ನವದೆಹಲಿ: ಸಿಲ್ವರ್ಲೈನ್ ಯೋಜನೆಗೆ (SilverLine Project)ಸಂಬಂಧಿಸಿದಂತೆ ಕೇರಳ (Kerala) ಸರ್ಕಾರವು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕೇಂದ್ರ ಸಚಿವ ವಿ.ಮುರಳೀಧರನ್ (V Muraleedharan) ಆರೋಪಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು ಈ ಯೋಜನೆಗೆ ರೈಲ್ವೆ ಸಚಿವಾಲಯದ ಒಪ್ಪಿಗೆ ಇದೆ ಎಂಬ ವದಂತಿ ಹಬ್ಬಿದೆ.ಯಾವುದೇ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ನಡೆಸಿಲ್ಲ. ಮನೆಗಳ ಮೇಲೆ ದಾಳಿ ಮಾಡಿ ಈ ಯೋಜನೆಗೆ ಸರ್ವೇ ಕಲ್ಲುಗಳನ್ನು ಸ್ಥಾಪನೆ ಮಾಡಲಾಗುತ್ತದೆ. ನಿಯಮಗಳನ್ನು ಪಾಲಿಸದೆಯೇ ಪ್ರಕ್ರಿಯೆ ಮುಂದುವರಿದಿದೆ. ಕೇರಳದಲ್ಲಿ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಿಲ್ವರ್ ಲೈನ್ ಯೋಜನೆ ನಿಲ್ಲಿಸಲು ಕೇಂದ್ರ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ಹೆಸರಲ್ಲಿ ಸರ್ವೇ ಕಲ್ಲುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Full Remarks : Discussion on the working of the Ministry of Railways
https://t.co/OX55zaHFOz via @YouTube @sansad_tv
— V Muraleedharan / വി മുരളീധരൻ (@VMBJP) March 23, 2022
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜಕೀಯ ಜೀವನದಲ್ಲಿ ಸಿಲ್ವರ್ಲೈನ್ ‘ವಾಟರ್ ಲೂ’ ಆಗಲಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ. ಶಬರಿಮಲೆ ವಿಚಾರದಲ್ಲಿ ತಳೆದ ನಿಲುವಿಗೆ ದೊಡ್ಡ ಹಿನ್ನಡೆ ಮರುಕಳಿಸಲಿದೆ. ಸಚಿವರು ಮತ್ತು ಮುಖಂಡರ ಪ್ರತಿಕ್ರಿಯೆಗಳು ಡಿಪಿಆರ್‌ನಂತೆ ಅಸ್ಪಷ್ಟವಾಗಿದೆ ಎಂದು ಮುಲ್ಲಪ್ಪಳ್ಳಿ ಹೇಳಿದರು.
ರಾಜ್ಯಸಭೆಯಲ್ಲಿ ಕೈ ರೈಲ್ ವಿಷಯ ಪ್ರಸ್ತಾಪಿಸಿದ ಸಂಸದ ಜಾನ್ ಬ್ರಿಟಾಸ್
ಸಂಸದ ಜಾನ್ ಬ್ರಿಟಾಸ್ ಕೆ ರೈಲ್ ಯೋಜನೆಯ ವಿವರಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತುತಪಡಿಸಿದರು. ಕೆ ರೈಲ್ ಯೋಜನೆಗೆ ಕೇಂದ್ರ ಏಕೆ ಅಡ್ಡಿಪಡಿಸುತ್ತಿದೆ ಎಂದು ಪ್ರಶ್ನಿಸಿದ ಅವರು ಕೇಂದ್ರ ಮಾಡುತ್ತಿರುವ ಕೀಳುಮಟ್ಟದ ರಾಜಕಾರಣ ಕೊನೆಗೊಳಿಸಬೇಕು ಎಂದು ಹೇಳಿದ್ದಾರೆ. ಅದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಜತೆಯಾಗಿ ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ. ಜಾನ್ ಬ್ರಿಟಾಸ್ ಭಾಷಣಕ್ಕೆ ಕೇಂದ್ರ ಸಚಿವ ವಿ ಮುರಳೀಧರನ್ ವಿರೋಧ ವ್ಯಕ್ತಪಡಿಸಿದ್ದು, ಜಾನ್ ಬ್ರಿಟಾಸ್ ಕೂಡಾ ಮುರಳೀಧರನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುರಳೀಧರನ್ ಪ್ರತಿಭಟನಾಕಾರರನ್ನು ಸೇರಿಕೊಂಡು ಕೆ ರೈಲ್ ವಿರುದ್ಧ ಪ್ರತಿಭಟಿಸಲು ದೇಶಾದ್ಯಂತ ಮೆರವಣಿಗೆ ನಡೆಸಿದರು ಎಂದಿದ್ದಾರೆ ಬ್ರಿಟಾಸ್. ಇ ಶ್ರೀಧರನ್ ಅವರದ್ದು ದ್ವಂದ್ವ ನೀತಿಯಾಗಿದ್ದು, ಕೊಂಕಣ ರೈಲ್ವೆ ನಿರ್ಮಾಣವಾದಾಗ ಇಲ್ಲದ ಪರಿಸರ ಸಮಸ್ಯೆ ಅವರಿಗೆ ಈಗ ಎದುರಾಗಿದೆ. ರೈಲ್ವೆ ಅಭಿವೃದ್ಧಿಯಲ್ಲಿ ಕೇರಳ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ರಾಜ್ಯ ಎಂದು ಬ್ರಿಟಾಸ್ ಹೇಳಿದ್ದಾರೆ.
