ಕೇಂದ್ರ ಸಚಿವ ಮತ್ತು ಪ್ರಮುಖ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ದೆಹಲಿಯ ಆಸ್ಪತ್ರೆಯೊಂದರಲ್ಲಿ ಇಂದು ನಿಧನ ಹೊಂದಿದರು. ಇತ್ತೀಚಿಗಷ್ಟೇ ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರಿಗೆ 74 ವರ್ಷ ವಯಸ್ಸಾಗಿತ್ತು. ಭಾರತದ ಪ್ರಮುಖ ದಲಿತ ನಾಯಕರಲ್ಲೊಬ್ಬರಾಗಿದ್ದ ಪಾಸ್ವಾನ್ ಕಳೆದ ಕೆಲವು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುಟುಂಬದ ಮೂಲಗಳ ಪ್ರಕಾರ ಅವರು ಸುದೀರ್ಘ ಅವಧಿಯಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಟ್ವೀಟ್ ಮೂಲಕ ಸಾವಿನ ಸುದ್ದಿಯನ್ನು ಹೇಳಿರುವ ಅವರ ಮಗ ಮತ್ತು ಲೋಕ್ ಜನಶಕ್ತಿ ಪಕ್ಷದ ಅಧ್ಯಕ್ಷ […]

ಕೇಂದ್ರ ಸಚಿವ ಮತ್ತು ಪ್ರಮುಖ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ

Updated on: Oct 08, 2020 | 9:38 PM

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ದೆಹಲಿಯ ಆಸ್ಪತ್ರೆಯೊಂದರಲ್ಲಿ ಇಂದು ನಿಧನ ಹೊಂದಿದರು. ಇತ್ತೀಚಿಗಷ್ಟೇ ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರಿಗೆ 74 ವರ್ಷ ವಯಸ್ಸಾಗಿತ್ತು.

ಭಾರತದ ಪ್ರಮುಖ ದಲಿತ ನಾಯಕರಲ್ಲೊಬ್ಬರಾಗಿದ್ದ ಪಾಸ್ವಾನ್ ಕಳೆದ ಕೆಲವು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುಟುಂಬದ ಮೂಲಗಳ ಪ್ರಕಾರ ಅವರು ಸುದೀರ್ಘ ಅವಧಿಯಿಂದ ಹೃದ್ರೋಗದಿಂದ ಬಳಲುತ್ತಿದ್ದರು.

ಟ್ವೀಟ್ ಮೂಲಕ ಸಾವಿನ ಸುದ್ದಿಯನ್ನು ಹೇಳಿರುವ ಅವರ ಮಗ ಮತ್ತು ಲೋಕ್ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್, ‘‘ಪಪ್ಪ, ನೀವೀಗ ಈ ಲೋಕದಲ್ಲಿಲ್ಲ, ಆದರೆ ನೀವೆಲ್ಲಿದ್ದರೂ ನನ್ನೊಂದಿಗೆ ಸದಾ ಇರುತ್ತೀರೆಂದು ನನಗೆ ಗೊತ್ತಿದೆ. ಮಿಸ್ ಯೂ ಪಪ್ಪ’’ ಎಂದಿದ್ದಾರೆ.