಸ್ಪಷ್ಟಪಡಿಸಿದ್ದಾರೆ. ಇಂದು ನಡೆದ ರಾಷ್ಟ್ರಪತಿ ಪದಗ್ರಹಣದ ಕಾರ್ಯಕ್ರಮದಲ್ಲಿ (Draupadi Murmu Oath Taking) ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ (Mallikarjun Kharge) ಸರಿಯಾದ ಆಸನ ವ್ಯವಸ್ಥೆ ಮಾಡಿರಲಿಲ್ಲ ಎಂದು (Seating Row) ಕಾಂಗ್ರೆಸ್ ಆರೋಪಿಸಿತ್ತು. ಈ ಬಗ್ಗೆ ರಾಜ್ಯಸಭಾ ಸಭಾಪತಿ ಅವರಿಗೆ ಕಾಂಗ್ರೆಸ್ ಸಂಸದರು ಪತ್ರ ಬರೆದಿದ್ದರು.
ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಪ್ರಲ್ಹಾದ್ ಜೋಶಿ ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಅವರಿಗೆ ಶಿಷ್ಟಾಚಾರದ ಪ್ರಕಾರ ಅಪಮಾನ ಆಗಿಲ್ಲ ಎಂದಿದ್ದಾರೆ. ಕೇಂದ್ರ ಗೃಹ ಇಲಾಖೆ ನಿಯಮದ ಪ್ರಕಾರ ಕೇಂದ್ರ ಸರ್ಕಾರದ ಎಲ್ಲ ಕ್ಯಾಬಿನೆಟ್ ಸಚಿವರ ಆಸನದ ಬಳಿಕ ವಿರೋಧ ಪಕ್ಷದ ನಾಯಕರಿಗೆ ಆಸನ ಕಲ್ಪಿಸಬೇಕು ಅಂತಿದೆ. ಆ ಪ್ರಕಾರ ಆಸನ ಕಲ್ಪಿಸುವುದಾದರೆ ಖರ್ಗೆ ಅವರಿಗೆ ಮೂರನೇ ಸಾಲಿನಲ್ಲಿ ಆಸನ ದೊರೆಯುತ್ತಿತ್ತು, ಆದರೆ ಖರ್ಗೆ ಅವರ ಹಿರಿತನ ಮತ್ತು ಅವರ ಸ್ಥಾನವನ್ನ ಪರಿಗಣಿಸಿ ಮೊದಲನೇ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು.
ಮೊದಲನೇ ಸಾಲಿನಲ್ಲಿಯೂ ಕಾರ್ನರ್ ನಲ್ಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು, ತಕ್ಷಣ ನಮ್ಮ ಅಧಿಕಾರಿಗಳು ಮೊದಲನೇ ಸಾಲಿನ ಸೆಂಟರ್ ನಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು, ಆದರೆ ಖರ್ಗೆ ಅವರು ಅಧಿಕಾರಿಗಳ ಮನವಿಯನ್ನ ನಿರಾಕರಿಸಿದ್ದರು.
ಇನ್ನು ಕಳೆದ ಶನಿವಾರ ಲೋಕಸಭೆ ಹಾಗು ರಾಜ್ಯಸಭೆ ವತಿಯಿಂದ ಸೆರ್ಮನಿಯಲ್ಲಿ ಖರ್ಗೆ ಅವರಿಗೆ ಪ್ರಧಾನಿ ಅವರ ಪಕ್ಕದಲ್ಲಿಯೇ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಬೇರೆಯಾಗಿರುತ್ತೆ, ಏಕೆಂದರೆ ಈ ಕಾರ್ಯಕ್ರಮವನ್ನ ಸಂಸದೀಯ ಇಲಾಖೆ ನಡೆಸುವುದರಿಂದ ಆಸನದ ವ್ಯವಸ್ಥೆ ಕಲ್ಪಿಸುವುದು ನಮ್ಮ ಇಲಾಖೆಗೆ ಬಿಟ್ಟಿದ್ದಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಪಕ್ಕದಲ್ಲಿಯೇ ಆಸನ ಕಲ್ಪಿಸಿದ್ದರು ಖರ್ಗೆ ಅವರು ಅಂದು ಗೈರುಹಾಜರಾಗಿದ್ದರು ಎಂದು ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
Respecting the position and seniority of @kharge ji, he was offered to be seated in the first row during today's oath ceremony despite the order of precedence. Making issue out of this is very unfortunate and I pity Congress for this. pic.twitter.com/HXmqt6azoO
— Pralhad Joshi (@JoshiPralhad) July 25, 2022