ಸಿಲ್ವರ್ಲೈನ್ನಲ್ಲಿ ಪಾಲು ಹೊಂದಿರುವ ರೈಲ್ವೇ ಸಚಿವರು ಯೋಜನೆ ವಿರೋಧಿಸುವವರ ಜತೆ ಕೈಜೋಡಿಸುತ್ತಿದ್ದಾರೆ. ಸಚಿವರು ಬೆಂಕಿಗೆ ಎಣ್ಣೆ ಸುರಿಯುತ್ತಿದ್ದಾರೆ. ರೈಲ್ವೆ ಅಭಿವೃದ್ಧಿಯಲ್ಲಿ ರಾಜ್ಯಗಳು ಭಾಗಿಯಾಗಬಹುದು ಎಂದು ಮೋದಿ ಸಂಪುಟ ನಿರ್ಧರಿಸಿದೆ. ಶೇ 49 ರಷ್ಟು ಪಾಲು ಹೊಂದಿರುವ ರೈಲ್ವೆ ಸಚಿವರು ಯೋಜನೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಬ್ರಿಟಾಸ್ ರಾಜ್ಯಸಭೆಯಲ್ಲಿ ಆರೋಪಿಸಿದರು.
ದೇಶಕ್ಕೆ ಎಕ್ಸ್‌ಪ್ರೆಸ್‌ವೇಗಳು ಬೇಕು ಎಂದು ಸಚಿವರು ಹೇಳುತ್ತಿದ್ದು, ಸಿಲ್ವರ್ ಲೈನ್ ಅನ್ನು ಸಚಿವರು ಏಕೆ ವಿರೋಧಿಸುತ್ತಿದ್ದಾರೆ? ಎಂದು ಬ್ರಿಟಾಸ್ ಪ್ರಶ್ಶಿಸಿದ್ದಾರೆ. ಇ ಶ್ರೀಧರನ್ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಪಾಲಕ್ಕಾಡ್ ನಲ್ಲಿ ಕಚೇರಿಯನ್ನು ತೆರೆಯಲಾಯಿತು. ಬೆಟ್ಟಗಳನ್ನು ಅಗೆದು, ಜಲಾಶಯಗಳನ್ನು ಮುಚ್ಚಿ ಕೊಂಕಣ ಮಾರ್ಗವನ್ನು ಮಾಡಿದ ಇ ಶ್ರೀಧರನ್ ಅವರೇ ಈಗ ಕೆ ರೈಲಿನಿಂದ ಪರಿಸರಕ್ಕೆ ಹಾನಿ ಎಂದು ಹೇಳುತ್ತಿರುವುದು. ಇಂತಹ ಪಕ್ಷದ ರಾಜಕೀಯ ಒತ್ತಡಕ್ಕೆ ರೈಲ್ವೆ ಸಚಿವರು ಮಣಿಯಬಾರದು ಎಂದು ಸಂಸದ ಜಾನ್ ಬ್ರಿಟಾಸ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Watch: ಸ್ವಚ್ಛ ಮಾಡಲು ಚರಂಡಿಗಿಳಿದ ಪೂರ್ವ ದೆಹಲಿಯ ಎಎಪಿ ಕೌನ್ಸಿಲರ್, ನಂತರ ಸಿನಿಮಾ ಶೈಲಿಯಲ್ಲಿ ಕ್ಷೀರ ಸ್ನಾನ